Pritam retiring from music 
ಬಾಲಿವುಡ್

ಅರಿಜಿತ್​ ಸಿಂಗ್​ ಬೆನ್ನಲ್ಲೇ ಬಾಲಿವುಡ್​ಗೆ ಮತ್ತೊಂದು ಶಾಕ್​; ಮ್ಯೂಸಿಕ್​ ಜಗತ್ತಿಗೆ ಹಿಟ್​​ ಮೇಕರ್​ ಪ್ರೀತಮ್​ ಚಕ್ರವರ್ತಿ ಗುಡ್​​ಬೈ?..Pritam Chakraborty

ಪ್ರಮುಖ ಮುಖ್ಯಾಂಶಗಳು

  • ಹಿನ್ನೆಲೆ ಗಾಯನಕ್ಕೆ ಅರಿಜಿತ್ ಸಿಂಗ್ ವಿದಾಯ ಹೇಳಿದ ಬೆನ್ನಲ್ಲೇ ಪ್ರೀತಮ್ ನಿವೃತ್ತಿ
  • ಇನ್​ಸ್ಟಾಗ್ರಾಮ್​ನಲ್ಲಿ ಹಿಟ್​ ಮೇಕರ್​​ ಪ್ರೀತಮ್ ಚಕ್ರವರ್ತಿ ವಿದಾಯದ ಪೋಸ್ಟ್​
  • ಪ್ರೀತಮ್​ ಪೋಸ್ಟ್​ಗೆ ಬೇಸರ ವ್ಯಕ್ತಪಡಿಸಿದ ಹಿಟ್​ ಮೇಕರ್​​ ಪ್ರೀತಮ್ ಚಕ್ರವರ್ತಿ
Pritam retiring from music: ಆಶಿಕಿ2 ಸಿನಿಮಾದ ಹಾಡುಗಳಿಂದ ಹೆಚ್ಚಾಗಿಯೇ ಚಿರಪರಿಚಿತರಾಗಿದ್ದ ಅರಿಜಿತ್​ ಸಿಂಗ್​ ಅವರು ಈ ವರ್ಷದ ಆರಂಭಿಕ ತಿಂಗಳಾದ ಜನವರಿಯಲ್ಲಿ ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಿದ್ದರು. ಇದು ಅವರ ಫ್ಯಾನ್ಸ್​ಗೆ ಭಾರೀ ಬೇಸರವನ್ನುಂಟು ಮಾಡಿತ್ತು.  ಆದರೆ, ಈ ಬಾರಿ ಸಂಗೀತ ಸಂಯೋಜಕ ಪ್ರೀತಮ್ ಚಕ್ರವರ್ತಿ  ಇದೇ ಹಾದಿಯಲ್ಲಿ ಸಾಗಲಿದ್ದಾರಾ? ಎನ್ನುವ ಬೇಸರವನ್ನು ಅಭಿಮಾನಿಗಳು ಹೊರಹಾಕಿದ್ದಾರೆ.

ಸಿನಿ ರಂಗಕ್ಕೆ ಪ್ರೀತಮ್​ ವಿದಾಯ?

ಹೌದು, ಧೂಮ್​ ಮಚಾ ಲೇ ಹಾಗೂ ಆವೋಗೆ ಜಬ್​ ತುನ್​​, ಕಲಾಂಕ್, ಹೈ ದಿಲ್​ ಹೈ ಮುಷ್ಕಿಲ್​​, ಕೇಸರಿಯಾ ಸೇರಿದಂತೆ ಬಾಲಿವುಡ್​ನಲ್ಲಿ ಸಾಕಷ್ಟು ಹಿಟ್​ ಹಾಡುಗಳನ್ನು ಕೊಟ್ಟ ಸಂಗೀತ ಸಂಯೋಜಕ, ಗಿಟಾರ್​​ ವಾದಕ, ​ ಪ್ರೀತಮ್ ಚಕ್ರವರ್ತಿ ಅವರು ಬಾಲಿವುಡ್​ ಮ್ಯೂಸಿಕ್​ ಜಗತ್ತಿನಿಂದ ಹೊರ ಬರುಲಿದ್ದಾರಾ? ಎನ್ನುವ ಚರ್ಚೆಗಳು ಜೋರಾಗಿದೆ. ಇದಕ್ಕೆ ಕಾರಣ ಅವರು ಇನ್​​ಸ್ಟಾಗ್ರಾಮ್​ನಲ್ಲಿ ಹುಟ್ಟು ಹಬ್ಬದ ಮಾರನೇ ದಿನ ಹಂಚಿಕೊಂಡ
 ಪೋಸ್ಟ್​.
ಸಂಗೀತ ಸಂಯೋಜಕ ಪ್ರೀತಮ್​ ಚಕ್ರವರ್ತಿ ಪೋಸ್ಟ್

ಈ ವರ್ಷದ ಆರಂಭದಲ್ಲಿ ಸ್ಟಾರ್ ಗಾಯಕ ಅರಿಜಿತ್ ಸಿಂಗ್ ಹೊಸ ಹಿನ್ನೆಲೆ ಗಾಯನ ಒಪ್ಪಂದಗಳಿಂದ ದೂರ ಸರಿಯುವುದಾಗಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇದೀಗ ಅವರ ಆಪ್ತ ಗೆಳೆಯ ಹಾಗೂ ಹಿಟ್ ಮೇಕರ್ ಪ್ರೀತಮ್ ಕೂಡ ಮುಖ್ಯವಾಹಿನಿಯ ಸಿನಿಮಾ ಸಂಗೀತದಿಂದ ದೀರ್ಘ ವಿರಾಮ ಅಥವಾ ನಿವೃತ್ತಿ ಪಡೆಯುವ ಮುನ್ಸೂಚನೆ ನೀಡಿದ್ದಾರೆ.

ಪ್ರೀತಮ್​ ಪೋಸ್ಟ್​ನಲ್ಲಿ ಏನಿದೆ? 

 ಹುಟ್ಟುಹಬ್ಬಕ್ಕೆ ಶುಭಾಷಯ ಕೋರಿದ ನಿಮ್ಮೆಲ್ಲರಿಗೂ ಧನ್ಯವಾದ ನಾನು ಎಲ್ಲರಿಗೂ ಪ್ರತ್ಯೇಕವಾಗಿ ಉತ್ತರಿಸೋಕೆ ಸಾಧ್ಯವಿಲ್ಲ. ಈ ನನ್ನ ಪ್ರಾಮಾಣಿಕ  ಕೃತಜ್ಞತೆಯನ್ನು ಸ್ವೀಕರಿಸಿ. ಇವತ್ತು, ನನ್ನ ಜೀವನವನ್ನು ಸ್ವಲ್ಪ ವಿಭಿನ್ನವಾಗಿ ಬದುಕಲು ಕೆಲವು ವರ್ಷಗಳನ್ನು ನನಗೇ ಉಡುಗೊರೆಯಾಗಿ ನೀಡಲು ನಾನು ನಿರ್ಧರಿಸಿದ್ದೇನೆ. ಇದುವರೆಗೆ ನಾನು ಏನನ್ನೆಲ್ಲಾ ಮಿಸ್ ಮಾಡಿಕೊಂಡಿದ್ದೇನೋ, ಅದನ್ನೆಲ್ಲಾ ಮರಳಿ ಪಡೆದುಕೊಳ್ಳಲು ಇದು ಸಕಾಲ. ಬಹಳ ದಿನಗಳಿಂದ ಬ್ರೇಕ್​ ಹಾಕಿಕೊಂಡಿದ್ದ ಕೆಲಸ ಆರಂಭಿಸುವ ಸಮಯ. ಮುಖ್ಯವಾಹಿನಿ ಎನ್ನುವುದು ಒಂದು ಅದ್ಭುತ ಪಯಣ. ಆದರೆ ನನಗೆ ಯಾವಾಗಲೂ ಅನ್ವೇಷಿಸದ ಅಪರಿಚಿತ ಹಾದಿಗಳ ಬಗ್ಗೆಯೇ ಹೆಚ್ಚು ಕುತೂಹಲ. ನಿಮ್ಮ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಸದ್ಯ ಅವರ ಈ ಪೋಸ್ಟ್​ ಕಂಡ ಅವರ ಅಭಿಮಾನಿಗಳು ಅವರು  ಸಿನಿಮಾ ರಂಗ ತೊರೆಯುತ್ತಾರಾ? ಇನ್ನು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡು ಕೇಳಲಾಗದ ಎನ್ನುವ ಬೇಸರವನ್ನು ಹೊರಹಾಕಿದ್ದಾರೆ.

ತಾತ್ಕಾಲಿಕ ಬ್ರೇಕ್

ಈ ಹಿಂದೆ 2014 ಮತ್ತು 2017 ರಲ್ಲಿ 6 ರಿಂದ 8 ತಿಂಗಳ ಕಾಲ ಸಣ್ಣ ವಿರಾಮ ಪಡೆದುಕೊಂಡಿದ್ದರು. ಅದರಂತೆಯೇ ಈ ಬಾರಿಯೂ ತಾತ್ಕಾಲಿಕ ಬ್ರೇಕ್​ ಪಡೆದು ಮತ್ತೆ ಸಿನಿಮಾರಂಗಕ್ಕೆ ಕಾಲಿಡಬಹುದು ಎಂದು ಅಭಿಮಾನಿಗಳು ಕಾಮೆಂಟ್​ ಮಾಡುತ್ತಿದ್ದಾರೆ.

ಯಾರು ಈ ಪ್ರೀತಮ್​?

ಪ್ರೀತಮ್​ ಅವರು ಸಂಗೀತ ಸಂಯೋಜಕ, ಗಾಯಕ, ಗಿಟಾರ್​ ವಾದಕ.  ತುಮ್ ಹಿ ಹೋ , ಚನ್ನಾ ಮೇರಿಯಾ, ಕೇಸರಿಯಾ, ಗೆರುವಾ, ಬುಲ್ಲೆಯಾ, ಹವಾಯೇನ್, ಖೈರಿಯತ್, ರಾಬ್ತಾ, ಇಲಾಹಿ, ಸುಭಾನಲ್ಲಾ , ಅಗರ್ ತುಮ್ ಸಾಥ್ ಹೋ ಮತ್ತು ಕಬೀರಾ ಮುಂತಾದ ಹಾಡಿಗೆ  ಪ್ರೀತಮ್​ ಚಕ್ರವರ್ತಿಯವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಎಲ್ಲ ಹಾಡುಗಳು ಭಾರಿ ಹಿಟ್​​ ಕಂಡಿವೆ. ಅದರಲ್ಲೂ ಅರಿಜಿತ್​ ಸಿಂಗ್​ ಮತ್ತು ಪ್ರೀತಮ್ ಕಾಂಬಿನೇಷನ್​ ಹಾಡುಗಳು ಇಂದಿಗೂ ಹಲವರ ಬಾಯಲ್ಲಿ ಗುನುಗುವಂತೆ ಮಾಡಿಸುತ್ತವೆ, (ಏಜೆನ್ಸೀಸ್).