Janhvi Kapoor: ಬಾಂಗ್ಲಾದೇಶದ ಮೈಮೆನ್‌ಸಿಂಗ್‌ನಲ್ಲಿ ಹಿಂದೂ ವ್ಯಕ್ತಿ ದೀಪು ಚಂದ್ರ ದಾಸ್ (27) ಹತ್ಯೆಯನ್ನು ಖಂಡಿಸಿ ನಟಿ ಜಾನ್ವಿ ಕಪೂರ್ ತೀವ್ರವಾಗಿ ಖಂಡಿಸಿದ್ದು, ಈ ಕೃತ್ಯವನ್ನು ಭಯಾನಕ ಹತ್ಯೆ ಈ ಉಗ್ರವಾದವನ್ನು ಹತ್ತಿಕ್ಕಬೇಕು ಎಂದು ಬರೆದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೀಪು ಚಂದ್ರ ದಾಸ್ ಹತ್ಯೆಗೆ ಜಾನ್ವಿ ಪ್ರತಿಕ್ರಿಯೆ
ಗುರುವಾರ ಬೆಳಿಗ್ಗೆ ಜಾನ್ವಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ದೀಪು ಚಂದ್ರ ದಾಸ್ ಎಂಬ ಶೀರ್ಷಿಕೆಯೊಂದಿಗೆ ಟಿಪ್ಪಣಿಯೊಂದನ್ನು ಪೋಸ್ಟ್ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ನಡೆಯುತ್ತಿರುವುದು ಅನಾಗರಿಕ ಹಾಗೂ ಹತ್ಯಾಕಾಂಡ ಇದು ಒಂದು ಪ್ರತ್ಯೇಕ ಘಟನೆಯಲ್ಲ.
ಯಾರಿಗಾದರೂ ಅವನ ಸಾವಿನ ಹತ್ಯೆಯ ಬಗ್ಗೆ ತಿಳಿದಿಲ್ಲದಿದ್ದರೆ, ಆ ಘಟನೆಯ ಬಗ್ಗೆ ಓದಿ, ವಿಡಿಯೋಗಳನ್ನು ನೋಡಿ ಹಾಗೆಯೇ ಪ್ರಶ್ನೆಗಳನ್ನು ಕೇಳಿ ಇದೆಲ್ಲದರ ಹೊರತಾಗಿಯೂ ನಿಮಗೆ ಕೋಪ ಬರದಿದ್ದರೆ, ನಮಗೆ ತಿಳಿಯುವ ಮೊದಲೇ ನಮ್ಮನ್ನು ನಾಶಮಾಡುವುದು ಈ ರೀತಿಯ ಬೂಟಾಟಿಕೆಯೇ ಎಂದು ಜಾನ್ವಿ ಬರೆದು ಪೋಸ್ಟ್ ಮಾಡಿದ್ದಾರೆ.
ನಮ್ಮ ಸ್ವಂತ ಸಹೋದರ ಮತ್ತು ಸಹೋದರಿಯರು ಸುಟ್ಟು ಸಾಯುತ್ತಿರುವಾಗ ನಾವು ಪ್ರಪಂಚದಾದ್ಯಂತದ ವಿಷಯಗಳ ಬಗ್ಗೆ ಅರ್ಧದಾರಿಯಲ್ಲಿ ಅಳುತ್ತಲೇ ಇರುತ್ತೇವೆ. ನಮ್ಮ ಮಾನವೀಯತೆಯನ್ನು ಮರೆಯುವ ಮೊದಲು ನಾವು ಉಗ್ರವಾದವನ್ನು ಖಂಡಿಸಬೇಕು ಎಂದು ನಟಿ ಹೇಳಿದ್ದಾರೆ.
ಜಾನ್ವಿಯನ್ನು ಹೊಗಳಿದ ಇಂಟರ್ನೆಟ್
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಪೋಸ್ಟ್ ಹರಡುತ್ತಿದ್ದಂತೆಯೇ ಅನೇಕ ವಿವಾದಗಳು ಹುಟ್ಟುಕೊಂಡಿದ್ದು, ಈ ವಿಷಯದ ಬಗ್ಗೆ ಮಾತನಾಡುವ ನಟಿಯ ನಿರ್ಧಾರವನ್ನು ಅನೇಕ ಸಾಮಾಜಿಕ ಬಳಕೆದಾರರು ಶ್ಲಾಘಿಸಿದ್ದಾರೆ. ಹಾಗೆಯೇ ಅನೇಕ ಬಳಕೆದಾರರು ದೀಪು ಚಂದ್ರ ದಾಸ್ ಅವರ ಕ್ರೂರ ಹತ್ಯೆ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಘೋರ ಹತ್ಯೆಯನ್ನು ಖಂಡಿಸಿದ್ದಾರೆ.
ಒಬ್ಬ ಬಳಕೆದಾರರು ಈ ಪೋಸ್ಟ್ಗೆ ಕಾಮೆಂಟ್ ಮಾಡಿದ್ದು, ಬಾಲಿವುಡ್‌ನ ಅನೇಕರು ತಮ್ಮ ಅಮೂಲ್ಯವಾದ ಮುಸ್ಲಿಂ-ಮಾರುಕಟ್ಟೆ ಹಣವನ್ನು ಕಳೆದುಕೊಳ್ಳುವ, ಬಹಿಷ್ಕರಿಸುವ ಭಯದಿಂದ ತಮ್ಮ "ಪ್ರಗತಿಪರ" ಇಮೇಜ್ ಅನ್ನು ಹಾಳುಮಾಡುವ ಭಯದಿಂದ ಮೌನವಾಗಿದ್ದಾರೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರರು ಜಾನ್ವಿಗೆ ಧನ್ಯವಾದಗಳು, ನನಗೆ ಈ ನಟಿ ಅಷ್ಟು ಇಷ್ಟವಿಲ್ಲ. ಆದರೆ, ಆಕೆ ವಿಷಯಗಳ ಬಗ್ಗೆ ವಹಿಸುವ ಧೈರ್ಯ ಹಾಗೂ ಪ್ರಕರಣಗಳ ಬಗ್ಗೆ ತೆಗೆದುಕೊಳ್ಳುವ ನಿರ್ಣಯಗಳು ಎಲ್ಲವನ್ನು ಧೈರ್ಯದಿಂದ ಎದುರಿಸುತ್ತಾಳೆ ಎಂದು ಕಾಮೆಂಟ್ ಮಾಡಿದ್ದಾರೆ (ಏಜೆನ್ಸೀಸ್).