ಪ್ರಮುಖ ಮುಖ್ಯಾಂಶಗಳು
‘ದಿಲ್ ಸೇ’, ‘ಮಿಷನ್ ಕಾಶ್ಮೀರ್’ ನಟಿ ಪ್ರೀತಿ ಜಿಂಟಾ ಮತ್ತೆ ಬಾಲಿವುಡ್‌ಗೆ ಮರಳಿದ್ದಾರೆ. ‘ಭಯ್ಯಜೀ ಸೂಪರ್‌ಹಿಟ್’(2018) ಚಿತ್ರ ತೆರೆಕಂಡು ಎಂಟು ವರ್ಷಗಳ ಬಳಿಕ ಅವರು ‘ಬಟ್ವಾರ 1947’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಕುಮಾರ್ ಸಂತೋಷಿ ಈ ಚಿತ್ರವನ್ನು ನಿರ್ದೇಶಿಸಿದ್ದು, ಇಲ್ಲಿ ಸನ್ನಿ ಡಿಯೋಲ್‌ಗೆ ಪ್ರೀತಿ ಜಿಂಟಾ ಜೋಡಿಯಾಗಿದ್ದಾರೆ. ಸ್ವಾತಂತ್ರ್ಯದ ಸಿಕ್ಕ ಬಳಿಕ ದೇಶದಲ್ಲಿ ನಡೆದ ಕೆಲ ಘಟನೆಗಳನ್ನು ಆಧರಿಸಿದ ಕಥೆಯಾಗಿದ್ದು, ಇದೇ 14ಕ್ಕೆ ವಿಶ್ವಾದ್ಯಂತ ತೆರೆಗೆ ಬರುತ್ತಿದೆ. ಇನ್ನು ಪ್ರೀತಿ ಜಿಂಟಾ ಎಂಟು ವರ್ಷಗಳ ಬಳಿಕ ಕ್ಯಾಮರಾ ಫೇಸ್ ಮಾಡಿದ್ದು, ಮೊದಲ ದಿನವೇ ಅವರು ಭಯಗೊಂಡಿದ್ದರಂತೆ. ಈ ಬಗ್ಗೆ ಸ್ವತಃ ಅವರೇ ಹಂಚಿಕೊಂಡಿದ್ದಾರೆ. ‘ಶೂಟಿಂಗ್‌ನ ಮೊದಲ ದಿನವೇ ನಿರ್ದೇಶಕ ಸಂತೋಷಿ, ನನಗೆ ಕಠಿಣ ದೃಶ್ಯವನ್ನು ನೀಡಿದ್ದರು. ಅದು ಸವಲಾಗಿತ್ತು. ಆ ವೇಳೆ ಸನ್ನಿ ಡಿಯೋಲ್‌ನ ನೋಡುತ್ತಲೇ ನಡುಗಲಾರಂಭಿಸಿದೆ. ಈಗ ಏನು ಮಾಡಬೇಕು ಎಂದು ಕೇಳಿದೆ. ಆಗ ಸನ್ನಿ ಡಿಯೋಲ್ ನಗುತ್ತಾ, ‘ಭಯಪಡಬೇಡಿ. ನಿರ್ದೇಶಕರು ರಿಟೇಕ್‌ಗಳನ್ನು ಇಷ್ಟಪಡುತ್ತಾರೆ. ತಿನ್ನಲೂ ಏನಾದರೂ ಇದೆಯೇ? ಎಂದು ಹೇಳಿದರು. ಆ ದಿನ ನಾವು ರಾತ್ರಿಯಿಡೀ ಶೂಟಿಂಗ್ ನಡೆಸಿದೆವು. ಅದು ನನಗೆ ಪಾಠವಾಯಿತು. ಅದಕ್ಕೆ ಮರುದಿನ ಮುಂಚೆಯೇ ಸ್ಕ್ರಿಪ್ಟ್ ಮತ್ತು ಸಂಭಾಷಣೆ ಓದಿಕೊಂಡೆ ಸೆಟ್‌ಗೆ ತೆರಳುತ್ತಿದ್ದೆ. ಹಾಗಾಗಿ, ಈ ಪೀರಿಯಾಡಿಕ್ ಸಿನಿಮಾದಲ್ಲಿ ನನಗೆ ನಟಿಸಲು ಸುಲಭವಾಯಿತು’ ಎಂದು ನಟನೆಯ ಸವಾಲುಗಳು ಬಗ್ಗೆ ಪ್ರೀತಿ ಜಿಂಟಾ ಹಂಚಿಕೊಂಡಿದ್ದಾರೆ. -ಏಜೆನ್ಸೀಸ್