Sanchita Ugale Dies By Suicide
Sanchita Ugale Dies By Suicide: ಕುಂಕುಮ್ ಭಾಗ್ಯ, ಸಾಜನ್ ಘರ್ ಮತ್ತು ದಿಲ್ವಾಲಿ ದುಲ್ಹಾ ಲೇ ಜಾಯೇಗಿ ಸೇರಿದಂತೆ ಹಿಂದಿಯಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್ಗಳಲ್ಲಿ ನಟಿಸುವ ಮೂಲಕ ಫೇಮಸ್ ಆಗಿದ್ದ ನಟಿ ಸಂಗೀತಾ ಉಗಾಲೆ(22) ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಮುಂಬೈನ ನಲಸೋಪಾರ ಪೂರ್ವದ ಆಚೋಲೆ ಗ್ರಾಮದಲ್ಲಿರುವ ಸಾಯಿ ಸಂತೋಷಿ ಕಟ್ಟಡದಲ್ಲಿರುವ ಅವರ ನಿವಾಸದಲ್ಲಿ, ನಟಿ ಸಂಚಿತಾ ಉಗಾಲೆ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಉದಯೋನ್ಮುಖ ನಟಿ ನಿಧನಕ್ಕೆ ಹಿಂದಿ ಕಿರುತರೆ ಮತ್ತು ಬಾಲಿವುಡ್ ಸಿನಿಮಾ ರಂಗ ಸಂತಾಪ ವ್ಯಕ್ತಪಡಿಸಿದೆ
ನಡೆದಿದ್ದೇನು?
ಜೂನ್14ರಂದು ರಾತ್ರಿ ಮನೆಯಲ್ಲಿ ಯಾರೂ ಇರಲಿಲ್ಲ. ಸಂಚಿತಾರ ಸಹೋದರಿ ಹೊರಗೆ ಹೋಗಿದ್ದರು. ಸುಮಾರು 7 ರಿಂದ 7:30ರ ರಾತ್ರಿ ತನ್ನ ಬೆಡ್ರೂಂನಲ್ಲಿರು ಫ್ಯಾನ್ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ಕುಟುಂಬಸ್ಥರು ಆಕೆಯನ್ನು ಕೂಡಲೇ ವಸಾಯಿ-ವಿರಾರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದುಕೊಂಡು ಹೋದರು ಬದುಕುಳಿಯಲಿಲ್ಲ ಎನ್ನಲಾಗಿದೆ.
ಸೀರಿಯಲ್ ಸಿನಿಮಾಕ್ಕೂ ಸೈ
ಸಂಚಿತಾ ಉಗಾಲೆ ಯವರಯ ಸಿನಿಮಾ ಮತ್ತು ಸೀರಿಯಲ್ಗಳಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಅವರಿಗೆ ಹೆಚ್ಚಾಗಿ ಫೇಮ್ ಕೊಟ್ಟಿದ್ದು ಕುಂಕುಮ್ ಭಾಗ್ಯ ಸೀರಿಯಲ್ ಅದಾದ ನಂತರ ವಾಗ್ಲೆ ಕಿ ದುನಿಯಾ. ಸುಕೂನ್, ದಿಲ್ವಾಲಿ ದುಲ್ಹಾಲೇ ಜಾಯೇಗಿ ಸೀರಿಯಲ್ನಲ್ಲಿ ತಮ್ಮ ಛಾಪು ಮೂಡಿಸಿದ್ದರು. ಇಷ್ಟೇ ಅಲ್ಲದೆ ಇತ್ತೀಚೆಗೆ ಒಟಿಟಿಯಲ್ಲಿ ನಟಿಸಲು ಶುರು ಮಾಡಿದ್ದರು. ಜೊತೆಗೆ ವಿಕ್ಕಿ ಕೌಶಲ್ ಜೊತೆಗಿನ ಛಾವಾ ಸಿನಿಮಾದಲ್ಲಿ ತಾರಾಬಾಯಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಮನೋಜ್ ಭಾಜಪೇಯಿ ನಟನೆಯ ಸೈಲೆನ್ಸ್ 2: ದಿ ನೈಟ್ ಔಲ್ ಬಾರ್ ಶೂಟೌಟ್ ಸಿನಿಮಾದಲ್ಲಿ ಮಿಂಚಿದ್ದರು.
ನೆಟ್ಟಿಗರು ಹೀಗಂದ್ರು
ನಟನೆಯಲ್ಲಿ ಸಕ್ರಿಯರಾಗಿದ್ದರೂ ಸಹ ಈ ನಿರ್ಧಾರಕ್ಕೆ ಅವರು ಬಂದಿದ್ಯಾಕೆ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೆ ಮಾಯಾ ಎನ್ನುವವರು ಇದು ಆತ್ಮಹತ್ಯೆಯಲ್ಲ ನಿಜಕ್ಕೂ ಕೊಲೆ ಇರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಈ ನಟಿ ಆತ್ಮಹತ್ಯೆ ಮಾಡಿಕೊಂಡಂತೆ ಕಾಣುತ್ತಿಲ್ಲ ಎಂದು ಸಂಚಿತಾ ಅವರ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ, (ಏಜೆನ್ಸೀಸ್).