ಬಾಲಿವುಡ್

"ವಿಠಾಬಾಯಿ" ಪಾತ್ರದಲ್ಲಿ ಶ್ರದ್ಧಾ! Shraddha Kapoor

Shraddha Kapoor: ಬಾಲಿವುಡ್​ನಲ್ಲಿ ತನ್ನದೇ ಆದ ವಿಭಿನ್ನ ಪಾತ್ರ, ವಿನೂತನ ಅಭಿನಯ ಹಾಗೂ ತನ್ನದೇ ಆದ ಫ್ಯಾನ್​ ಬೇಸ್​ ಹೊಂದಿರುವ ನಟಿ ಎಂದರೆ ಅದು ಶ್ರದ್ಧಾ ಕಪೂರ್​ ಆಗಿದ್ದಾರೆ. ಈಗ, ಶ್ರದ್ಧಾ ಕಪೂರ್ ಲಾವಣಿ ಹಾಗೂ ತಮಾಷಾ ನಾಟ್ಯ ಕಲೆಯ ದಂತಕತೆ ಎಂದೇ ಕರೆಯಲಾಗುವ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನಾಧಾರಿತ ಸಿನಿಮಾ "ಈಥಾ" ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಟ್ರೇಲರ್​​ ಅಕ್ಟೋಬರ್​ 30 ರಂದು ಬಿಡುಗಡೆಯಾಗಿದೆ. ಇನ್ನು ಸಿನಿಮಾ ಡಿಸೆಂಬರ್​ 4 ರಂದು ತೆರೆಕಾಣಲಿದೆ. ಹೀಗಾಗಿ ಈ ಸಿನಿಮಾದ ಟ್ರೇಲರ್​ ಲಾಂಚ್ ಸಲುವಾಗಿ ಶ್ರದ್ಧಾ ಫೋಟೊಶೂಟ್​ ನಡೆಸಿದ್ದು, ಅಲ್ಲಿ ಕ್ಲಿಕ್​ಕಿಸಿಕೊಂಡ ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ಸುದ್ದಿ ಜಾಲ