ತನ್ನನ್ನು ಬೆನ್ನಟ್ಟಿದ ಪಾಪರಾಜಿಗಳ ಹಿಂದೆ ನಡೆದುಕೊಂಡು ಹೋಗುತ್ತಿರುವ ಬಾಲಿವುಡ್ ನಟಿ ತಾರಾ ಸುತಾರಿಯಾ  
ಬಾಲಿವುಡ್

‘ಮ್ಯಾಮ್.. ಮ್ಯಾಮ್..’ ಎಂದು ಬೆನ್ನುಬಿದ್ದ ಪಾಪಾರಾಜಿ; ಫೋನ್ ತಳ್ಳಿದ ತಾರಾ ಸುತಾರಿಯಾ, ವಿಡಿಯೋ ವೈರಲ್! Tara Sutaria

ಮುಂಬೈ: ಪಾಪಾರಾಜಿಗಳು ಹಾಗೂ ಸೆಲೆಬ್ರಿಟಿಗಳ ನಡುವಿನ ಜಟಾಪಟಿ ನಿನ್ನೆ-ಮೊನ್ನೆಯದಲ್ಲ. ವಿಡಿಯೋ ಮಾಡುವ ನೆಪದಲ್ಲಿ ಕಲಾವಿದರ ಅದರಲ್ಲೂ ನಟಿಯರ ತೀವಾ ಹತ್ತಿರಕ್ಕೆ ಹೋಗುವುದು, ಅಗತ್ಯಕ್ಕಿಂತ ಹೆಚ್ಚಿನ ಜೂಮ್​ ಮಾಡುವುದು ಪಾಪಾರಾಜಿಗಳ ಕೆಟ್ಟ ಚಾಳಿಯಾಗಿದೆ.
ನಟಿಯರು ಏರ್​ಪೋರ್ಟ್​, ಜಿಮ್​, ಶೂಟಿಂಗ್​, ಪಾರ್ಟಿ ಎಲ್ಲಿಗೆ ಹೋದರು ಅವರ ನೆರಳಂತೆ ಈ ಪಾಪಾರಾಜಿಗಳ ಹಿಂಬಾಲಿಸುತ್ತಾರೆ. ಇದರಿಂದ ನಟಿಯರ ವಿಡಿಯೋಗಳೇನೋ ವೈರಲ್ ಆಗುತ್ತದೆ. ಆದರೆ, ಅವರ ಖಾಸಗಿತನಕ್ಕೆ ಕೂಡ ಧಕ್ಕೆ ಉಂಟಾಗುತ್ತಿದೆ.
ಈದೀಗ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಬಾಲಿವುಡ್​ ನಟಿ, ಟಾಕ್ಸಿಕ್​ ಸುಂದರಿ ತಾರಾ ಸುತಾರಿಯಾ (Tara Sutaria) ಪಾಪಾರಾಜಿಯೊಬ್ಬರ ಅತಿರೇಕದ ವರ್ತನೆಗೆ ಕೋಪಗೊಂಡು, ಅವರ ಮೊಬೈಲ್​ನ್ನು ತಳ್ಳಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ ನಟಿ ತಾರಾ ಸುತಾರಿಯಾ ಬಿಳಿ ಬಣ್ಣದ ಸುಂದರವಾದ ಡ್ರೆಸ್​ ಧರಿಸಿ ಕಾರ್ಯಕ್ರಮವೊಂದಕ್ಕೆ ಹೊರಡುತ್ತಿರುವಾಗ, ಪಾಪಾರಾಜಿಗಳು ನಟಿಗೆ ಮುತ್ತಿಗೆ ಹಾಕಿದ್ದಾರೆ.
ತಮ್ಮ ಎಂದಿನ ಚಾಳಿಯಂತೆ, ಮ್ಯಾಮ್​..ಮ್ಯಾಮ್​..ತಾರಾ..ತಾರಾ... ಫೋಟೊ..ಫೋಟೊ ಎನ್ನಲು ಶುರುವಿಟ್ಟಿದ್ದಾರೆ. ಆದರೆ ನಟಿ ಒಂದು ಕಡೆ ನಿಂತು ಫೋಟೊಗೆ ಪೋಸ್​ ಕೊಡಲು ಸಾಧ್ಯವಾಗುವ ಸ್ಥಿತಿಯಲ್ಲಿರದ ಕಾರಣ, ಬೇಗನೆ ಅಲ್ಲಿಂದ ಹೊರಡಲು ಮುಂದಾಗಿದ್ದಾರೆ.
ಭದ್ರತಾ ಸಿಬ್ಬಂದಿ ಕೂಡ ಛತ್ರಿಯನ್ನು ಹಿಡಿಯುವ ಮೂಲಕ ಕ್ಯಾಮರಾಗಳಿಗೆ ಫೋಟೊ ತೆಗೆದುಕೊಳ್ಳಲು ಕಷ್ಟಮಾಡಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಪಾಪಾರಾಜಿ ಒತ್ತಾಯ ಪೂರ್ವಕವಾಗಿ ವಿಡಿಯೋ ಮಾಡಲು ಮುಂದಾದಾಗ ತಾರಾ, ಆತನ ಪೋನ್​ಅನ್ನು ತಳ್ಳಿದ್ದಾಳೆ. ಈಗ ಈ ತಳ್ಳಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ತಾರಾ ಸುತಾರಿಯಾಳ ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಪಾಪಾರಾಜಿಗಳ ಮೇಲೆ ಹರಿಹಾಯ್ದಿದ್ದಾರೆ. ಇತ್ತೀಚೆಗೆ ಈ ಪಾಪಾರಾಜಿಗಳ ವರ್ತನೆ ತೀರಾ ಅತಿರೇಕ ಎಂಬಂತೆ ಅನ್ನಿಸುತ್ತಿದೆ. ಇದಕ್ಕೆ ಏನಾದರೂ ಒಂದು ಕ್ರಮ ಕೈಗೊಳ್ಳಬೇಕೆಂದು ಒಬ್ಬ ಬಳಕೆದಾರರು ಕಮೆಂಟ್​ ಮಾಡಿದ್ದಾರೆ.
ಮೊದಲು ಈ ನಟಿಯರೇ, ಈ ಪಾಪಾರಾಜಿಗಳಿಗೆ ದುಡ್ಡುಕೊಟ್ಟು ಕರೆಸಿಕೊಳ್ಳುತ್ತಿದ್ದರು. ಈಗ ಇವರ ಕಾಟವನ್ನು ಅನುಭವಿಸಲು ಆಗುತ್ತಿಲ್ಲ, ಕರ್ಮ ರಿರ್ಟನ್ಸ್​ ಎಂದು ಇನ್ನೊಬ್ಬರು ಬರೆದಿದ್ದಾರೆ. ಕಲಾವಿದರು ಎಂದ ಮಾತ್ರಕ್ಕೆ ಅವರು, ಸಾರ್ವಜನಿಕ ಸರಕಲ್ಲ. ದಯವಿಟ್ಟು ಅವರ ಖಾಸಗಿತನವನ್ನು ಗೌರವಿಸಿ ಎಂದು ಮತ್ತೊಬ್ಬರು ಪಾಪಾರಾಜಿಗಳಿಗೆ ಬುದ್ಧಿಮಾತು ಹೇಳಿದ್ದಾರೆ, (ಏಜನ್ಸೀಸ್​).