Isha Ambani Met Gala 2026,  
ಬಾಲಿವುಡ್

ಚಿನ್ನದ ಸೀರೆ, ವಜ್ರದ ಬ್ಲೌಸ್, ಕೈಯಲ್ಲಿ ಮಾವು, ಜಡೆಗೆ ಮಲ್ಲಿಗೆ ಹೂವು; ಮೆಟ್​ ಗಾಲಾದಲ್ಲಿ ಅಂಬಾನಿ ಪುತ್ರಿ ಮಿಂಚಿದ್ದು ಹೀಗೆ..Isha Ambani

ಪ್ರಮುಖ ಮುಖ್ಯಾಂಶಗಳು

  • ಮೇ.4ರಂದು ನಡೆದ ಮೆಟ್​ಗಾಲಾ, ಕರಣ್​, ಅನನ್ಯಾ ಬಿರ್ಲಾ ಸೇರಿದಂತೆ ಹಲವರು ಭಾಗಿ
  • ವಜ್ರ ಖಚಿತ ಬ್ಲೌಸ್, 250 ಕ್ಯಾರೆಟ್​ಗಳಿಗಿಂತ ಹೆಚ್ಚು ತೂಕದ ವಜ್ರದ ನೆಕ್ಲೇಸ್ ಧರಿಸಿದ್ದ ಇಶಾ ಅಂಬಾನಿ
  • ಇಶಾ ಅಂಬಾನಿಯವರ ಕಾಸ್ಟ್ಯೂಮ್​ ತಯಾರಿಸಲು ಒಟ್ಟು ತೆಗೆದುಕೊಂಡ ಸಮಯ 1200 ಗಂಟೆ ಎನ್ನಲಾಗಿದೆ
Isha Ambani Met Gala 2026:
ಪ್ರತಿಷ್ಠಿತ 'ಮೆಟ್ ಗಾಲಾ 2026' ಫ್ಯಾಷನ್ ವೇದಿಕೆಯ ಥೀಮ್​ ಈ ಬಾರಿ 'ಫ್ಯಾಷನ್ ಈಸ್ ಆರ್ಟ್' (ಫ್ಯಾಷನ್ ಒಂದು ಕಲೆ) ಎಂದಿತ್ತು ಅದಕ್ಕೆ ತಕ್ಕಂತೆ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಅವರು ಜಾಗತಿಕ ವೇದಿಕೆಯಲ್ಲಿ ಅದ್ಭುತವಾಗಿ ಪ್ರದರ್ಶಿಸಿದ್ದಾರೆ.
ಪ್ರತೀ ವರ್ಷದಂತೆ ಈ ಬಾರಿಯೂ ನ್ಯೂಯಾರ್ಕ್​​ನ ಮೆಟ್ರೋಪಾಲಿಟನ್​ ಮ್ಯೂಸಿಯಂ ಆಫ್​ ಆರ್ಟ್​ನ ಕಾಸ್ಟ್ಯೂಮ್​ ಇನ್​ಸ್ಟಿಟ್ಯೂಟ್​​ಗೆ ನಿಧಿ ಸಂಗ್ರಹಿಸಲು ಮೆಟ್​ ಗಾಲಾ ಆಯೋಜಿಸಲಾಗಿತ್ತು. ಅತಿದೊಡ್ಡ ಫ್ಯಾಷನ್​ ಕಾರ್ಯಕ್ರಮ ನಡೆದಿದ್ದು ನಿನ್ನೆ ಅಂದರೆ ಮೇ.4ರ ರಾತ್ರಿಯಂದದು

ಯಾರ್ಯಾರು ಭಾಗಿ?

ಮೆಟ್​ ಗಾಲಾ ಅತಿದೊಡ್ಡ ಫ್ಯಾಷನ್​ ರಾತ್ರಿಯಲ್ಲಿ ಭಾರತದ ಸೆಲಬ್ರೆಟಿಗಳು ಭಾಗಿಯಾಗಿದ್ದರು. ಕರಣ್​ ಜೋಹಾರ್​, ಅನನ್ಯ ಬಿರ್ಲಾ ಸೇರಿದಂತೆ ಇಶಾ ಅಂಬಾನಿಯವರ ಉಡುಗೆ ಕಣ್ಸೆಳೆದವು. ಇದರಲ್ಲಿ ವಿಶ್ವದ ಗಮನ ಸೆಳಯುವಂತೆ ಮಾಡಿದ್ದು ಇಶಾ ಅಂಬಾನಿಯವರ ಕಾಸ್ಟ್ಯೂಮ್​.

ಅಂಬಾನಿ ಧರಿಸಿದ್ದ ಔಟ್​ಫಿಟ್​ ವಿಶೇಷತೆ ಏನು?

ಇಶಾ ಅಂಬಾನಿಯವರ ಕಾಸ್ಟ್ಯೂಮ್​ ಅನ್ನು ಮೆಟಾಲಿಕ್ ಜರ್ದೋಜಿ ಕಸೂತಿಯಿಂದ ಅಲಂಕೃತವಾದ ವಜ್ರ ಖಚಿತ ಬ್ಲೌಸ್, ಇದನ್ನು ಅವರ ತಾಯಿ ನೀತಾ ಅಂಬಾನಿ ಅವರ ವೈಯಕ್ತಿಕ ಸಂಗ್ರಹದಿಂದ ಪಡೆಯಲಾಗಿತ್ತು.

ಬ್ಲೌಸ್​ಗೆ ವಜ್ರ ಅಳವಡಿಸಿದ್ದ ಕುಶಲಕರ್ಮಿಗಳು

ಇಶಾ ಅವರು ಧರಿಸಿದ್ದ ರವಿಕೆ ,ಮೇಲೆ 1800 ಕ್ಯಾರೆಟ್‌ಗಿಂತಲೂ ಅಧಿಕ ತೂಕದ ನೈಜ ವಜ್ರಗಳು, ಪಚ್ಚೆ ಪೋಲ್ಕಿ ಮತ್ತು ಕುಂದನ್ ಹರಳುಗಳನ್ನು ಅಳವಡಿಸಲಾಗಿತ್ತು ಎನ್ನಲಾಗಿದೆ.

ವಿಶೇಷವೆಂದರೆ, ಬ್ಲೌಸ್‌ನ ಹಿಂಭಾಗದಲ್ಲಿ ಐತಿಹಾಸಿಕ 'ಸರ್ಪೇಚ್' ಆಭರಣವನ್ನು ಬಳಸಲಾಗಿತ್ತು, ಇದು ಒಂದು ಕಾಲದಲ್ಲಿ ಹೈದರಾಬಾದ್ ನಿಜಾಮರ ಸಂಗ್ರಹದ ಭಾಗವಾಗಿತ್ತು. ರಿಲಾಯನ್ಸ್​ ರಿಟೇಲ್​ನ ಸ್ವದೇಶ್​​ನ ನುರಿತ ಕುಶಲಕರ್ಮಿಗಳು ಈ ಸೀರೆಯನ್ನು ಪರಿಶುದ್ಧ ಚಿನ್ನದ ನೂಲಿನಿಂದ ನೇಯ್ದಿದ್ದು, ಮಣ್ಣಿನ ಬಣ್ಣದ ಛಾಯೆಗಳಲ್ಲಿ ಕೈಯಿಂದ ಚಿತ್ರಿಸಲಾದ 'ಪಿಚ್ವಾಯಿ' ಶೈಲಿಯ ಕಲಾಕೃತಿಗಳಿವೆ.

ತಲೆಮೇಲೆ ಕಿರೀಟದಂತಿದ್ದ ಹೇರ್ ಸ್ಕಲ್ಪ್ಟರ್ ತಯಾರಿಸಿದ್ದು ಹೀಗೆ

ಇಶಾ ಅಂಬಾನಿಯವರು ಧರಿಸಿದ್ದ ಔಟ್​ಫಿಟ್​ಗೆ ಮಲ್ಲಿಗೆ ಹೂವಿನಿಂದ ಸ್ಫೂರ್ತಿ ಪಡೆದ ಹೇರ್ ಸ್ಕಲ್ಪ್ಟರ್ ಸಾಂಪ್ರದಾಯಿಕ 'ಮೊಗ್ರಾ ಗಜ್ರಾ'ವನ್ನು ಕಲಾತ್ಮಕವಾಗಿ ಮರುರೂಪಿಸಿದ ಈ ಆಭರಣವನ್ನು ಬ್ರೂಕ್ಲಿನ್ ಮೂಲದ ಕಲಾವಿದ ಸೌರಭ್ ಗುಪ್ತಾ ಅವರು ಕಾಗದ, ತಾಮ್ರ ಮತ್ತು ಹಿತ್ತಾಳೆಯನ್ನು ಬಳಸಿ 150 ಗಂಟೆಗಳ ಕಾಲ ಶ್ರಮವಹಿಸಿ ತಯಾರಿಸಿದ್ದಾರೆ.

ಮೆಟ್​ ಗಾಲಾ ನಡೆದ ದಿನ ಇಶಾ ಅಂಬಾನಿಯವರು ಖ್ಯಾತ ಕಾಸ್ಟ್ಯೂಮ್​ ಡಿಸೈನರ್​ ಸುಬೋಧ್ ಗುಪ್ತಾ ಅವರು ಡಿಸೈನ್​ ಮಾಡಿದ್ದ ಕ್ರೋಚೆಟ್ ಬ್ಯಾಗ್‌ನಲ್ಲಿದ್ದ 'ಮಾವಿನ ಹಣ್ಣಿನ' ಶಿಲ್ಪ ಕೈಯಲ್ಲಿ ಹಿಡಿದು, ಭಾರತೀಯ ಕಲೆ, ಆಹಾರ, ಪುರಾತತ್ವವನ್ನು ಉಲ್ಲೇಖಿಸಿದ್ದರು.
ಸಂಪೂರ್ಣ ಕಲಾಕೃತಿಗಾಗಿ 1200 ಗಂಟೆಗಳು ತೆಗೆದುಕೊಂಡಿದ್ದು, 50ಕ್ಕೂ ಹೆಚ್ಚು ಕುಶಲ ಕರ್ನಿಗಳು ಈ ಔಟ್​ಫಿಟ್​ಗಾಗಿ ಶ್ರಮಿಸಿದ್ದಾರೆ ಎನ್ನಲಾಗಿದೆ. ಇನ್ನು ಇಶಾ ಅವರರು 250 ಕ್ಯಾರೆಟ್​ಗಳಿಗಿಂತ ಹೆಚ್ಚು ತೂಕದ ವಜ್ರದ ನೆಕ್ಲೇಸ್​ ಧರಿಸಿದ್ದರು ಎನ್ನಲಾಗಿದೆ, (ಏಜೆನ್ಸೀಸ್​)