ಸಿನಿವಾಣಿ

ಬುಲೆಟ್ ಪ್ರಕಾಶ್ ಸ್ಥಿತಿ ಗಂಭೀರ?

chetannadiger

ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದ ಕನ್ನಡದ ಜನಪ್ರಿಯ ನಗೆನಟ ಬುಲೆಟ್ ಪ್ರಕಾಶ್ ಅವರ ಸ್ಥಿತಿ ಗಂಭೀರ ಎಂದು ಹೇಳಲಾಗುತ್ತಿದೆ. ಬುಲೆಟ್ ಅವರನ್ನು ಸದ್ಯಕ್ಕೆ ಸಿಸಿಯೂನಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಬುಲೆಟ್ ಪ್ರಕಾಶ್ ಅವರನ್ನು ಇತ್ತೀಚೆಗೆ ನಗರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಚಿಕಿತ್ಸೆಗೆ ಬುಲೆಟ್ ಚಿಕಿತ್ಸೆಗೆ ಸ್ಪಂದಿಸಿದರಾದರೂ, ಕ್ರಮೇಣ ಅವರ ಆರೋಗ್ಯ ಗಂಭಿರವಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲವು ವರ್ಷಗಳಿಂದ ಬುಲೆಟ್ ಒಂದಲ್ಲಾ ಒಂದು ರೀತಿ ಆರೋಗ್ಯ ಸಮಸ್ಯೆಗೆ ಎದುರಿಸುತ್ತಲೇ ಇದ್ದಾರೆ. ತಮ್ಮ ಅತಿಯಾದ ತೂಕದಿಂದ ಗಮನಸೆಳೆದಿದ್ದ ಬುಲೆಟ್‌ಗೆ ಅದೇ ಅವರಿಗೆ ಶಾಪವಾಯಿತು ಎಂದರೆ ತಪ್ಪಿಲ್ಲ. ಒಂದು ಕಾಲಕ್ಕೆ 150 ಕೆಜಿ ಇದ್ದ ಬುಲೆಟ್, ವೈದ್ಯರ ಸಲಹೆ ಮೇರೆಗೆ ತೂಕ ಕಡಿಮೆ ಮಾಡಿಕೊಂಡರು. ತಮ್ಮ ಆಹಾರ ಪದ್ಧತಿಯನ್ನು ಸುಧಾರಿಸಿಕೊಂಡಿದ್ದರು. ಈ ಮಧ್ಯೆ ಜಾಂಡಿಸ್‌ನಿಂದ ಬಳಲುತ್ತಿದ್ದ ಅವರು, ಅದಕ್ಕೂ ಚಿಕಿತ್ಸೆ ಪಡೆದರು. ಇದೆಲ್ಲದರಿಂದ ಸಾಕಷ್ಟು ತೂಕ ಕಳೆದುಕೊಂಡು ಆಸ್ಪತ್ರೆಯಿಂದ ಹೊರಬಂದರು.

ಹೀಗೆ ಒಂದಲ್ಲಾ ಒಂದು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಬುಲೆಟ್, ಆದಷ್ಟು ಬೇಗ ಗುಣಮುಖರಾಗಲಿ ಎನ್ನುವುದೇ ಎಲ್ಲರ ಹಾರೈಕೆ.