- 3 ಈಡಿಯಟ್ಸ್ ಸಿನಿಮಾಕ್ಕೂ ಸೋನಮ್ ವಾಂಗ್‌ಚುಕ್ ಅವರಿಗೂ ಯಾವುದೇ ಸಂಬಂಧವಿಲ್ಲ.
- ರಾಂಚೋ ಪಾತ್ರಕ್ಕೂ ಸೋನಮ್ ವಾಂಗ್‌ಚುಕ್ ಅವರಿಗೆ ಸಂಬಂಧವಿಲ್ಲ, ಚತುರ್ ಹೇಳಿದ್ದು ತಪ್ಪು ಎಂದ ಆಮೀರ್
- ಸೋನಮ್ ಅವರನ್ನು ಗೌರವಿಸಲು ಯಾವುದೇ ಸಿನಿಮಾದ ಪಾತ್ರದ ಆಧಾರ ಮೇಲೆ ಗೌರವ ನೀಡುವ ಅವಶ್ಯಕತೆ ಇಲ್ಲ ಎಂದ ಆಮೀರ್
3 Idiots Sonam Wangchuk: 3 ಈಡಿಯಟ್ಸ್ ಸಿನಿಮಾಕ್ಕೂ ಸೋನಮ್ ವಾಂಗ್‌ಚುಕ್ ಅವರಿಗೂ ಯಾವುದೇ ಸಂಬಂಧವಿಲ್ಲ. ಈ ಸಿನಿಮಾ ಅವರ ಜೀವನಾಧಾರಿತವಾಗಿದ್ದು ಎನ್ನುವುದು ಸುಳ್ಳು. ಸಿನಿಮಾದ ಕತೆ ಬರೆದವರಿಗೂ, ಇದು ಅವರ ಜೀವನಕ್ಕೆ ಹೋಲುತ್ತದೆ ಎನ್ನುವ ಅರಿವಿರಲಿಲ್ಲ. ಅವರು ಯಾರು ಎಂದು ನಮಗೆ ಯಾರಿಗೂ ತಿಳಿದಿರಲಿಲ್ಲ. ಚತುರ್ ಹೇಳಿದ್ದು ತಪ್ಪು ಎಂದು ನಟ ಆಮೀರ್ ಖಾನ್ ಅವರು ಲಂಡನ್ನ ಇಂಡಿಯನ್ ಫಿಲಂ ಫೆಸ್ಟಿವಲ್ನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ
ಇತ್ತೀಚೆಗೆ 3 ಈಡಿಯಟ್ಸ್ ಸಿನಿಮಾದಲ್ಲಿ ಚತುರ್ ಪಾತ್ರದಲ್ಲಿ ನಟಿಸಿರುವ ನಟ ಓಮ್ನಿ ವೈದ್ಯ ಅವರು ಸೋನಮ್ ಅವರ ಪ್ರತಿಭಟನೆಗೆ ಬೆಂಬಲ ನೀಡಿದ್ದರು. ಅಲ್ಲದೆ, ಅವರ ಜೀವನಾಧಾರಿತವಾಗಿ ನಿರ್ಮಾಣವಾದ ಸಿಬನಿಮಾದಲ್ಲಿ ನಟಿಸಿದ ಪ್ರಮುಖ ಪಾತ್ರಧಾರಿಗಳು ಈ ಬಗ್ಗೆ ಮಾತನಾಡಬೇಕು ಎಂದು ಕೇಳಿಕೊಂಡಿದ್ದರು. ಈ ಬಗ್ಗೆ ಆಮೀರ್ ಖಾನ್ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಚತುರ್ ಹೇಳಿದ್ದು ತಪ್ಪು
'3 ಈಡಿಯಟ್ಸ್ ಸಿನಿಮಾದಲ್ಲಿ ಬರುವ ರಾಂಚೋ ಪಾತ್ರವು ಸೋನಮ್ ಅವರ ಜೀವನಾಧರಿತ ಸಿನಿಮಾ ಎನ್ನಲಾಗುತ್ತಿದೆ. ಆದರೆ ಅದು ನಿಜ ಅಲ್ಲ. ಇತ್ತೀಚೆಗೆ ಓಮ್ನಿ ವೈದ್ಯ ಮಾತನಾಡಿದ್ದ ವಿಡಿಯೋ ನೋಡಿದ್ದೆ. ಆದರೆ ಅದು ತಪ್ಪು ಮಾಹಿತಿ. ನಮಗೆ ಸೋನಮ್ ವಾಂಗ್‌ಚುಕ್ ಯಾರು ಎಂದೇ ತಿಳಿದಿರಲಿಲ್ಲ. ಸಿನಿಮಾದ ಬರಹಗಾರರಾದ ರಾಜ್ ಕುಮಾರ್ ಹಿರಾನಿ ಮತ್ತಿ ಅಭಿಜಿತ್ ಜೋಶಿ ಯಾರಿಗೂ ಈ ಬಗ್ಗೆ ತಿಳಿದಿರಲಿಲ್ಲ' ಎಂದು ಆಮೀರ್ ಖಾನ್ ಸ್ಪಷ್ಟನೆ ಕೊಟ್ಟರು.
ಸೋನಮ್ ವಾಂಗ್‌ಚುಕ್ ಅವರ ಹೋರಾಟದ ಹಾದಿ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಮಾಡುತ್ತಿರುವ ಕೆಲಸ ನಿಜಕ್ಕೂ ಒಳ್ಳೆಯದು. ಅವರಿಗೆ ಗೌರವಿಸಲು 3 ಈಡಿಯಟ್ಸ್ ಸಿನಿಮಾದ ಪಾತ್ರ ಆಧಾರವಾಗಿಟ್ಟುಕೊಂಡು ಗೌರವನೀಡಬೇಕು ಎಂದೇನಿಲ್ಲ. ಅವರ ಆರೋಗ್ಯದ ಬಗ್ಗೆ ಆತಂಕವಿದೆ. ಎಲ್ಲವು ಸುಗವಾಗಿ ಕೊನೆಗೊಳ್ಳಬೇಕು ಎಂದು ಆಮೀರ್ ಖಾನ್ ಹೇಳಿದ್ದಾರೆ.
ಸೋನಮ್ ಉಪವಾಸ ಸತ್ಯಾಗ್ರಹ
ನೀಟ್ ಸೇರಿದಂತೆ ಪ್ರತಿಷ್ಠಿತ ಪರೀಕ್ಷಾ ಪತ್ರಿಕೆಗಳಲ್ಲಿ ಉಂಟಾದ ಲೋಪಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸುತ್ತಿದೆ. ಇದಕ್ಕೆ ಸೋನಮ್ ವಾಂಗ್‌ಚುಕ್ ಅವರು ಬೆಂಬಲ ನೀಡಿದ್ದು, 20ನೇ ದಿನಕ್ಕೆ ಅವರ ಉಪವಾಸ ಸತ್ಯಾಗ್ರಹ ಕಾಲಿಟ್ಟಿದದೆ. ಬಾಲಿವುಡ್ ನಟ ಹಾಗೂ ನಟಿಯರು, ಸಾಹಿತಿಗಳು ಅವರ ಬೆಂಬಲಕ್ಕೆ ನಿಂತಿದ್ದಾರೆ.(ಏಜೆನ್ಸೀಸ್).