- ಉಮ್ರಾ ಯಾತ್ರೆ ಕೈಗೊಂಡ ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್
- ಬುರ್ಖಾ ಮತ್ತು ಹಿಜಾಬ್ ಧರಿಸಿ ಮೆಕ್ಕಾಗೆ ಹೋದ ಕಾಂಟ್ರೋವರ್ಸಿ ಕ್ವೀನ್
- ನೇಪಾಳ ಪ್ರವಾಹದಲ್ಲಿ ಸಿಲುಕಿರುವ ಜನರ ಸುರಕ್ಷತೆ, ಜೆನ್ಜೀಗಳಿಗೆ ಉದ್ಯೋಗ ಕೊಡಿಸುವಂತೆ ಪ್ರಾರ್ಥನೆ
Rakhi Sawant: ಕಾಂಟ್ರೋವರ್ಸಿ ಕ್ವೀನ್ ಎಂದೇ ಕುಖ್ಯಾತಿ ಪಡೆದಿರುವ ಬಾಲಿವುಡ್ ಹಾಟ್ ಬ್ಯೂಟಿ, ನಟಿ ರಾಖಿ ಸಾವಂತ್ ಇದೀಗ ಬುರ್ಖಾ ಧರಿಸಿ ಮೆಕ್ಕಾದಲ್ಲಿ ದಿಢೀರ್ ಪ್ರತ್ಯಕ್ಷವಾಗಿದ್ದಾರೆ.
ಸದಾ ಸಾಮಾಜಿಕ ಜಾಲತಾಣಗಳಲ್ಲಿ ಒಂದಲ್ಲ ಒಂದು ವಿಚಾರಗಳಿಂದ ಸುದ್ದಿಯಾಗುವ ರಾಖಿ, ಆದಿಲ್ ಜತೆಗಿನ ಡಿವೋರ್ಸ್ ಸೇರಿದಂತೆ ಸಾಕಷ್ಟು ವಿವಾದಗಳಿಗೆ ಗುರಿಯಾಗಿದ್ದರು. ಜತೆಗೆ ಸಹ ನಟಿಯರು ಮತ್ತು ತಮಗೆ ಸಂಬಂಧವಿಲ್ಲದ ವಿಷಯಕ್ಕೆ ಮೂಗು ತೂರಿಸುವ ಮೂಲಕ ನೆಟ್ಟಿಗರ ಭಾರಿ ಟೀಕೆ, ಲೇವಡಿಗೆ ಆಗಾಗ್ಗೆ ಸಿಲುಕುತ್ತಾರೆ. ಆದರೀಗ, ಮೆಕ್ಕಾದಲ್ಲಿ ಕಾಣಿಸಿಕೊಂಡಿರುವ ನಟಿ, ಬುರ್ಖಾ ಧರಿಸಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಆದಿಲ್ ಖಾನ್ ದುರಾನಿಯನ್ನು ಮದುವೆಯಾದ ಬೆನ್ನಲ್ಲೇ ರಾಖಿ ಸಾವಂತ್ ಇಸ್ಲಾಂಗೆ ಮತಾಂತರಗೊಂಡರು ಎನ್ನಲಾಗಿದೆ. ಒಂದಷ್ಟು ವಿವಾದಗಳ ಬಳಿಕ ಈಗ ಉಮ್ರಾ ಯಾತ್ರೆಯ ಹೆಸರಿನಲ್ಲಿ ಮೆಕ್ಕಾಗೆ ತೆರಳಿರುವ ನಟಿ, ನೇಪಾಳದಲ್ಲಿನ ಪ್ರವಾಹದಲ್ಲಿ ಸಿಲುಕಿರುವ ಜನರ ಸುರಕ್ಷತೆಗಾಗಿ ಹಾಗೂ ದೇಶದಲ್ಲಿರುವ ಜೆನ್ಜೀಗಳ ಭವಿಷ್ಯಕ್ಕಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ನಟಿ ಹಂಚಿಕೊಂಡ ವಿಡಿಯೋದಲ್ಲಿ, ನೇಪಾಳದಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಮತ್ತು ನೈಸರ್ಗಿಕ ವಿಕೋಪಗಳು ಕೊನೆಗೊಳ್ಳಬೇಕು. ಮಕ್ಕಳು, ವೃದ್ಧರು ಮತ್ತು ಪ್ರಾಣಿಗಳು ಸುರಕ್ಷಿತವಾಗಿರಬೇಕು. ಪ್ರವಾಹದಲ್ಲಿ ಸಿಲುಕಿರುವ ನೇಪಾಳಿಗಳು ಮತ್ತು ಭಾರತೀಯರ ಜೀವಕ್ಕೆ ಕುತ್ತು ಬರಬಾರದು. ದೇಶವನ್ನು, ಶಿಕ್ಷಣ ವ್ಯವಸ್ಥೆಯನ್ನು ಉಳಿಸಲು ಮತ್ತು ಜೆನ್ಜೀ ಯುವಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಗಳನ್ನು ಕೊಡಿಸುವಂತೆ ಪ್ರಾರ್ಥಿಸಿದರು.
ಜೆನ್ಜೀ ಯುವಕರಿಗೆ ಶಿಕ್ಷಣ, ಭವಿಷ್ಯ ಮತ್ತು ಹೆಚ್ಚಿನ ಆಶೀರ್ವಾದಗಳು ದೊರೆಯಲಿ. ನಮ್ಮ ದೇಶದ ಮಂತ್ರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲಿ. ಯುವ ಜನತೆ ಹೆತ್ತವರಿಗೆ ನೋವು ಕೊಡಬೇಡಿ. ಐಫೋನ್‌ಗಳಂತಹ ದುಬಾರಿ ವಸ್ತುಗಳಿಗಾಗಿ ಅವರ ಮೇಲೆ ಒತ್ತಡ ಹೇರಬೇಡಿ. ನಿಮ್ಮ ಬದುಕಿಗಾಗಿ ಹಣ ಸಂಪಾದಿಸಲು, ನಿಮ್ಮದೇ ಆದ ಜೀವನವನ್ನು ನಡೆಸಲು ಮತ್ತು ತಂದೆ-ತಾಯಿಗೆ ಸೇವೆ ಸಲ್ಲಿಸಲು ಸರಿಯಾದ ಮಾರ್ಗ ಆಯ್ಕೆ ಮಾಡಿಕೊಳ್ಳಿ ಎಂದಿದ್ದಾರೆ. ನಟಿಯ ಈ ವಿಡಿಯೋ ವೈರಲ್ ಆದ ಕೆಲವೇ ಗಂಟೆಗಳಲ್ಲಿ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆ ಹರಿಸಿದ್ದು, ಕೆಲವರು ರಾಖಿಯ ಪ್ರಾರ್ಥನೆಗಳನ್ನು ಹೊಗಳಿದರೆ, ಇನ್ನೂ ಕೆಲವರು ಆಕೆಯ ಮತಾಂತರವನ್ನು ಟೀಕಿಸಿದ್ದಾರೆ,(ಏಜೆನ್ಸೀಸ್).