ಸಿನಿವಾಣಿ

ಭಯೋತ್ಪಾದಕರ ಹೆಸರು ಭೋಲಾ, ಶಂಕರ್​ ಎಂದು ಬದಲಾವಣೆ; ನೆಟ್​ಫ್ಲಿಕ್ಸ್​ ಕಂಟೆಂಟ್​ ಹೆಡ್​ಗೆ ಕೇಂದ್ರ ಸಚಿವಾಲಯ ಸಮನ್ಸ್​

"ರಾ.ಒನ್​', "ಮುಲ್ಕ್​', "ಥಪ್ಪಡ್​', "ಆರ್ಟಿಕಲ್​ 15', "ಭೀಡ್​' ಸೇರಿ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಅನುಭವ್​ ಸಿನ್ಹಾ ಆ್ಯಕ್ಷನ್​&ಕಟ್​ ಹೇಳಿರುವ ಮೊದಲ ವೆಬ್​ಸರಣಿ "ಐಸಿ 814: ದ ಕಂದಹಾರ್​ ಹೈಜಾಕ್​'. 1999ರಲ್ಲಿ ಇಂಡಿಯನ್​ ಏರ್​ಲೈನ್ಸ್​ನ ಐಸಿ 814 ವಿಮಾನವನ್ನಯ ಐವರು ಉಗ್ರರು ಹೈಜಾಕ್​ ಮಾಡಿದ್ದ ಟನೆ ಸುತ್ತ ಕಥೆ ಸಾಗುತ್ತದೆ. ಆ ವಿಮಾನದ ಪೈಲಟ್​ ಆಗಿದ್ದ ದೇವಿ ಶರಣ್​ ಅವರೇ ಬರೆದಿದ್ದ "್ಲೆ$ಟ್​ ಇನ್​ಟು ಫಿಯರ್​ : ದ ಕ್ಯಾಪ್ಟನ್ಸ್​ ಸ್ಟೋರಿ' ಬಯೋಗ್ರಫಿ ಆಧಾರಿತ ಸರಣಿಯಿದು. ನಾಸಿರುದ್ದೀನ್​ ಶಾ, ಪಂಕಜ್​ ಕಪೂರ್​, ವಿಜಯ್​ ವರ್ಮಾ, ದಿಯಾ ಮಿರ್ಜಾ, ಅರವಿಂದ್​ ಸ್ವಾಮಿ, ಪತ್ರಲೇಖಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಈ ಸರಣಿ ಇದೇ ಆ. 29ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಿತ್ತು. ರಿಲೀಸ್​ ಆದ ಐದೇ ದಿನಗಳಲ್ಲಿ "ಐಸಿ 814' ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಬಾಯ್ಕಾಟ್​ ನೆಟ್​ಫ್ಲಿಕ್ಸ್​ ಹ್ಯಾಷ್​ಟ್ಯಾಗ್​ ಜಾಲತಾಣದಲ್ಲಿ ಟ್ರೆಂಡ್​ ಆಗುವಂತೆ ಮಾಡಿದೆ.

ಹೈಜಾಕ್​ ಹಿನ್ನೆಲೆ:
ಪಾಕಿಸ್ತಾನ ಮೂಲದ ಹರ್ಕತ್​ ಉಲ್​ ಮುಜಾಹಿದೀನ್​ನ ಐವರು ಉಗ್ರರಾದ ಇಬ್ರಾಹಿಂ ಅಖ್ತರ್​, ಶಾಹಿದ್​ ಅಖ್ತರ್​ ಸಯೀದ್​, ಸನ್ನಿ ಅಹ್ಮದ್​ ಖಾಜಿ, ಜಹೂರ್​ ಮಿಸ್ತ್ರಿ ಮತ್ತು ಶಾಕಿರ್​ ಐಸಿ 814 ವಿಮಾನವನ್ನು 1999ರ ಡಿ. 24ರಂದು ಹೈಜಾಕ್​ ಮಾಡಿದ್ದರು. ಭಾರತದಲ್ಲಿ ಬಂಧಿತರಾಗಿದ್ದ ವಿವಿಧ ಭಯೋತ್ಪಾದಕ ಸಂಟನೆಗಳ ಮಸೂದ್​ ಅಜರ್​, ಅಹ್ಮದ್​ ಓಮರ್​ ಸಯೀದ್​ ಶೇಖ್​ ಮತ್ತು ಮುಷ್ತಾಖ್​ ಅಹ್ಮದ್​ ರ್ಜಗಾರ್​ರನ್ನು ಬಿಡುಗಡೆ ಮಾಡುವಂತೆ ಬೇಡಿಕೆಯಿಟ್ಟಿದ್ದರು. ಕಾಠ್ಮಂಡುವಿನಿಂದ ದೆಹಲಿಗೆ ಹೊರಟಿದ್ದ ಈ ವಿಮಾನದಲ್ಲಿ 176 ಪ್ರಯಾಣಿಕರು, 15 ಇಂಡಿಯನ್​ ಏರ್​ಲೈನ್ಸ್​ ಸಿಬ್ಬಂದಿ ಸೇರಿ 191 ಮಂದಿಯಿದ್ದರು. ಅವರ ರಕ್ಷಣೆಗಾಗಿ ಭಾರತ ಸರ್ಕಾರ ಉಗ್ರರ ಬೇಡಿಕೆಗೆ ಮಣಿಯಬೇಕಾಯಿತು.

ಕಾಂಟ್ರವರ್ಸಿಗೆ ಕಾರಣ?
ಐವರು ಉಗ್ರರು ಹೈಜಾಕ್​ ಸಮಯದಲ್ಲಿ ಚೀಫ್​, ಡಾಕ್ಟರ್​, ರ್ಬಗರ್​, ಭೋಲಾ ಮತ್ತು ಶಂಕರ್​ ಎಂಬ ಕೋಡ್​ನೇಮ್​ಗಳನ್ನು ಬಳಸಿದ್ದರು. ಇದೀಗ ಈ ವೆಬ್​ಸರಣಿಯಲ್ಲೂ ಅದೇ ಹೆಸರುಗಳನ್ನು ಬಳಸಿಕೊಳ್ಳಲಾಗಿದ್ದು, ಅವರ ನಿಜ ಹೆಸರುಗಳನ್ನು ಮರೆಮಾಚಲಾಗಿದೆ ಎಂದು ವೀಕ್ಷಕರು ಆರೋಪಿಸಿದ್ದಾರೆ. ಈ ಕುರಿತು ಜಾಲತಾಣದಲ್ಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸರಣ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದ್ದು, ನೆಟ್​ಫ್ಲಿಕ್ಸ್​ ಇಂಡಿಯಾ ಕಂಟೆಂಟ್​ ಹೆಡ್​ ಮೋನಿಕಾ ಶೇರ್ಗಿಲ್​ಗೆ ಸಮನ್ಸ್​ ನೀಡಿದೆ.