ಪ್ರಮುಖ ಮುಖ್ಯಾಂಶಗಳು
ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಎರಡು ವರ್ಷಗಳ ಬಳಿಕ ಹಿಂದಿ ಚಿತ್ರರಂಗಕ್ಕೆ ವಾಪಸ್ಸಾಗಿದ್ದಾರೆ. 2023ರಲ್ಲಿ ಸಂಸದ ರಾಘವ್ ಚಡ್ಡಾ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಅವರು ‘ಮಿಷನ್ ರಾಣಿಗಂಜ್’ ಮತ್ತು ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರಗಳಲ್ಲಿ ನಟಿಸಿದ್ದರು. ಆನಂತರ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಆ ಮಧ್ಯೆಯೇ, ಕಳೆದ ಅಕ್ಟೋಬರ್‌ನಲ್ಲಿ ಪರಿಣೀತಿ ಗಂಡುಮಗುವಿಗೆ ಜನ್ಮ ನೀಡಿದ್ದರು. ಮಗುವಿನ ಆರೈಕೆಗಾಗಿ ಕೆಲ ದಿನಗಳ ಕಾಲ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ಅವರು ಇದೀಗ ‘ಮಾಲಾಮಾಲ್ ವೀಕ್ಲಿ 2’ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಹೌದು, 2006ರಲ್ಲಿ ತೆರೆಕಂಡು ಯಶಸ್ವಿಯಾಗಿದ್ದ ಪ್ರಿಯದರ್ಶನ್ ನಿರ್ದೇಶನದ, ನಟರಾದ ಪರೇಶ್ ರಾವಲ್, ಓಂ ಪುರಿ ಕಲಾ ಬಳಗದಲ್ಲಿದ್ದ ‘ಮಾಲಾಮಾಲ್ ವೀಕ್ಲಿ’ ಚಿತ್ರದ ಎರಡನೇ ಕಂತಿಗೆ ಸಿದ್ಧತೆ ನಡೆಸಲಾಗುತ್ತಿದೆ. ಕಳೆದ ಫೆಬ್ರವರಿಯಲ್ಲಿ ನಟ ಪರೇಶ್ ರಾವಲ್ ‘ಮಾಲಾಮಾಲ್ ವೀಕ್ಲಿ 2’ ಘೋಷಿಸಿದ್ದರು. ಇದೀಗ ಕಲಾಬಳಗದ ಆಯ್ಕೆಯಾಗಿದ್ದು, ಪರಿಣೀತಿ ಜೋಪ್ರಾ ಚಿತ್ರತಂಡ ಸೇರಿಕೊಂಡಿದ್ದಾರೆ. ಪರಿಣೀತಿ ಜತೆಗೆ ರವೀನಾ ಟಂಡನ್ ಕೂಡ ಕಲಾಬಳಗದಲ್ಲಿದ್ದಾರೆ. -ಏಜೆನ್ಸೀಸ್