Sai Pallavi as Sita  
ಬಾಲಿವುಡ್

Ramayana Trailer​ ರಿಲೀಸ್ ಬೆನಲ್ಲೇ ಸೀತಾ ಪಾತ್ರ ಆಯ್ಕೆ ಬಗ್ಗೆ ಪರ-ವಿರೋಧ ಚರ್ಚೆ; 'ಸಾಯಿಪಲ್ಲವಿಗಿಂತ ರಕುಲ್ ಬೆಸ್ಟ್' ಎಂದ ನೆಟ್ಟಿಗರು

ಪ್ರಮುಖ ಮುಖ್ಯಾಂಶಗಳು

  • ರಾಮಾಯಣ ಸಿನಿಮಾಕ್ಕೆ ಸಾಯಿಪಲ್ಲವಿ ಸರಿಯಾದ ಆಯ್ಕೆಯಲ್ಲ ಎಂದ ನೆಟ್ಟಿಗರು
  • ರಕುಲ್​ ಎಷ್ಟು ಸೌಂದರ್ಯವತಿ ಎನ್ನುವುದನ್ನು ತೋರ್ಪಡಿಸಲು ರಾಮಾಯಣ ಸಿನಿಮಾ ಮಾಡಿದಂತಿದೆ ಎಂದ ನೆಟ್ಟಿಗರು
  • ಸಾಯಿಪಲ್ಲವಿ ಆಯ್ಕೆ ಸರಿಯಿದೆ, ಪಾತ್ರಕ್ಕೆ ಜೀವ ತುಂಬುತ್ತಾರೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

Sai Pallavi as Sita:

ನೈಸರ್ಗಿಕ ಸ್ಕಿನ್​ ಟೋನ್​​, ನಟನೆ, ಡ್ಯಾನ್ಸ್​ ವಿಚಾರಕ್ಕೆ ಸಾಯಿಪಲ್ಲವಿ ಬಗ್ಗೆ ಹೀಗೆಳೆಯೋ ಮಾತೆ ಇಲ್ಲ. ಪ್ರೇಮಂ, ಫಿದಾ, ಶ್ಯಾಮ್​ ಸಿಂಗ್​ ರಾಯ್​ನಲ್ಲಿ ಅವರ ಅದ್ಭುತ ನಟನೆಗೆ ಮನಸೋತೋರಿಲ್ಲ. ಬ್ಯೂಟಿ ಪ್ರಾಡಕ್ಟ್ ಅಥವಾ ಫೇರ್‌ನೆಸ್ ಕ್ರೀಮ್ ಜಾಹೀರಾತುಗಳನ್ನು ಅನುಮೋದಿಸುವುದಿಲ್ಲ ಮತ್ತು ಮಾರಾಟ ಮಾಡುವುದಿಲ್ಲ. ಅವರು 2 ಕೋಟಿ ರೂ.ಗಳ ಬ್ರ್ಯಾಂಡ್ ಜಾಹೀರಾತು ಆಫರ್‌ ಅನ್ನು ಮುಲಾಜಿಲ್ಲದೆ ರಿಜೆಕ್ಟ್​ ಮಾಡಿದ್ದರು. ಇಂತಹ ವ್ಯಕ್ತಿತ್ವವುಳ್ಳ ಸಾಯಿಪಲ್ಲವಿ ಅವರು ಏಕ್​ ದಿನ್ ಸಿನಿಮಾ ನಂತರ ರಾಮಾಯಣ ವಿಚಾರಕ್ಕಾಗಿ ಹೆಚ್ಚು ಟ್ರೋಲ್​ಗೆ ಒಳಗಾಗುತ್ತಿದ್ದಾರೆ.

ಜುಲೈ 30ರಂದು ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ರಾಮಾಯಣ ಸಿನಿಮಾದ ಟ್ರೇಲರ್ ರಿಲೀಸ್​ ಆಗಿತ್ತು. ಇದನ್ನು 24 ಗಂಟೆಗಳಲ್ಲಿ ಸುಮಾರು 4.89 ಕೋಟಿ ವೀಕ್ಷಣೆ ಮಾಡುವ ಮೂಲಕ ದಾಖಲೆ ಬರೆದಿದೆ. ಯಾವುದೇ ಸಿನಿಮಾದ ಟ್ರೇಲರ್​, ಟೀಸರ್ ರಿಲೀಸ್ ಆದಾಗ ವಿಎಫ್​ಎಕ್ಸ್​ ಅಥವಾ ಅಳತೆಗೋಲಿನ ಬಗ್ಗೆ ಚರ್ಷೆಯಾಗತ್ತೆ. ಆದರೆ, ಈ ಬಾರಿ , ಸೀತಾ ಮಾತೆಯ ಪಾತ್ರದಲ್ಲಿ ಸಾಯಿ ಪಲ್ಲವಿಯವರ ಅಭಿನಯವು ಸೌಂದರ್ಯದ ಮಾನದಂಡಗಳ ಬಗ್ಗೆ ಚರ್ಚೆಯಾಗುತ್ತಿದೆ.

ಸೀತೆ ಸುಂದರವಾಗಿಲ್ಲ

ಪೌರಾಣಿಕ ಪಾತ್ರಗಳನ್ನು ನಿರ್ವಹಿಸುವ ಮಹಿಳಾ ನಟಿಯರನ್ನು ಸಾಂಪ್ರದಾಯಿಕ ಸೌಂದರ್ಯದ ಮಾನದಂಡಗಳೊಂದಿಗೆ ಹೇಗೆ ಅಳೆಯಲಾಗುತ್ತದೆ ಎಂಬುದರ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಉದ್ಭವವಾಗಿದೆ.

ಆನ್​ಲೈನ್​ನಲ್ಲಿ ಪರ-ವಿರೋಧ ಚರ್ಚೆ

ಸಾಯಿ ಪಲ್ಲವಿಗಿಂತ ರಕುಲ್ ಪ್ರೀತ್ ಹೆಚ್ಚು ಸುಂದರಿ ಎಂದು ಜಗತ್ತಿಗೆ ತಿಳಿಸಲು ನಮಿತ್ ಮಲ್ಹೋತ್ರಾ 4000 ಕೋಟಿ ರೂಪಾಯಿಗಳ ರಾಮಾಯಣವನ್ನು ಮಾಡಿದ್ದಾರೆ ಎಂದು ರಾಜ್​ ಎಂಬುವವರು ಟ್ರೇಲರ್​ ತುಣುಕೊಂದನ್ನು ಹಂಚಿಕೊಂಡಿದ್ದಾರೆ.
ನಿಮಗೆ ಹುಚ್ಚು ನೀವು ಹೆಣ್ಣನ್ನು ಕಾಮದಲ್ಲಿ ನೋಡುತ್ತಿದ್ದೀರಿ. ಸೀತಾ ಪಾತ್ರಕ್ಕೆ ಸಾಯಿಪಲ್ಲವಿ ಭೂಷಣ. ಸಿನಿಮಾ ರಿಲೀಸ್ ಆದ ಬಳಿಕ ನೋಡಿ ಅವರು ಹೆಚ್ಚು ಜೀವಂತಿಕೆಯಿಂದ ನಟಿಸಿರುತ್ತಾರೆ ಎನ್ನುವುದು ತಿಳಿದುಬರುತ್ತೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಸಾಯಿಪಲ್ಲವಿ ಆಯ್ಕೆ ಯಾಕೆ?

ಸೈನಾ ಎಂಬುವವರು ಪೋಸ್ಟ್ ಹಂಚಿಕೊಂಡಿದ್ದು ಯಾವ ಆಧಾರದ ಮೇಲೆ ಸಾಯಿಪಲ್ಲವಿ ಅವರನ್ನು ರಾಮಾಯಣ ಸಿನಿಮಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.ಚೆಂದ ಅಥವಾ ನಟನೆಯ ಬಗ್ಗೆ ಮರೆತುಬಿಡಿ, ಈ ಪಾತ್ರಕ್ಕಾಗಿ ಅನೇಕ ಜನರು ನಿರೀಕ್ಷಿಸುವ ಸೌಂದರ್ಯವೂ ಅವರಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಸೀತಾ ಮಾತೆ ಬಗ್ಗೆ ಅರ್ಥವಾಗಲ್ಲ

ಸೈನಾ ಅವರ ಈ ಪೋಸ್ಟ್​ಗೆ ಹಲವರು ಕಾಮೆಂಟ್ ಮಾಡಿದ್ದು, ನಿಮಗೆ ಸೀತಾ ಮಾತೆಯ ಸಾರ ಏನು ಎನ್ನುವುದೇ ಅರ್ಥವಾಗೋದಿಲ್ಲ. ಸೀತಾ ಪಾತ್ರಕ್ಕೆ ಬೇರೆ ನಟಿಯರಿಗಿಂತ ಜೀವ ತುಂಬಿ ಅಭಿನಯಿಸೋದು ಸಾಯಿಪಲ್ಲವಿಗಿಂತ ಬೇರೆಯಾರು ಇಲ್ಲ. ಅವರ ನೋಟಕ್ಕಿಂತ ನಟನೆಯನ್ನು ಚೆನ್ನಾಗಿ ಮಾಡುತ್ತಾರೆ. ಅದೇ ಆಕರ್ಷಣೆ ಎಂದು ನಂದಕುಮಾರ್​ ಎನ್ನುವವರು ಕಾಮೆಂಟ್ ಮಾಡಿದ್ದಾರೆ.

ರ್ಯಾಂಡಮ್​ ಇಂಡಿಯನ್​ ಎಂಬುವವರು ಕಾಮೆಂಟ್ ಮಾಡಿದ್ದು, ರಾವಣನ ಪಾತ್ರಕ್ಕೆ ಯಶ್​ ಅವರನ್ನು ಆಯ್ಕೆ ಮಾಡಿಕೊಂಡಿದ್ದು ಒಂದು ಸರಿಯಾದ ನಿರ್ಧಾರ ಎಂದರೆ ಮತ್ತೊಂದು ಸೀತಾ ಮಾತೆ ಪಾತ್ರಕ್ಕೆ ಸೌತ್​ ನಟಿ ಸಾಯಿಪಲ್ಲವಿ ಆಯ್ಕೆ ನಿರ್ಧಾರ ಉತ್ತಮವಾಗಿದೆ. ನನಗೆ ಅರ್ಥವಾಗುತ್ತಿಲ್ಲ ಈ ಜನ ಯಾತಕ್ಕಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬುದಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ, (ಏಜೆನ್ಸೀಸ್).