Kareena Kapoor Khan third child rumors 
ಬಾಲಿವುಡ್

ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ ಕಪೂರ್?​​; ವೈರಲ್​ ಆದ ವಿಡಿಯೋ ಬಗ್ಗೆ ನಟಿಯ ಟೀಂ ಹೇಳಿದ್ದಿಷ್ಟು

ಪ್ರಮುಖ ಮುಖ್ಯಾಂಶಗಳು

  • ಮೂರನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ ಕಪೂರ್ ದಂಪತಿ ಇಲ್ಲ.
  • ವೈರಲ್ ಆಗ್ತಿರುವ ವಿಡಿಯೋ, ಕರೀನಾ ಅವರು ಗರ್ಭಿಣಿನಾ? ಎನ್ನುವ ಪ್ರಶ್ನೆಗೆ ನಟಿಯ ತಂಡ ಉತ್ತರ
  • ಜಿಮ್​ನಿಂದ ಕರೀನಾ ಅವರು ಹೊರಬರುತ್ತಿರುವ ವಿಡಿಯೋ ವೈರಲ್​​.
Kareena Kapoor Khan third child rumors: ಇತ್ತೀಚೆಗೆ ಕರೀನಾ ಕಪೂರ್​  ಅವರು ಸೈಫ್​ ಅಲಿ ಖಾನ್​ ಅವರ ಹುಟ್ಟು ಹಬ್ಬದ ಪ್ರಯುಕ್ತ ಪ್ರವಾಸಕ್ಕೆ ತೆರಳಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. 'ಹ್ಯಾಪಿ ಬರ್ತಡೇ..ನೀವಿಲ್ಲದಿದ್ದರೆ ನನ್ನ ಜೀವನ ಅದೆಷ್ಟು ಬೋರ್​ ಆಗಿರುತ್ತಿತ್ತೋ' ಎಂದು ಬರೆದುಕೊಂಡಿದ್ದರು. 
ಅದಾಗಿ ಕೆಲವೇ ದಿನಕ್ಕೆ ಮತ್ತೆ ಸೋಶಿಯಲ್​​ ಮೀಡಿಯಾದಲ್ಲಿ 

ಈ ಕ್ಯೂಟ್​ ಕಪಲ್ಸ್​​

 ಚರ್ಚೆಗೆ ಒಳಗಾಗಿದ್ದಾರೆ. ಇತ್ತೀಚೆಗೆ ಜಿಮ್​ನಿಂದ ಕರೀನಾ 

ಹೊರಗೆ ಬರುತ್ತಿರುವ

 

 ವಿಡಿಯೋ ವೈರಲ್​ ಆಗಿದ್ದು, ಅವರು ಮತ್ತೆ ಗರ್ಭಿಣಿನಾ ಎನ್ನುವ  ಗೊಂದಲಗಳು ನೆಟ್ಟಿಗರಲ್ಲಿ, ಫ್ಯಾನ್ಸ್​ನಲ್ಲಿ ಮೂಡಿದೆ. 

ವೈರಲ್​ ವಿಡಿಯೋದಲ್ಲಿ ಏನಿದೆ?

ಜಿಮ್​ ಮುಗಿಸಿ ಕಾರಿನತ್ತ ತೆರಳುತ್ತಿರುವ ಕರೀನಾ ಕಪ್ಪು ಬಟ್ಟೆಯನ್ನು ಧರಿಸಿದ್ದಾರೆ.  ಸನ್​ಗ್ಲಾಸ್​ ಧರಿಸಿ, ಬಾಟಲ್​ ಹಿಡಿದು ಬರುತ್ತಿರುವುದು ಕಾಣಿಸುತ್ತದೆ. ಆನಂತರ ಅವರ  ಭದ್ರತಾ ತಂಡ ಅವರ ಹೊಟ್ಟೆಗೆ ಮಾತ್ರ ಹೆಚ್ಚು ರಕ್ಷಣೆ ನೀಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೆ ಅವರ ಹೊಟ್ಟೆಯ ಭಾಗವು ಸ್ವಲ್ಪ ಮುಂದಕ್ಕೆ ಬಂದಂತೆ ಕಾಣಿಸಿದೆ. ಇದರಿಂದ ನೆಟ್ಟಿಗರು ಅವರು ಮತ್ತೆ ಗರ್ಭಿಣಿಯಾಗಿದ್ದಾರಾ ಎನ್ನುವ ಪ್ರಶ್ನೆಯನ್ನು ಮಾಡುತ್ತಿದ್ದಾರೆ.

ಕರೀನಾ ಕಪೂರ್​ ಗರ್ಭಿಣಿಯಲ್ಲ

ನಟಿ ಕರೀನಾ ಮತ್ತೆ ಗರ್ಭಿಣಿಯಾಗಿದ್ದಾರಾ?, ಮೂರನೇ ಬಾರಿಗೆ ಗರ್ಭಿಣಿನಾ ಎಂದು ಸಾಲು ಸಾಲು ಪ್ರಶ್ನೆಗಳನ್ನು ಕೇಳುತ್ತಿರುವ ನೆಟ್ಟಿಗರಿಗೆ ನಟಿಯ ತಂಡ ತೆರೆ ಎಳೆದಿದೆ. ಈಗಾಗಲೇ ತೈಮೂರ್ ಮತ್ತು ಜೆಹ್ ಮಕ್ಕಳ ತಾಯಿಯಾಗಿರುವ ಕರೀನಾ ಕಪೂರ್ ಅವರು ಮೂರನೇ ಮಗುವಿನ ನಿರೀಕ್ಷೆಯಲ್ಲಿಲ್ಲ ಎಂದು ಅವರ ಆಪ್ತ ಮೂಲಗಳು ಮತ್ತು ತಂಡ ಅಧಿಕೃತವಾಗಿ ಸ್ಪಷ್ಟಪಡಿಸಿವೆ.  ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಕರೀನಾ ಕಪೂರ್​ ಮತ್ತೊಮ್ಮೆ ಗರ್ಭಿಣಿಯಾಗ್​ತಿದ್ದಾರಾ ಎಂದು ಹರಡುತ್ತಿರುವ ಊಹಾಪೋಹಾ ಸಂಪೂರ್ಣ ತಪ್ಪು, ಸುಳ್ಳು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ,  ಕರೀನಾ ಕಫೂರ್​ ಮತ್ತು ಸೈಫ್​ ಅಲಿಖಾನ್​ ಅವ್ರು ಈ ಊಹಾಪೋಹಾ, ಗೊಂದಲಗಳು, ಸಾಲು ಸಾಲು ಪ್ರಶ್ನೆಗಳಿಗೆ ಅಧಿಕೃತವಾಗಿ ಇನ್ನೂ ಉತ್ತರಿಸಿಲ್ಲ

ಕಡಲತೀರದಲ್ಲಿ ರಜಾ ದಿನ ಕಳೆದ ಸೈಫ್​-ಕರೀನಾ 

ಇತ್ತೀಚೆಗೆ ಸೈಫ್​ ಅಲಿಖಾನ್​ 56ನೇ  ವಸಂತಕ್ಕೆ ಕಾಲಿಟ್ಟರು. ದಂಪತಿ ಮತ್ತು ಮಕ್ಕಳು ಸುಂದರವಾದ ಬೀಚ್​ನಲ್ಲಿ ಸಮಯ ಕಳೆದ  ಫೋಟೋಗಳನ್ನು ಕರೀನಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ನೀವಿಲ್ಲದಿದ್ದರೆ ಜೀವನ ಅದೆಷ್ಟು ಬೋರ್​ ಎಂದು ಬರೆದುಕೊಂಡಿದ್ದರು. 

ಮಕ್ಕಳು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದ ಕರೀನಾ

ಈ ಹಿಂದೆ ಸಂದರ್ಶನವೊಂದರಲ್ಲಿ ಮಕ್ಕಳನ್ನು ಮಾಡಿಕೊಳ್ಳುವ ಬಗ್ಗೆ ಮಾತನಾಡಿದ್ದ ಕರೀನಾ ಅವರು, ಸೈಫ್​ ತಮ್ಮ 20,30, 40,50ರ ಕಾಲಘಟ್ಟದಲ್ಲಿ ಮಕ್ಕಳ ತಂದೆಯಾಗಿದ್ದಾರೆ. ಆದರೆ,  60ರ ವಯಸ್ಸಿನಲ್ಲಿ ಇದು ಸಾಧ್ಯವಿಲ್ಲ ಎಂದು ತಾವೇ ಸೈಫ್ ಬಳಿ ಹೇಳಿರುವುದಾಗಿ ಕರೀನಾ ನಗುತ್ತಾ ತಿಳಿಸಿದ್ದರು.
ಸೈಫ್​ ಅಲಿಖಾನ್​ ಅವರು ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. ಅವರಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಮಕ್ಕಳಿದ್ದಾರೆ. ಕರೀನಾ ಮತ್ತು ಸೈಫ್ ಅಕ್ಟೋಬರ್ 2012ರಲ್ಲಿ ವಿವಾಹವಾಗಿದ್ದು, ಡಿಸೆಂಬರ್ 20, 2016ರಂದು ತೈಮೂರ್ ಹಾಗೂ ಫೆಬ್ರವರಿ 21, 2021ರಂದು ಜೆಹ್ ಜನಿಸಿದರು.