ಬಾಲಿವುಡ್

ನವ್ವಾರಿ ಸೀರೆಯಲ್ಲಿ ಶ್ರದ್ಧಾ ಫೋಟೊಶೂಟ್​! Shraddha Kapoor

Shraddha Kapoor: ಬಾಲಿವುಡ್​ನಲ್ಲಿ ಸಹಜ ಅಭಿನಯ ಹಾಗೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನದೇ ಆದ ಸ್ಥಾನವನ್ನು ಪಡೆದಿರುವ ನಟಿ ಎಂದರೆ ಶ್ರದ್ಧಾ ಕಪೂರ್​ ಆಗಿದ್ದಾರೆ. ಖ್ಯಾತ ಖಳನಟ ಶಕ್ತಿ ಕಪೂರ್​ ಅವರ ಮಗಳಾಗಿದ್ದರೂ, ತನ್ನದೇ ಸ್ವಂತ ಬಲದಿಂದ ಚಿತ್ರರಂಗದಲ್ಲಿ ನಲೆನಿಂತ ಖ್ಯಾತಿ ಶ್ರದ್ಧಾಳದ್ದಾಗಿದೆ. ಈಗ ಡಿ. 4 ರಂದು ಖ್ಯಾತ ತಮಾಷಾ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಸಿನಿಮಾ "ಈಥಾ" ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಸಾಂಪ್ರದಾಯಿಕ ಉಡುಗೆ ನವ್ವಾರಿ ಸೀರೆಯಲ್ಲಿ ಶ್ರದ್ಧಾ ಕಪೂರ್​ ಫೋಟೊಶೂಟ್​ ನಡೆಸಿದ್ದು, ಆ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ