ಸಿನಿವಾಣಿ

ರೆಡ್​ ಕಾರ್ಪೆಟ್​ ಮೇಲೆ ದೀಪಿಕಾ: ಕಾನ್​ ಚಿತ್ರೋತ್ಸವದಲ್ಲಿ ಭಾರತೀಯರ ದಂಡು

ಪ್ರತಿಷ್ಠಿತ ಕಾನ್​ ಚಿತ್ರೋತ್ಸವದ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ನಾಳೆಯಿಂದ (ಮೇ 17) ಮೇ 28ರವರೆಗೂ ನಡೆಯುವ ಈ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಬಾರಿ ಭಾರತೀಯ ಚಿತ್ರರಂಗದಿಂದ ಹಲವು ನಟ-ನಟಿಯರು ಭಾಗವಹಿಸುತ್ತಿದ್ದಾರೆ.

ಈ ಬಾರಿ ಸ್ಪರ್ಧಾತ್ಮಕ ವಿಭಾಗದ ತೀರ್ಪುಗಾರರ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆ ಇರುವ ವಿಷಯ ಗೊತ್ತೇ ಇದೆ. ಅದರ ಜತೆಗೆ ಅವರು ಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಡೆಯುವ ರೆಡ್​ ಕಾರ್ಪೆಟ್​ ನಡಿಗೆಯಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.

ದೀಪಿಕಾ ಜತೆಗೆ ರೆಡ್​ ಕಾರ್ಪೆಟ್​ ಮೇಲೆ ನಡೆಯುವ ಭಾರತದ ಇನ್ನಿತರ ಸೆಲೆಬ್ರಿಟಿಗಳ ಪೈಕಿ ಎ.ಆರ್​. ರೆಹಮಾನ್​, ಪೂಜಾ ಹೆಗ್ಡೆ, ನಯನತಾರಾ, ಆರ್​. ಮಾಧವನ್​, ನವಾಜುದ್ದೀನ್​ ಸಿದ್ದೀಖಿ ಮುಂತಾದವರಿದ್ದಾರೆ. ಈ ಬಾರಿ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಸಹ ರೆಡ್​ ಕಾರ್ಪೆಟ್​ ಮೇಲೆ ನಡೆಯಬೇಕಿತ್ತು. ಆದರೆ, ಅಕ್ಷಯ್​ಗೆ ಕರೊನಾ ಪಾಸಿಟಿವ್​ ಆಗಿರುವುದರಿಂದ, ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ವಿಷಾಧ ವ್ಯಕ್ತಪಡಿಸಿದ್ದಾರೆ. ಕಾನ್​ ಚಿತ್ರೋತ್ಸವದಲ್ಲಿ ಮಾಧವನ್​ ನಿರ್ದೇಶನದ "ರಾಕೆಟ್ರಿ - ದಿ ನಂಬಿಯಾರ್​ ಎೆಕ್ಟ್​' ಸೇರಿದಂತೆ ಹಲವು ಚಿತ್ರಗಳು ಪ್ರದರ್ಶನ ಅಗಲಿದೆ. ಇದಲ್ಲದೆ, ಕಮಲ್​ ಹಾಸನ್​ ಅಭಿನಯದ ತಮಿಳು ಚಿತ್ರ "ವಿಕ್ರಮ್​'ನ ಟ್ರೇಲರ್​ ಬಿಡಗುಡೆ ಆಗಲಿದೆ.