ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರಿಗೆ ಮಾತನಾಡುವ ಸೌಜನ್ಯವಿಲ್ಲ ಮತ್ತು ಅವರ ದುರಹಂಕಾರ ಅಗ್ರಸ್ಥಾನದಲ್ಲಿದೆ ಎಂದು ನಟಿ ದಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. 
ಬಾಲಿವುಡ್

ಮಾತನಾಡುವ ಸೌಜನ್ಯ ಇಲ್ಲ, ದುರಹಂಕಾರ ಟಾಪ್​ನಲ್ಲಿದೆ: ನವಾಜುದ್ದೀನ್ ಸಿದ್ದಿಕಿ ವಿರುದ್ಧ ಸಿಡಿದ್ದೆದ್ದ ದಿಯಾ ಮಿರ್ಜಾ! Dia Mirza

ಮುಂಬೈ: ಬಾಲಿವುಡ್​​ನಲ್ಲಿ ತನ್ನ ನಟನೆಗಿಂತ, ಅದರ ಹೊರತಾದ ಸಂಗತಿಗಳಿಂದಲೇ ಸುದ್ದಿಯಲ್ಲಿರುವ ನಟಿ ಎಂದರೆ ಅದು ದಿಯಾ ಮಿರ್ಜಾ ಆಗಿದ್ದಾರೆ. ಕೆಲ ದಿನಗಳ ಹಿಂದೆ ದೀಪಾವಳಿ ಪಟಾಕಿ ಸಂಬಂಧಿಸಿದಂತೆ ತಮ್ಮ ನಾಲಿಗೆ ಹರಿಬಿಟ್ಟು ಟ್ರೋಲ್​ ಆಗಿದ್ದ ನಟಿ ಈಗ, ತಮ್ಮದೇ ಚಿತ್ರರಂಗದ ನಟ ನವಾಜುದ್ದೀನ್​ ಸಿದ್ದಿಕಿ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಮಾತನಾಡುವ ವ್ಯವಧಾನವಿಲ್ಲ!

ಇತ್ತೀಚೆಗೆ ನಟಿ ದಿಯಾ ಮಿರ್ಜಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ನವಾಜುದ್ದೀನ್ ವಿರುದ್ಧ ಕಿಡಿಕಾರಿದ್ದು, ಈ ವ್ಯಕ್ತಿಗೆ ಒಬ್ಬರ ಜತೆ ಹೇಗೆ ಮಾತನಾಡಬೇಕೆಂದು ಸೌಜನ್ಯವಿಲ್ಲ, ಇತನ ದುರಂಹಕಾರದ ಅಗ್ರಸ್ಥಾನದಲ್ಲಿದೆ, ಇವನ ಜೊತೆ ಸಿನಿಮಾ ಶೂಟಿಂಗ್​ ಮಾಡುವುದೊಂದು ದುಸ್ವಪ್ನವಾಗಿದ್ದು, ಇವನೊಂದು ಆಕ್ರಮಣಕಾರಿ ಕ್ಯಾರೆಕ್ಟರ್​ ಎಂದು ದಿಯಾ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದು, ನವಾಜ್​ ಅವರನ್ನು ಟ್ಯಾಗ್​ ಮಾಡಿದ್ದಾರೆ.

ಕಾರಣ ತಿಳಿದು ಬಂದಿಲ್ಲ!

ಆದರೆ, ನವಾಜುದ್ದೀನ್​ ಸಿದ್ದಿಕಿ, ದಿಯಾ ಮಿರ್ಜಾ ಅವರ ಜತೆ ಹೇಗೆ ನಡೆದುಕೊಂಡಿದ್ದಾರೆ? ಏಕೆ ದಿಯಾ ಹೀಗೆ ಪೋಸ್ಟ್​ ಹಾಕಿದ್ದಾಳೆಂದು ಈವರೆಗೆ ತಿಳಿದು ಬಂದಿಲ್ಲ. ಅಂತಯೇ, ಈ ಬಗ್ಗೆ ದಿಯಾ ಯಾವುದೇ ಹೆಚ್ಚುವರಿ ಮಾಹಿತಿಗಳನ್ನು ಹಂಚಿಕೊಂಡಿಲ್ಲ. ಅಷ್ಟಕ್ಕೀ ಇವರಿಬ್ಬರ ನಡುವೆ ಏನು ನಡೆದಿದೆ ಎಂದು ಪ್ರೇಕ್ಷಕರಲ್ಲಿ ಪ್ರಶ್ನೆ ಕಾಡುತ್ತಿದ್ದು, ಇದಕ್ಕ ದಿಯಾ ಅವರೇ ಒಂದು ಸ್ಪಷ್ಟನೆ ನೀಡಬೇಕಿದೆ.

ನವಾಜ್​ ನೋ ರಿಸ್ಪಾನ್ಸ್​

ಇನ್ನು ದಿಯಾ ಮಿರ್ಜಾ ಮಾಡಿರುವ ಆರೋಪಕ್ಕೆ ನಟ ನವಾಜುದ್ದೀನ್​ ಸಿದ್ದಿಕಿ ಕೂಡ ಯಾವುದೇ ಪ್ರತಿಕ್ರಿಯೆ ಇಲ್ಲಿವರೆಗೆ ನೀಡಿಲ್ಲ. ಆದರೆ, ತಮ್ಮ ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಲಿ ಬೆಚೊಂದರ ಫೋಟೊವೊಂದನ್ನು ಹಾಕಿಕೊಂಡು, ಇಕ್​ ಒಂಕಾರ್​, ಗುರು ನಾನಕ್ ಸಾಹೀಬ್ ಎಂಬ ಸಿಖ್​ ಶ್ಲೋಕದ ಸಾಲನ್ನು ಬರೆದುಕೊಂಡಿದ್ದಾರೆ. ಇದರ ಹಿಂದಿನ ಗೂಢಾರ್ಥ ಕೂಡ ಪ್ರೇಕ್ಷಕರಿಗೆ ತಿಳಿಯದಾಗಿದೆ.

ಆದರೆ, ದಿಯಾ ಮಿರ್ಜಾ ಹೀಗೆ ದಿಢೀರನೇ ದಾಳಿ ಮಾಡಿರುವುದು ಬಾಲಿವುಡ್​ನಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಆದರೆ, ಕೆಲವರು ಇದೊಂದಿ ಪಿಆರ್​ ಸ್ಟಂಟ್ ಇದ್ದರೂ ಇರಬಹುದೆಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಲೀ, ಇದಕ್ಕೆ ನಟಿ ದಿಯಾ ಅಥವಾ ನಟ ನವಾಜ್​ ಸ್ಪಷ್ಟನೆ ನೀಡಿದ ನಂತರವೇ ಹಲವು ಅನುಮಾನಗಳು ಪರಿಹಾರವಾಗಬೇಕಿದೆ, (ಏಜೆನ್ಸೀಸ್​).