ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಗಾಯಕ, ಸಂಗೀತ ನಿರ್ದೇಶಕ, ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿರುವ ಚಿತ್ರ "ಸೂತ್ರಧಾರಿ'. ಈಗಾಗಲೇ ಚಿತ್ರದ "ಡ್ಯಾಶ್' ಸಾಂಗ್ ರಿಲೀಸ್ ಆಗಿದ್ದು, 1.7 ಕೋಟಿಗೂ ಅಧಿಕ ಬಾರಿ ವೀಕ್ಷಣೆಯಾಗಿ ಯೂಟ್ಯೂಬ್ನಲ್ಲಿ ವೈರಲ್ ಆಗಿದೆ. ಇದೀಗ ವಿಜಯ್ ಈಶ್ವರ್ ಬರೆದಿರುವ "ಟ್ರೆಂಡಿಂಗಲ್ ಬರ್ಬೇಕಂದ್ರೆ ಏನ್ ಮಾಡ್ಬೇಕು?' ಎಂಬ ಹಾಡು ಬಿಡುಗಡೆಯಾಗಿದ್ದು, ಸಾಹಿತ್ಯದಂತೆಯೇ ಕೇವಲ ಒಂದು ದಿನದಲ್ಲಿ 40 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆಗೊಂಡಿರುವ ಈ ಹಾಡು ಕೂಡ ಟ್ರೆಂಡಿಂಗ್ನಲ್ಲಿದೆ.
ಇದನ್ನೂ ಓದಿ : ಫಿಕ್ಸ್ ಆಯ್ತು ‘ಸಲಾರ್’ ಟ್ರೇಲರ್ ರಿಲೀಸ್ ಡೇಟ್?
ಖುದ್ದು ಚಂದನ್ ಶೆಟ್ಟಿ ಈ ಹಾಡಿಗೆ ಸಂಗೀತ ನೀಡಿ, ಧ್ವನಿಯಾಗಿದ್ದು, ಮೋಹನ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗಷ್ಟೆ ಹಾಡು ಬಿಡುಗಡೆ ಸಮಾರಂಭದಲ್ಲಿ ಚಂದನ್ ಶೆಟ್ಟಿ, "ಮೊದಲ ಸಾಂಗ್ "ಡ್ಯಾಶ್' ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಹೀಗಾಗಿ, ಅದನ್ನು ಮೀರಿಸುವ ಮತ್ತೊಂದು ಹಾಡು ಕೊಡುವ ಜವಾಬ್ದಾರಿ ನನ್ನ ಮೇಲಿತ್ತು. ಈ ಸಾಂಗ್ ಕೂಡ ಎಲ್ಲರಿಗೂ ಇಷ್ಟವಾಗುವ ಭರವಸೆಯಿದೆ' ಎಂದು ಹೇಳಿಕೊಂಡರು.
ಇದನ್ನೂ ಓದಿ : ‘ಭಗವಂತ ಕೇಸರಿ’ ಚಿತ್ರತಂಡದಿಂದ ಹೊರಬಿತ್ತು ಹೊಸ ಅಪ್ಡೇಟ್!
ನಿರ್ಮಾಪಕ ನವರಸನ್, "ಇನ್ನೊಂದು ಹಾಡು ಮುಗಿದರೆ ಚಿತ್ರೀಕರಣ ಮುಕ್ತಾಯವಾಗಲಿದೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಮಾಡಲಿದ್ದೇವೆ' ಎಂದು ಮಾಹಿತಿ ನೀಡಿದರು. ಚಂದನ್ ಶೆಟ್ಟಿಗೆ ಅಪೂರ್ವ ನಾಯಕಿಯಾಗಿದ್ದು ಪ್ರಶಾಂತ್ ನಟನ, ಗಿರೀಶ್, ಗಣೇಶ್ ನಾರಾಯಣ್ ತಾರಾಗಣದಲ್ಲಿದ್ದಾರೆ.