ಬಾಲಿವುಡ್ ನಟ ನಾಸಿರುದ್ದೀನ್ ಶಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್!
- ಬಾಲಿವುಡ್ ನಟ ನಾಸಿರುದ್ದೀನ್ ಶಾ ವಿರುದ್ಧ ಕಿಡಿಕಾರಿದ ಕಂಗನಾ ರಣಾವತ್!
- ಬಾಲಿವುಡ್ ತಾರೆಗಳು ಭಾರತದ ಅನ್ನ ತಿಂದು ಪಾಕಿಸ್ತಾನವನ್ನು ಭಜಿಸುತ್ತಾರೆ
- ನಾಸಿರುದ್ದೀನ್ ಶಾ ಒಬ್ಬ ಗುಳ್ಳೆ ನರಿ
ನವದೆಹಲಿ: ದೆಹಲಿಯ ಜಂತರ್-ಮಂತರ್ನಲ್ಲಿ ನಡೆದಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಬಾಲಿವುಡ್ ನಟ-ನಟಿಯರು, ಈಗ ಜಾರ್ಖಂಡ್ನಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಮೌನವಹಿಸಿರುವುದಕ್ಕೆ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut on Bollywood) ಕಿಡಿಕಾರಿದ್ದಾರೆ.
ಕೆಲ ದಿನಗಳ ಹಿಂದೆ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮನ್ಲ್ಲಿ ಬರೆದುಕೊಂಡಿದ್ದ ಕಂಗನಾ, ಹಿರಿಯ ನಟ ನಾಸಿರುದ್ದೀನ್ ಷಾ ಒಬ್ಬ ಗುಳ್ಳೆ ನರಿ ಎಂದು ಕರೆದಿದ್ದರು. ಜಂತರ್-ಮಂತರ್ ಸಂದರ್ಭದಲ್ಲಿ ವಿಡಿಯೋ ಮೇಲೆ ವಿಡಿಯೋ ಮಾಡುತ್ತಿದ್ದ ನಾಸಿರುದ್ದೀನ್ ಷಾ ಈಗ ಎಲ್ಲಿದ್ದಾರೆ? ಅವರ ಜೊತೆ ಸೇರಿ ವಿಡಿಯೋ ಮಾಡುತ್ತಿದ್ದ ಉಳಿದವರು ಈಗ ಎಲ್ಲಿದ್ದಾರೆ? ದೆಹಲಿಗಾಗಿ ಮಿಡಿದ ಹೃದಯ ಜಾರ್ಖಂಡ್ಗಾಗಿ ಏಕೆ ಮಿಡಿಯುತ್ತಿಲ್ಲ? ಎಂದು ನಟಿ ಪ್ರಶ್ನಿಸಿದ್ದರು.
ತಿನ್ನುವುದು ಭಾರತದ್ದು; ಭಜನೆ ಪಾಕಿಸ್ತಾನದ್ದು!
ಬಾಲಿವುಡ್ ಮತ್ತು ಪಾಕಿಸ್ತಾನದ ಸಂಬಂಧ ಇಷ್ಟು ವರ್ಷವಾದರೂ ಮುಗಿದಿಲ್ಲ. ಇವರ ಎಲ್ಲಾ ಪ್ರೇಮಕತೆಗಳು ಪಾಕಿಸ್ತಾನದ ಜೊತೆಗೆ ಇರುತ್ತದೆ. ಇವರಿಗೆ ಆ ದೇಶದ ಮೇಲಿನ ಪ್ರೀತಿ ಇಲ್ಲಿ ತನಕ ಕಡಿಮೆಯೇ ಆಗಿಲ್ಲ.
ಇವರು ಬದುಕುತ್ತಿರುವುದು ಭಾರತದಲ್ಲಿ, ಅನ್ನ ತಿನ್ನುತ್ತಿರುವುದು ಭಾರತದ್ದು, ಆದರೆ ಭಜನೆ ಮಾತ್ರ ಪಾಕಿಸ್ತಾನದ್ದೇ ಮಾಡುತ್ತಾರೆ. ಈಗಲೂ ಇಲ್ಲಿ ಇದೇ ನಡೆದಿದೆ. ಜಂತರ್-ಮಂತರ್ ಪ್ರತಿಭಟನೆಯಲ್ಲಿ ಲಾಠಿ ಚಾರ್ಜ್ ಆದಾಗ ಮೊಸಳೆ ಕಣ್ಣೀರು ಸುರಿಸಿದ್ದರು, ಈಗ ಜಾರ್ಖಂಡ್ ಬಗ್ಗೆ ಮೌನವಾಗಿದ್ದಾರೆ. ಇವರ ದ್ವಂದ್ವ ನೀತಿ ಈಗ ಜಗಜ್ಜಾಹಿರವಾಗಿದೆ ಎಂದಿದ್ದಾರೆ.
ಇವರ ಈ ನಡುವಳಿಕೆಗಾಗಿ ನಾನು ನಾಸಿರುದ್ದೀನ್ ಷಾ ರನ್ನು ಗುಳ್ಳೆ ನರಿ ಎಂದಿದ್ದು, ನಾನು ಹೇಳಿದ್ದ ಮಾತನ್ನು ನಾನು ಖಂಡಿತವಾಗಿ ಸಮರ್ಥಿಸಿಕೊಳ್ಳುತ್ತೇನೆ, ಅವರ ವರ್ತನೆ ನಾನು ಹೇಳಿದ ಪ್ರಕಾರವೇ ಇದೆ ಎಂದು ಕಂಗನಾ ಸ್ಪಷ್ಟನೆ ನೀಡಿದ್ದಾರೆ, (ಏಜನ್ಸೀಸ್).