ರಾಮಾಯಣ ಚಿತ್ರ ಟೀಕಿಸಿದವರನ್ನು ಬೀದಿನಾಯಿಗಳಿಗೆ ಹೋಲಿಸಿದ ರಾಮ್ ಗೋಪಾಲ್ ವರ್ಮಾ WEB
ಬಾಲಿವುಡ್

ರಾಮಾಯಣ ಚಿತ್ರ ಟೀಕಿಸಿದವರನ್ನು ಬೀದಿನಾಯಿಗಳಿಗೆ ಹೋಲಿಸಿದ ರಾಮ್ ಗೋಪಾಲ್ ವರ್ಮಾ: ರಣಬೀರ್, ಯಶ್ ಅಭಿನಯಕ್ಕೆ ಫಿದಾ! Ramayan movie

ಬಾಲಿವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ರಾಮಾಯಣ ಸಿನಿಮಾ ಇದೀಗ ಚಿತ್ರರಂಗದ ಗಣ್ಯರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಚಿತ್ರದ ಅದ್ದೂರಿ ದೃಶ್ಯಗಳು, ಕಲಾವಿದರ ಅಭಿನಯ ಮತ್ತು ನಿರ್ದೇಶನದ ಬಗ್ಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಚಿತ್ರದ ಬಗ್ಗೆ ಸುದೀರ್ಘ ವಿಮರ್ಶೆ ಹಂಚಿಕೊಂಡಿದ್ದು, ನಕಾರಾತ್ಮಕ ಟೀಕೆ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.Ramayan movie

ಮುಂಬೈ: ಬಾಲಿವುಡ್‌ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಣಬೀರ್ ಕಪೂರ್ ಮತ್ತು ಯಶ್ ಅಭಿನಯದ ರಾಮಾಯಣ ಸಿನಿಮಾ ಇದೀಗ ಚಿತ್ರರಂಗದ ಗಣ್ಯರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಚಿತ್ರದ ಅದ್ದೂರಿ ದೃಶ್ಯಗಳು, ಕಲಾವಿದರ ಅಭಿನಯ ಮತ್ತು ನಿರ್ದೇಶನದ ಬಗ್ಗೆ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದೀಗ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕೂಡ ಚಿತ್ರದ ಬಗ್ಗೆ ಸುದೀರ್ಘ ವಿಮರ್ಶೆ ಹಂಚಿಕೊಂಡಿದ್ದು, ನಕಾರಾತ್ಮಕ ಟೀಕೆ ಮಾಡುವವರ ವಿರುದ್ಧ ಕಿಡಿಕಾರಿದ್ದಾರೆ.

ಇದು ಭಕ್ತಿಯ ಚಿತ್ರವಲ್ಲ, ಭಕ್ತಿಯ ಶಕ್ತಿ

ಚಿತ್ರ ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ರಾಮಾಯಣ ಕೇವಲ ಧಾರ್ಮಿಕ ಹಿನ್ನೆಲೆಯ ಸಿನಿಮಾ ಅಲ್ಲ, ಅದೊಂದು ಭಕ್ತಿಯ ಶಕ್ತಿ ಎಂದು ಬಣ್ಣಿಸಿದ್ದಾರೆ. ಸಾಮಾನ್ಯವಾಗಿ ಪೌರಾಣಿಕ ಸಿನಿಮಾಗಳಲ್ಲಿ ಕಾಣುವ ನಿರೂಪಣೆಗಿಂತ ಭಿನ್ನವಾಗಿ ಈ ಚಿತ್ರ ಮೂಡಿಬಂದಿದೆ. ಪ್ರತಿಯೊಂದು ದೃಶ್ಯವೂ ತನ್ನದೇ ಆದ ಭಾವನೆ ಮತ್ತು ಅರ್ಥವನ್ನು ಹೇಳುತ್ತದೆ. ಪ್ರೇಕ್ಷಕರು ಚಿತ್ರಮಂದಿರದಿಂದ ಹೊರಬರುವಾಗ ಕೇವಲ ಕಥೆಯನ್ನು ನೋಡಿದ ಅನುಭವವಲ್ಲ, ಒಂದು ಅದ್ಭುತ ಅನುಭವವನ್ನು ಬದುಕಿದ ಭಾವನೆ ಹೊತ್ತು ಬರುತ್ತಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿನ ಹಿಂಸಾತ್ಮಕ ದೃಶ್ಯಗಳ ಬಗ್ಗೆಯೂ ಮಾತನಾಡಿರುವ ಅವರು, ಅವು ಕೇವಲ ಮನರಂಜನೆಗಾಗಿ ಸೃಷ್ಟಿಸಿರುವ ದೃಶ್ಯಗಳಲ್ಲ. ಪ್ರತಿಯೊಂದು ಕ್ರಿಯೆಯ ಪರಿಣಾಮವನ್ನು ಸ್ಪಷ್ಟವಾಗಿ ತೋರಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.

ರಣಬೀರ್ ಕಪೂರ್ ಅಭಿನಯಕ್ಕೆ ವರ್ಮಾ ಮೆಚ್ಚುಗೆ

ಚಿತ್ರದಲ್ಲಿ ರಾಮನ ಪಾತ್ರ ನಿರ್ವಹಿಸಿರುವ ರಣಬೀರ್ ಕಪೂರ್ ಅಭಿನಯವನ್ನು ರಾಮ್ ಗೋಪಾಲ್ ವರ್ಮಾ ವಿಶೇಷವಾಗಿ ಹೊಗಳಿದ್ದಾರೆ. ಅದರಲ್ಲೂ ಸೀತೆಯ ಅಪಹರಣದ ಬಳಿಕ ಖಾಲಿ ಆಶ್ರಮದಲ್ಲಿ ರಾಮ ಒಬ್ಬರೇ ನಿಂತಿರುವ ದೃಶ್ಯ ಅವರ ಗಮನ ಸೆಳೆದಿದೆ. ಆ ದೃಶ್ಯದಲ್ಲಿ ರಣಬೀರ್ ಯಾವುದೇ ಅತಿಯಾದ ಸಂಭಾಷಣೆ ಅಥವಾ ನಾಟಕೀಯ ಅಭಿನಯವಿಲ್ಲದೆ ದುಃಖವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದ್ದಾರೆ ಎಂದು ವರ್ಮಾ ಹೇಳಿದ್ದಾರೆ. ಕ್ಯಾಮೆರಾ ಹೆಚ್ಚು ಹೊತ್ತು ಆ ದೃಶ್ಯದಲ್ಲೇ ಉಳಿಯುವ ಮೂಲಕ ರಾಮನ ನೋವನ್ನು ಪ್ರೇಕ್ಷಕರಿಗೆ ತಲುಪಿಸುತ್ತದೆ ಎಂಬುದು ಅವರ ಅಭಿಪ್ರಾಯ.

ಇದನ್ನೂ ಓದಿ : ದೀಪಾವಳಿ ಪಟಾಕಿ ಅಬ್ಬರಕ್ಕೆ ದೆಹಲಿಯಲ್ಲಿ ವಿಷಗಾಳಿಯ ಅಟ್ಟಹಾಸ: WHO ಮಿತಿಗಿಂತ 59 ಪಟ್ಟು ಹೆಚ್ಚಾದ ವಾಯುಮಾಲಿನ್ಯ!Delhi Air Pollution

ರಾವಣನಾಗಿ ಯಶ್ ಅಬ್ಬರ

ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಯಶ್ ಅವರ ಅಭಿನಯಕ್ಕೂ ವರ್ಮಾ ಮನಸೋತಿದ್ದಾರೆ. ಯಶ್ ಪಾತ್ರದ ಗಂಭೀರತೆ, ಮುಖಭಾವ ಮತ್ತು ಪ್ರಭಾವಶಾಲಿ ಪರದೆಯ ಹಾಜರಾತಿಯನ್ನು ಕೊಂಡಾಡಿದ್ದಾರೆ. ಈ ಹಿಂದೆ ತಮ್ಮ ಪೋಸ್ಟ್‌ನಲ್ಲಿ ಯಶ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ, ರಣಬೀರ್ ಆ ಪಾತ್ರವನ್ನು ಜೀವಿಸಿದ್ದಾರೆ ಎಂಬರ್ಥದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಜಟಾಯುವಾಗಿ ಅನೂಪ್ ಖೇರ್ ಗಮನ ಸೆಳೆದಿದ್ದಾರೆ

ಚಿತ್ರದಲ್ಲಿ ಜಟಾಯು ಪಾತ್ರಕ್ಕೆ ಧ್ವನಿ ನೀಡಿರುವ ಅನುಪಮ ಖೇರ್ ಅವರನ್ನೂ ವರ್ಮಾ ಪ್ರಶಂಸಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದರೂ ಸೀತೆಯನ್ನು ಅಪಹರಿಸಿ ಕೊಂಡೊಯ್ಯುತ್ತಿದ್ದ ಪುಷ್ಪಕ ವಿಮಾನವನ್ನು ತಡೆಯಲು ಜಟಾಯು ನಡೆಸುವ ಹೋರಾಟವನ್ನು ವರ್ಮಾ ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ದೇಹದಲ್ಲಿ ಶಕ್ತಿ ಇಲ್ಲದಿದ್ದರೂ ಕೊನೆಯ ಕ್ಷಣದವರೆಗೂ ಹೋರಾಟ ಮುಂದುವರಿಸುವ ಜಟಾಯುವಿನ ಸಂಕಲ್ಪ ಅತ್ಯಂತ ಪ್ರಭಾವಶಾಲಿಯಾಗಿದೆ ಎಂದು ಹೇಳಿದ್ದಾರೆ.

ಟೀಕಾಕಾರರಿಗೆ ಬೀದಿನಾಯಿಗಳ ಹೋಲಿಕೆ

ಇಷ್ಟೆಲ್ಲ ಮೆಚ್ಚುಗೆ ವ್ಯಕ್ತಪಡಿಸಿದ ರಾಮ್ ಗೋಪಾಲ್ ವರ್ಮಾ, ಚಿತ್ರದ ಬಗ್ಗೆ ನಕಾರಾತ್ಮಕ ವಿಮರ್ಶೆ ಮಾಡುತ್ತಿರುವವರ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ. ಚಿತ್ರತಂಡದ ಬೃಹತ್ ಪ್ರಯತ್ನವನ್ನು ಟೀಕಿಸುವವರನ್ನು 'ಬೊಗಳುವ ಬೀದಿನಾಯಿಗಳು' ಎಂದು ಕರೆದಿದ್ದಾರೆ. ಇಂತಹ ಟೀಕೆಗಳಿಗೆ ಚಿತ್ರತಂಡ ತಲೆಕೆಡಿಸಿಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೂ ವಿಶೇಷ ಅಭಿನಂದನೆ ಸಲ್ಲಿಸಿರುವ ವರ್ಮಾ, ಬಾಲಿವುಡ್ ಅನ್ನು ಹಾಲಿವುಡ್‌ಗಿಂತಲೂ ಮೀರಿದ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ರಾಮಾಯಣ ಚಿತ್ರದ ಬಗ್ಗೆ ರಾಮ್ ಗೋಪಾಲ್ ವರ್ಮಾ ಹಂಚಿಕೊಂಡಿರುವ ಈ ಅಭಿಪ್ರಾಯಗಳು ಸಿನಿಮಾ ವಲಯದಲ್ಲಿ ಗಮನ ಸೆಳೆಯುತ್ತಿವೆ.