ನಟಿ ಕಂಗನಾ ರಣಾವತ್​ (ಎಡ), ತಾಪ್ಸಿ ಪನ್ನು (ಬಲ) 
ಬಾಲಿವುಡ್

ನನ್ನ ಚೀಪ್​ ಕಾಪಿ... ನಟಿ ತಾಪ್ಸಿ ವಿರುದ್ಧ ಮತ್ತೆ ತೊಡೆತಟ್ಟಿದ ಕಂಗನಾ ರಣಾವತ್! ಏನಿದು ಬ್ಯೂಟಿಗಳ ಜಟಾಪಟಿ?

ಪ್ರಮುಖ ಮುಖ್ಯಾಂಶಗಳು

  • ತಮ್ಮನ್ನು ಪದೇ ಪದೇ ಕೆಣಕಿದ ಕಂಗನಾ ವಿರುದ್ಧ ತಾಪ್ಸಿ ಖಡಕ್ ತಿರುಗೇಟು
  • ಸಸ್ತಿ ಕಾಪಿ ಎಂಬ ಹೇಳಿಕೆಯ ಪೋಸ್ಟ್​ ಹಾಕಿ ಡಿಲೀಟ್ ಮಾಡಿದ ಕಂಗನಾ
  • ಡಿಲೀಟ್​ ಬೆನ್ನಲ್ಲೇ ಹೆಸರೇಳದೆ ಬಿಜೆಪಿ ಸಂಸದೆಗೆ ಟಕ್ಕರ್​ ಕೊಟ್ಟ ತಾಪ್ಸಿ ಪನ್ನು
ಮುಂಬೈ: ಬಾಲಿವುಡ್​ನ ಬೋಲ್ಡ್ ಬ್ಯೂಟಿ, ನಟಿ ಕಂಗನಾ ರಣಾವತ್, ಸಂಸದೆಯಾಗಿ ರಾಜಕೀಯಕ್ಕೆ ಎಂಟ್ರಿಕೊಟ್ಟರೂ ಸಹ ಸಿನಿಮಾ ಅಂಗಳದಲ್ಲಿ ಸದ್ದು ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಅದು ಪಾಸಿಟಿವ್ ಆಗಂತು ಅಲ್ಲ! ಎಂದಿನಂತೆ ನೆಗೆಟಿವ್ ಮತ್ತು ವಿವಾದದ ಹಾದಿಯಲ್ಲೇ. ಇದಕ್ಕೆ ಜ್ವಲಂತ ಸಾಕ್ಷಿ ಮೊತ್ತೋರ್ವ ನಟಿ ತಾಪ್ಸಿ ಪನ್ನು ಜತೆ ಮಾಡಿಕೊಂಡಿರುವ ತೆರೆಮರೆಯ ಕಿತ್ತಾಟ.
ಬಾಲಿವುಡ್​, ತೆಲುಗು ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ಅನೇಕ ಸಿನಿಪ್ರಿಯರನ್ನು ಮನರಂಜಿಸಿರುವ ತಾಪ್ಸಿ ಪನ್ನು, ಇಂದಿಗೂ ತಮ್ಮ ಚಿತ್ರದ ಕೆಲಸಗಳಲ್ಲಿ ಸಖತ್​ ಬಿಜಿಯಾಗಿದ್ದಾರೆ. ಇದರ ನಡುವೆಯೇ, ತಮ್ಮನ್ನು ಪದೇ ಪದೇ ಕೆಣಕಿದ ಕಂಗನಾ ವಿರುದ್ಧ ಇದೀಗ ಖಡಕ್ ತಿರುಗೇಟು ನೀಡಿದ್ದಾರೆ. ರಾಜಕೀಯದಲ್ಲಿ ಹೊಸದೇನೋ ಕೆಲಸ ಮಾಡಲಿದ್ದಾರೆ ಎಂಬುದರ ಅಪಾರ ನಿರೀಕ್ಷೆ ಇಟ್ಟುಕೊಂಡಿರುವ ಜನರಿಗೆ ಕಂಗನಾ ಈಗ ಹೊಸದೊಂದು ವಿವಾದವನ್ನು ಕೇಳುವಂತೆ ಮಾಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಕಂಗನಾ ಹಿಂದಿನ ಹೇಳಿಕೆಗೆ ಸಂದರ್ಶನವೊಂದರಲ್ಲಿ ಟಕ್ಕರ್ ಕೊಟ್ಟಿದ್ದ ತಾಪ್ಸಿಯನ್ನು ಹಿಂದಿಯಲ್ಲಿ ಸಸ್ತಿ ಕಾಪಿ ಎಂದು ಕರೆಯುವ ಮೂಲಕ ಅವರ ತಂದೆ-ತಾಯಿಯ ಬೆಳೆಸಿದ ರೀತಿಯನ್ನು ಪ್ರಶ್ನಿಸಿ, ಕಂಗನಾ ಪೋಸ್ಟ್ ಹಂಚಿಕೊಂಡರು. ಇದನ್ನು ಹಾಕಿದ ಕೆಲವೇ ಕ್ಷಣಗಳಲ್ಲಿ ಡಿಲೀಟ್​ ಕೂಡ ಮಾಡಿದರು. ಆದರೆ, ಮಾಧ್ಯಮಗಳ ಕಣ್ಣು ತಪ್ಪಿಸಲು ಸಾಧ್ಯವಾಗದ ಹಿನ್ನೆಲೆ ಇದೀಗ ಈ ವಿಚಾರ ಬಹಿರಂಗವಾಗಿದೆ. ಇದನ್ನು ನೋಡಿ ಸುಮ್ಮನಾಗದ ತಾಪ್ಸಿ, ಕಂಗನಾ ಹೆಸರನ್ನು ಎಲ್ಲಿಯೂ ಉಲ್ಲೇಖಿಸದೆ, ಈಗ ಸಾಬೀತಾಯಿತು ಎಂದು ಬರೆದುಕೊಂಡಿದ್ದಾರೆ.

ಅಷ್ಟಕ್ಕೂ ಏನಿದು ನಟಿಯರ ವಿವಾದ?

ಇತ್ತೀಚಿನ ಸಂದರ್ಶನವೊಂದರಲ್ಲಿ ತಾಪ್ಸಿ ಅವರಿಗೆ ಕಂಗನಾ ಜತೆಗಿನ ಹಳೆಯ ಜಗಳದ ಬಗ್ಗೆ ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿದ್ದ ತಾಪ್ಸಿ, "ನನ್ನ ಅಭಿಪ್ರಾಯಗಳು ನನ್ನನ್ನು ಬೆಳೆಸಿದ ರೀತಿ, ನನ್ನ ಆಲೋಚನೆ ಹಾಗೂ ಮಾತುಗಳನ್ನು ಪ್ರತಿಬಿಂಬಿಸುತ್ತವೆ. ಅವರ ಅಭಿಪ್ರಾಯಗಳು ಅವರ ಯೋಚನಾ ಶಕ್ತಿಯನ್ನು ತೋರಿಸುತ್ತವೆ. ಇದರಿಂದಲೇ ಯಾರು ಎಲ್ಲಿಂದ ಬಂದಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ" ಎಂದು ಹೇಳಿದ್ದರು.
ಈ ಹೇಳಿಕೆಯಿಂದ ಕೆರಳಿದ ಕಂಗನಾ ರಣಾವತ್, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, "ತನ್ನ ಮುಂಬರುವ ಬಿ-ಗ್ರೇಡ್ ಸಿನಿಮಾದ ಪ್ರಚಾರಕ್ಕಾಗಿ ಈ ಸಸ್ತಿ ನಟಿ, ನನ್ನ ಹೆಸರನ್ನು ಬಳಸಿಕೊಳ್ಳುತ್ತಿದ್ದಾಳೆ. ಇಂದು ಆಕೆ ನಾಚಿಕೆಗೇಡಿನ ಸಂಪೂರ್ಣ ಗಡಿ ದಾಟಿ ನನ್ನ ಹೆತ್ತವರು ಮತ್ತು ನನ್ನನ್ನು ಬೆಳೆಸಿದ ರೀತಿಯನ್ನೇ ಗೇಲಿ ಮಾಡಿದ್ದಾಳೆ" ಎಂದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು. ಆದರೆ, ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್​ ಮಾಡಿದ್ದು ಸದ್ಯ ಹಲವು ಅನುಮಾನಗಳಿಗೂ ಕಾರಣವಾಗಿದೆ.

ಇಲ್ಲಿಗೆ ಸುಮ್ಮನಾಗದ ತಾಪ್ಸಿ!

ತನ್ನ ಬಗ್ಗೆ ಕೆಟ್ಟದಾಗಿ ಬಹಿರಂಗ ಪೋಸ್ಟ್ ಹಾಕಿದ ಕಂಗನಾ ಹೆಸರನ್ನು ಎಲ್ಲಿಯೂ ಬಳಸದೆ ಅಥವಾ ಉಲ್ಲೇಖಿಸದ ತಾಪ್ಸಿ, ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೇವಲ ಒಂದೇ ಸಾಲಿನಲ್ಲಿ ಕೌಂಟರ್ ಕೊಟ್ಟಿದ್ದಾರೆ. 'ಕೊನೆಗೂ ಅದು ಸಾಬೀತಾಯಿತು' ಎಂದು ಬರೆದುಕೊಳ್ಳುವ ಮೂಲಕ ಸಂಸದೆಯ ಟೀಕೆಗೆ ಸೈಲೆಂಟ್ ಆಗಿ ಟಾಂಗ್ ನೀಡಿದ್ದಾರೆ,(ಏಜೆನ್ಸೀಸ್).