Kangana Ranaut  
ಬಾಲಿವುಡ್

Kangana Ranaut ಕೊರಳಲ್ಲಿ ಮಂಗಳಸೂತ್ರ! ಯಾರಿಗೂ ತಿಳಿಯದಂತೆ ಮದ್ವೆಯಾದ್ರ ಬಾಲಿವುಡ್ ಕ್ವೀನ್?

ಮುಂಬೈ: ಬಾಲಿವುಡ್ ಕ್ವೀನ್ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್(Kangana Ranaut) ಸದಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಕಂಗನಾ ಅವರು ಕೊರಳಲ್ಲಿ ಮಂಗಳಸೂತ್ರ ಧರಿಸಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
ಇದನ್ನು ನೋಡಿದ ನೆಟ್ಟಿಗರು "ಕಂಗನಾ ರಹಸ್ಯವಾಗಿ ಮದುವೆಯಾಗಿದ್ದಾರಾ?" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದರು. ಈಗ ಈ ಎಲ್ಲಾ ವದಂತಿಗಳಿಗೆ ಸ್ವತಃ ಕಂಗನಾ ಅವರೇ ಸ್ಪಷ್ಟನೆ ನೀಡುವ ಮೂಲಕ ಸದ್ಯಕ್ಕೆ ತೆರೆ ಎಳೆದಿದ್ದಾರೆ.
"ನಾನು ರಹಸ್ಯವಾಗಿ ಮದುವೆಯಾಗುವುದಿಲ್ಲ, ಇದು ನನ್ನ ಪ್ರಾಮಿಸ್" ಎಂದು ಹೇಳುವ ಮೂಲಕ ಕಂಗನಾ ರಣಾವತ್ ತಮ್ಮ ಮದುವೆ ವದಂತಿಗಳ ಸದ್ದು ಅಡಗಿಸಿದ್ದಾರೆ.

ವೈರಲ್ ಆಗಿದ್ದ ಫೋಟೋದಲ್ಲಿ ಏನಿತ್ತು?

ಕಳೆದ ಕೆಲವು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಕಂಗನಾ ಅವರ ಹೊಸ ಫೋಟೋವೊಂದು ಸಿಕ್ಕಾಪಟ್ಟೆ ಹರಿದಾಡುತ್ತಿತ್ತು. ಅದರಲ್ಲಿ ಅವರು ಸಾಂಪ್ರದಾಯಿಕ ಉಡುಪು ಧರಿಸಿ, ಕೊರಳಲ್ಲಿ ಮಂಗಳಸೂತ್ರದೊಂದಿಗೆ ಕಾಣಿಸಿಕೊಂಡಿದ್ದರು.ಈ ಫೋಟೋ ನೋಡಿದ ಅಭಿಮಾನಿಗಳು ಕಂಗನಾ ಯಾರಿಗೂ ತಿಳಿಯದಂತೆ ಸಪ್ತಪದಿ ತುಳಿದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಲು ಶುರು ಮಾಡಿದ್ದರು.

ಅಸಲಿ ಸತ್ಯ ಬಿಚ್ಚಿಟ್ಟ ನಟಿ

ಈ ವೈರಲ್ ಫೋಟೋ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿರುವ ಕಂಗನಾ, "ನನ್ನ ಮದುವೆಯ ಫೋಟೋ ಎಂದು ವೈರಲ್ ಆಗುತ್ತಿರುವ ಚಿತ್ರದ ಹಿಂದೆ ಯಾವುದೇ ರಹಸ್ಯವಿಲ್ಲ" ಎಂದಿದ್ದಾರೆ.
"ಅದು ನನ್ನ ಮುಂಬರುವ ಹೊಸ ಚಿತ್ರದ ಶೂಟಿಂಗ್ ಸೆಟ್‌ನ ಫೋಟೋ ಅಷ್ಟೆ. ಸಿನಿಮಾದ ಪಾತ್ರಕ್ಕಾಗಿ ನಾನು ಆ ರೀತಿ ರೆಡಿಯಾಗಿದ್ದೆ" ಎಂದು ವದಂತಿಗಳಿಗೆ ತಣ್ಣೀರೆರಚಿದ್ದಾರೆ.

ಎಲ್ಲರಿಗೂ ಹೇಳಿ ಮದುವೆಯಾಗ್ತೀನಿ

ಮುಂದುವರಿದು ಮಾತನಾಡಿದ ಅವರು, "ನಾನು ಮದುವೆಯಾಗುವ ದಿನ ಖಂಡಿತವಾಗಿಯೂ ಅದನ್ನು ರಹಸ್ಯವಾಗಿ ಇಡುವುದಿಲ್ಲ. ಇಡೀ ಜಗತ್ತಿಗೆ ಸಾರಿಯೇ ಮದುವೆಯಾಗುತ್ತೇನೆ" ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. "ನನ್ನ ಜೀವನದ ಆ ಸುಂದರ ಕ್ಷಣವನ್ನು ನಾನು ಯಾರಿಂದಲೂ ಬಚ್ಚಿಡುವುದಿಲ್ಲ. ಸದ್ಯಕ್ಕಂತೂ ನಾನು ಯಾವುದೇ ರಹಸ್ಯ ಮದುವೆ ಮಾಡಿಕೊಂಡಿಲ್ಲ" ಎಂದು ಕಂಗನಾ ನಗುತ್ತಲೇ ಸ್ಪಷ್ಟಪಡಿಸಿದ್ದಾರೆ.

ಹೌಸಿಂಗ್ ಬೋರ್ಡ್ ವಿವಾದಕ್ಕೂ ಬ್ರೇಕ್

ಇತ್ತೀಚೆಗೆ ಹಿಮಾಚಲ ಪ್ರದೇಶದ ಹೌಸಿಂಗ್ ಬೋರ್ಡ್‌ನಿಂದ ತಮಗೆ ನೋಟಿಸ್ ಬಂದಿದೆ ಎಂಬ ಸುದ್ದಿಗಳಿಗೂ ಕಂಗನಾ ಪ್ರತಿಕ್ರಿಯಿಸಿದ್ದರು. "ಇವೆಲ್ಲವೂ ಕೇವಲ ಅಪಪ್ರಚಾರ ಅಷ್ಟೆ. ನನಗೆ ಯಾವುದೇ ನೋಟಿಸ್ ಬಂದಿಲ್ಲ ಮತ್ತು ನಾನು ಯಾವುದೇ ಕಾನೂನುಬಾಹಿರ ಕೆಲಸ ಮಾಡಿಲ್ಲ" ಎಂದು ಅವರು ಇತ್ತೀಚೆಗಷ್ಟೇ ಸ್ಪಷ್ಟಪಡಿಸಿದ್ದರು.

ರಾಜಕೀಯ ಮತ್ತು ಸಿನಿಮಾ ಜರ್ನಿ

ಇನ್ನು ಕಂಗನಾ ಪ್ರಸ್ತುತ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯದ ಜೊತೆಜೊತೆಗೆ ಅವರು ಸಿನಿಮಾಗಳಲ್ಲೂ ಸಕ್ರಿಯರಾಗಿದ್ದಾರೆ,(ಏಜೆನ್ಸೀಸ್​).