Salman Khan's Heartwarming Baba Post on sanjay dutt:
- ಐ ಲವ್ ಯೂ ಬಾಬಾ ಎಂದು ಸಂಜಯ್ ದತ್ ಅವರನ್ನು ಬಿಗಿದಪ್ಪಿಕೊಂಡ ಫೋಟೋ ಹಂಚಿಕೊಂಡ ಸಲ್ಮಾನ್ ಖಾನ್
- ಎಲ್ಲದೇವರು ನನ್ನ ಬಾಬಾನನ್ನು ಚೆನ್ನಾಗಿ ಸುಖವಾಗಿ ಇಟ್ಟಿರಲಿ ಎಂದು ಪೋಸ್ಟ್
- ಸಾಜನ್, ಚಲ್ ಮೇರೆ ಭಾಯಿ ಸಿನಿಮಾದಿಂದಾಗಿ ಇಬ್ಬರು ಸಾಕಷ್ಟು ಹೆಸರು ಮಾಡಿದ್ದರು.
Salman Khan's Heartwarming Baba Post
on sanjay dutt: ಸಾಜನ್, ಚಲ್ ಮೇರೆ ಭಾಯ್ ಸಿನಿಮಾಗಳಲ್ಲಿ ನಟಿಸಿ ಸೂಪರ್ ಜೋಡಿ ಎನಿಸಿಕೊಂಡಿರುವ ನಟ ಸಲ್ಮಾನ್ ಖಾನ್ ಮತ್ತು ಬಾಲಿವುಡ್ ನಟ ಸಂಜಯ್ ದತ್ ಸ್ನೇಹ ಇಂದಿಗೂ ಅಮರ. ಇದಕ್ಕೆ ಪೂರಕವಾಗಿ ಸಲ್ಮಾನ್ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಇತ್ತೀಚೆಗೆ ಹಂಚಿಕೊಂಡಿರುವ ಪೋಸ್ಟ್ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಬ್ಬರು ಬಿಗಿದಪ್ಪಿಕೊಂಡಿರುವುದು. ಅದಕ್ಕೆ 9 ಬಾರಿ ಬಾಬಾ ಎಂದು ಶೀರ್ಷಿಕೆ ಬ
ಭಾವುಕ ನುಡಿಗಳು ಅವರನ್ನು ಇನ್ನಷ್ಟು ನೆಚ್ಚಿಕೊಳ್ಳುವಂತೆ ಮಾಡುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಸಲ್ಮಾನ್ ಖಾನ್ ಟೀ ಶರ್ಟ್, ಜೀನ್ಸ್, ಕ್ಯಾಪ್ ಧರಿಸಿದ್ದರು.ಇನ್ನು ಸಂಜಯ್ ದತ್ ಕಪ್ಪು ಬಣ್ಣದ ಶರ್ಟ್ ಮತ್ತು ಜೀನ್ಸ್ ಧರಿಸಿ, ಬಿಗಿಯಾಗಿ ಅಪ್ಪಿಕೊಂಡಿರುವ ದೃಶ್ಯವಿದೆ. ಇದು ಇಬ್ಬರ ಮಧ್ಯೆ ಎಷ್ಟು ಬಿಗಿ ಬಾಂಧವ್ಯವಿದೆ ಎನ್ನುವುದನ್ನು ಎತ್ತಿ ತೋರಿಸುತ್ತದೆ.
ಸಲ್ಮಾನ್ ಖಾನ್ ಬರೆದುಕೊಂಡಿದ್ದೇನು?
'ನನಗೆಂದಿಗೂ ಬಾಬಾ. ಸರಳತೆಯ ಸಾರ ಈ ಬಾಬಾ ನಮ್ಮೆಲ್ಲರಿಗೂ ಬಾಬಾ. ನನ್ನ ದೊಡ್ಡಣ್ಣ. ಅಲ್ಲಾಹ್, ಮತ್ತು ಯೇಸು ಎಲ್ಲರೂ ಈ ಮನುಷ್ಯನನ್ನು ಸಂತೋಷವಾಗಿಟ್ಟಿರಲಿ' ಎಂದು ಮನವಿ ಮಾಡಿಕೊಂಡಿದ್ದಾರೆ. 'ಐಲವ್ ಯೂ ಬಾಬಾ'ಎಂದು ಬರೆದು ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ. ಸಲ್ಮಾನ್ ಅವರು ಸಂಜಯ್ ದತ್ರನ್ನು ಬಡಾ ಭಾಯ್, ಬಾಬಾ ಎಂದು ಈ ಹಿಂದೆಯಿಂದಲೂ ಪ್ರೀತಿಯಿಂದ ಕರೆದುಕೊಳ್ಳುತ್ತಾರೆ.
ಸಂಜಯ್ ದತ್ ಪತ್ನಿ ಹಾರೈಕೆ
ಸಂಜಯ್ ದತ್ ಪತ್ನಿ ಮಾನ್ಯತಾ ದತ್ ಅವರು ಪೋಸ್ಟ್ಗೆ ಲೈಕ್ ಕೊಟ್ಟಿದ್ದು, ಇಬ್ಬರು ಹೀಗೆ ಅಣ್ಣ-ತಮ್ಮಂದಿರಂತೆ ಸದಾ ಕಾಲ ನಗುತ್ತಾ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಸಂಜಯ್ ದತ್ ಪುತ್ರಿ ತ್ರಿಶಾಲಾ ಅವರು ಪ್ರೀತಿಯನ್ನು ಉಲ್ಲೇಖಿಸುವ ಇಮೋಜಿ ಆಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಜಯ್ ದತ್-ಸಲ್ಮಾನ್ ಪ್ರೀತಿ ಹುಟ್ಟಿದ್ದೆಲ್ಲಿ
90ರ ದಶಕದಲ್ಲಿ ಸಲ್ಮಾನ್ ಮತ್ತು ಸಂಜಯ್ ದತ್ ಬೇಡಿಕೆಯ ನಟರು 1991ರಲ್ಲಿ ಇಬ್ಬರು ಒಟ್ಟಾಗಿ ಸಾಜನ್ ಸಿನಿಮಾದಲ್ಲಿ ನಟಿಸಿದರು. 2000ದಲ್ಲಿ ಚಲ್ ಮೇರೆ ಭಾಯಿ ಸಿನಿಮಾದಲ್ಲಿ ನಟಿಸಿ ಹಿಟ್ ಕೊಟ್ಟರು. ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಧೂಳೆಬ್ಬಿಸಿತ್ತು. ಚಿತ್ರ ಕತೆಗಾರ ಸಲೀಂ ಖಾನ್ ಪುತ್ರ ಸಲ್ಮಾನ್ ಖಾನ್.ಸಿನಿಮಾದ ದಂತ ಕತೆಯಾದ ನರ್ಗಿಸ್, ಸುನಿಲ್ ದತ್ ಮಗ ಸಂಜಯ್ ದತ್, (ಏಜೆನ್ಸೀಸ್).