ಒಂದೇ ಮನೆಯಲ್ಲಿ ತುಂಬಾ ನಟರು ಇದ್ದರೇ, ಅವರಿಗೆ ಒಬ್ಬರಿಗೆ ಒಬ್ಬರು ಸಮಯ ಮಿಸಲಿಡುವುದು ತುಂಬಾ ಕಷ್ಟದ ಸಂಗತಿ. ಅದರಲ್ಲೂ, ಆ ಇಬ್ಬರು ನಟರು ಗಂಡ-ಹೆಂಡತಿ ಆದರೆ ಇನ್ನೂ ಕಷ್ಟ. ಹೀಗಿದ್ದರೂ, ನಟ ಚಂದನ್ ಕುಮಾರ್ ಮತ್ತು ಅವರ ಪತ್ನಿ ನಟಿ ಕವಿತಾ ಗೌಡ ಮಾತ್ರ ಒಬ್ಬರಿಗೊಬ್ಬರು ಸಮಯಕೊಡುವುದರ ಜತೆಗೆ ತುಂಬಾ ಸಂತೋಷದಿಂದ ಕಾಲಕಳೆಯುತ್ತಾರೆ.
ಇತ್ತೀಚೆಗೆ, ಚಂದನ್ ತೆಲುಗಿನ ಒಂದು ಖ್ಯಾತ ಸೀರಿಯಲ್ನಲ್ಲಿ ನಟಿಸಲು ಆರಂಭಿಸಿದ್ದಾರೆ. ಹಾಗಾಗಿ, 'ಶ್ರೀಮತಿ ಶ್ರೀನಿವಾಸ್' ಸೀರಿಯಲ್ಗೆಂದು ಹೈದರಾಬಾದ್ನಲ್ಲಿ ಇರುವ ನಟ ದಿನನಿತ್ಯ ಜಿಮ್ಗೆ ಹೋಗಿ ತಮ್ಮ ದೇಹವನ್ನು ಗಟ್ಟಿಗೊಳಿಸುತ್ತಿದ್ದಾರೆ. ಆದರೆ, ಮೊನ್ನೆ ಮಾತ್ರ ಪತಿಯ ಜೊತೆ ನಟಿ ಕವಿತಾ ಕೂಡ ಹೈದರಾಬಾದ್ನ ಮಾರಿಯೋಟ್ ಹೋಟೆಲ್-ಕನ್ವೆನ್ಷನ್ ಸೆಂಟರ್ನ ಜಿಮ್ನಲ್ಲಿ ದೇಹ ದಂಡಿಸಿ ಗಂಡನ ಜತೆ ಒಂದಿಷ್ಟು ಸಮಯ ಎಂಜಾಯ್ ಮಾಡಿದ್ದಾರೆ.
ಜಿಮ್ನಲ್ಲಿ ದೇಹ ದಂಡಿಸಿದ ಈ ತಾರಾ ಜೋಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋ ಹಂಚಿಕೊಂಡಿದ್ದಾರೆ. ಆ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸುಮಾರು 15,000ಕ್ಕೂ ಹೆಚ್ಚು ಲೈಕ್ಸ್ ಪಡೆದಿದ್ದು, ಸಖತ್ ಶೇರ್ಗಳನ್ನು ಗಿಟ್ಟಿಸಿಕೊಳ್ಳುತ್ತಿದೆ. ಈ ಫೋಟೋಗೆ ನಟ ಚಂದನ್, 'ನನ್ನ ಜೊತೆ ಜಿಮ್ನಲ್ಲಿ ಕಾಲಕಳೆದಿದ್ದಕ್ಕೆ ಧನ್ಯವಾದಗಳು ಹೆಂಡತಿ (ಕವಿತಾ)', ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಮತ್ತು, ಇದು ಜಿಮ್ ನಲ್ಲಿ ಮೊದಲ ದಿನ ಎಂದು ಹೇಳಿದ್ದಾರೆ ನಟ ಚಂದನ್.