ಕಲ್ಕಿ ಕೇಕ್ಲಾ 
ಬಾಲಿವುಡ್

ಆಸ್ಕರ್ ರೇಸ್‌ನಲ್ಲಿ ಕಲ್ಕಿ ಕೇಕ್ಲಾ: ಪ್ರತಿಷ್ಠಿತ ಪ್ರಶಸ್ತಿಗೆ ನಟಿಯ ಅಂತಾರಾಷ್ಟ್ರೀಯ ‘ಹರ್ ಸಾಂಗ್’ ಸಿನಿಮಾ ನಾಮನಿರ್ದೇಶನ

ಹಿಂದಿಯ ‘ಹೇ ಜವಾನಿ ಹೈ ದಿವಾನಿ’, ‘ಹ್ಯಾಪಿ ಎಂಡಿಂಗ್’ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಲ್ಕಿ ಕೇಕ್ಲಾ ಬಾಲಿವುಡ್ ಜತೆಗೆ ಹಲವು ಅಂತಾರಾಷ್ಟ್ರೀಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಹರ್ ಸಾಂಗ್’ ಎಂಬ ಫ್ರೆಂಚ್ ಸಿನಿಮಾ ಆಸ್ಕರ್ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದೆ.

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ವಿವಿಧ ದೇಶಗಳಿಂದ ವಿವಿಧ ವಿಭಾಗಗಳಲ್ಲಿ ಸಿನಿಮಾಗಳನ್ನು ನಾಮನಿರ್ದೇಶನ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಭಾರತದಿಂದ ‘ಅತ್ಯುತ್ತಮ ಅಂತಾರಾಷ್ಟ್ರೀಯ ವಿಭಾಗ’ಕ್ಕೆ ಮರಾಠಿಯ ‘ಗೋಂಧಲ್’ ಚಿತ್ರವನ್ನು ನಾಮನಿರ್ದೇಶನ ಮಾಡಲಾಗಿದೆ. ಹಾಗೇ ಟೊರಾಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೆದ್ದ ಕಾರಣ ನಾಗಾಲ್ಯಾಂಡಿನ ತೇಜಾ ರಿಯೊ ನಿರ್ದೇಶನದ ‘ಅಂಘ್’ ಚಿತ್ರವೂ ಭಾರತದಿಂದ ಆಸ್ಕರ್ ರೇಸ್‌ನಲ್ಲಿ ಸೇರ್ಪಡೆಯಾಗಿದೆ. ಅದರ ಜತೆಗೆ ಭಾರತದ ಹಲವು ಚಿತ್ರತಂಡಗಳು ಸ್ವತಂತ್ರವಾಗಿ ನಾಮನಿರ್ದೇಶನ ಮಾಡಲು ಸಿದ್ಧತೆ ನಡೆಸುತ್ತಿವೆ. ಹೀಗಿರುವಾಗಲೇ ಮತ್ತೊಬ್ಬ ಬಾಲಿವುಡ್ ನಟಿಯ ಸಿನಿಮಾವೊಂದು ಆಸ್ಕರ್ ಅಂಗಳ ತಲುಪಿದೆ. ಅದು ಭಾರತದಿಂದ ಅಲ್ಲ, ಬದಲಾಗಿ ಫ್ರಾನ್ಸ್‌ನಿಂದ. ಹಿಂದಿಯ ‘ಹೇ ಜವಾನಿ ಹೈ ದಿವಾನಿ’, ‘ಹ್ಯಾಪಿ ಎಂಡಿಂಗ್’ ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಲ್ಕಿ ಕೇಕ್ಲಾ ಬಾಲಿವುಡ್ ಜತೆಗೆ ಹಲವು ಅಂತಾರಾಷ್ಟ್ರೀಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಹರ್ ಸಾಂಗ್’ ಎಂಬ ಫ್ರೆಂಚ್ ಸಿನಿಮಾ ಆಸ್ಕರ್ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದೆ. ಸಾಮಾನ್ಯ ವಿಭಾಗದಲ್ಲಿ ಈ ಸಿನಿಮಾ ಸ್ಪರ್ಧಿಸಲಿದೆ ಎಂದು ತಿಳಿದು ಬಂದಿದೆ. ಜಾನ್ ಎಂ. ಕೆಲ್ಲರ್ ನಿರ್ದೇಶನದ ಚಿತ್ರ ಇದಾಗಿದ್ದು, ಫ್ರಾಂಕೊ-ಅಮೆರಿಕ ಮೂಲದ ಲೇಖಕಿ ಒಲಿವಿಯಾ, ತನ್ನ ಅಜ್ಜಿಯ ಕುರಿತ ಕಥೆ ಬರೆಯಲು ಫ್ರಾನ್ಸ್‌ನ ಹುಟ್ಟೂರಿಗೆ ಬರುವ ಕುರಿತ ಕಥಾಹಂದರವಿದೆ. ಇನ್ನು ಕಲ್ಕಿ ಕೇಕ್ಲಾ ‘ಫ್ರೀಡಂ ಮ್ಯಾಟರ್ಸ್’, ‘ಎ ಡೆತ್ ಇನ್ ಗಂಜ್’, ‘ಕ್ಯಾಂಡಿ ಫ್ಲಿಪ್’, ‘ಗೋಲ್ಡ್ ಫಿಶ್’ ಸೇರಿ ಹಲವು ಇಂಗ್ಲಿಷ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಆಸ್ಕರ್ ಅಂಗಳ ತಲುಪಿರುವ ‘ಹರ್ ಸಾಂಗ್’ ರಿಲೀಸ್‌ಗೆ ಸಿದ್ಧವಾಗಿದ್ದು, ‘ಎಮ್ಮಾ ಆ್ಯಂಡ್ ಏಂಜೆಲ್’ ಚಿತ್ರದಲ್ಲೂ ಅವರು ಅಭಿನಯಿಸಿದ್ದಾರೆ. -ಏಜೆನ್ಸೀಸ್.