Tamannaah Bhatia: ಚಿತ್ರರಂಗದಲ್ಲಿ ತನ್ನ ಮೈಕಾಂತಿಯ ಮೂಲಕ, ಮಿಲ್ಕಿ ಬ್ಯೂಟಿ ಎಂಬ ಬಿರುದನ್ನು ಧರಿಸಿರುವ ನಟಿ ಎಂದರೆ ಅದು ತಮನ್ನಾ ಭಾಟಿಯಾ ಆಗಿದ್ದಾರೆ. ಇವರು ದಕ್ಷಿಣದ ಭಾರತದ ಬಹುತೇಕ ಎಲ್ಲಾ ಇಂಡಸ್ಟ್ರಿಗಳಲ್ಲಿ ಕೆಲಸಮಾಡಿ ಬಾಲಿವುಡ್ನಲ್ಲಿ ಕೂಡ ತನ್ನದೇ ಆದ ಛಾಪನ್ನು ಸೃಷ್ಟಿಸಿದ ಖ್ಯಾತಿ ಇವರದ್ದಾಗಿದೆ. ಇತ್ತೀಚೆಗೆ ನಟಿ ಕಪ್ಪು ಬಣ್ಣದ ಡ್ರೆಸ್ ಧರಿಸಿ, ತಮ್ಮದೇ ಜುವೆಲ್ಲರಿ ಬ್ರ್ಯಾಂಡ್ ಆದ 'ತಮನ್ನಾ ಫೈನ್ ಜುವೆಲ್ಲರಿ' ಯನ್ನು ಧರಿಸಿ ಫೋಟೊ ಶೂಟ್ ನಡೆಸಿದ್ದಾರೆ. ಇಲ್ಲಿ ಕ್ಲಿಕ್ಕಿಸಿಕೊಂಡ ಕೆಲ ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.