salman Khan Tells Brother Sohail After Viral Video Worried Fans 
ಬಾಲಿವುಡ್

16 ಕೆಜಿ ತೂಕ ಇಳಿಸಿಕೊಂಡ ಸಲ್ಮಾನ್ ಖಾನ್: ಸಹೋದರ ಸೊಹೈಲ್​ ಮುಂದೆ ಅಭಿಮಾನಿಗಳ ಬಗ್ಗೆ ಹೇಳಿದ್ದಿಷ್ಟು..Salman Khan

salman Khan Tells Brother Sohail After Viral Video Worried Fans: ಅಮೆಜಾನ್​  ಪ್ರೈಮ್​ ರಿಯಾಲಿಟಿ ಶೋ ಅಲಯನ್ಸ್​ ಕಾರ್ಯಕ್ರಮಕ್ಕೆ ನಟ ಸಲ್ಮಾನ್​ ಖಾನ್​ ಭೇಟಿ ಕೊಟ್ಟಿದ್ದು, ಸ್ಪರ್ಧಿಗಳಿಗೆ ಒಂದು ಅಚ್ಚರಿ ಸಂಗತಿಯಾದ್ರೆ, ಅವರ ತಮ್ಮ ಸೊಹೈಲ್ ಸಲೀಂ ಖಾನ್  ಅವರಿಗೆ ಮಾತ್ರ ಭಾವನಾತ್ಮಕ ಕ್ಷಣವಾಯ್ತು.  ಮಾನಸಿಕವಾಗಿ ನೊಂದು, ಆಟಗಳ ಒತ್ತಡಕ್ಕೆ ಸಿಲುಕಿದ್ದ ಅವರು, ಭಾಯಿಜಾನ್​ರನ್ನು ಕಂಡ ಕೂಡಲೇ ಬಿಗಿದಪ್ಪಿ ಅತ್ತ  ಕೆಲವು ತುಣುಕು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವಂತೆ ಮಾಡುತ್ತದೆ. 
60ರಲ್ಲೂ ಟೀನೇಜ್​ ಬಾಯ್​ನಂತೆ ಮೈಕಟ್ಟು ಹೊಂದಿರುವ ಸಲ್ಮಾನ್​​ ಖಾನ್​​ ಎಂದಿಗೂ ಎವರ್ಗ್ರೀನ್​  ಹೀರೋಎನಿಸಿಕೊಂಡಿದ್ದಾರೆ. ಅವರಷ್ಟೇ ಅಲ್ಲ ಅವರ ಸಹೋದ ಸಹೋದರ ಸೊಹೈಲ್ ಖಾನ್ ಸಹ  ಅವರಂತೆ ಮೈಕಟ್ಟು ಹೊಂದಿರುವವರು.  ಅಮೆಜಾನ್​  ಪ್ರೈಮ್​ ರಿಯಾಲಿಟಿ ಶೋ ಅಲಯನ್ಸ್​ ಕಾರ್ಯಕ್ರಮ ಅಂತಿಮ ವಾರ ತಲುಪಿದ್ದ ಹಿನ್ನೆಲೆ ಸೊಹೈಲ್​ ಖಾನ್​ ಅವರಿಗೆ ಬೆಂಬಲ ಕೊಡಲು ಸಲ್ಮಾನ್​ ಖಾನ್​ ಕಾಣಿಸಿಕೊಂಡಿದ್ದರು.

ಸೋಹೈಲ್​ಗೆ ಭಾರಿ ಕಷ್ಟ

ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಸಲ್ಮಾನ್​ ಖಾನ್ ಸಹೋದರ ಸೊಹೈಲ್​​ ಖಾನ್​ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಅವರ ಮಾಜಿ ಪತ್ನಿ ಸೀಮಾ ಸಜ್ದೇಹ್​​ ಸಹ ಇದೇ ಕಾರ್ಯಕ್ರಮದಲ್ಲಿದ್ದು, ಕಳೆದ ವಾರ ಎಕ್ಸಿಟ್​ ಆಗಿದ್ದರು.  ಹೀಗಾಗಿ ಅವರ ಸ್ಥೈರ್ಯ ಹೆಚ್ಚಿಸಿ ಬೆಂಬಲ ನೀಡಲು ಸಲ್ಮಾನ್​ ಖಾನ್​ ಮನೆಗೆ ಎಂಟ್ರಿಯಾಗಿದ್ದರು. ಅವರ ಈ ಅನಿರೀಕ್ಷಿತ ಭೇಟಿ ಕಂಡ ಮನೆಯಲ್ಲಿದ್ದ ಸ್ಪರ್ಧಿಗಳು ಶಾಕ್​ ಆಗಿದ್ದಾರೆ. ಇತ್ತ ಸೊಹೈಲ್​​ ಅವರು ಸಲ್ಮಾನ್​ರನ್ನು ಬಿಗಿದಪ್ಪಿ ಬಿಕ್ಕಿ ಅತ್ತಿರುವ ವಿಡಿಯೋ ಕಣ್ಣಾಲಿಗಳನ್ನು ಒದ್ದೆ ಮಾಡುವಂತಿದೆ. 

ತೂಕ ಇಳಕೆ ಬಗ್ಗೆ ಹೇಳಿದ್ದೇನು?

ಆ ವಿಡಿಯೋದಲ್ಲಿ  ನಡೆದು ಬಂದ ಸೊಹೈಲ್ ಅವರು ಮೇಲೆ ನಿಂತು 6 ಪ್ಯಾಕ್​ ಅನ್ನು ತೋರಿಸಿದ್ದಾರೆ.  12 ಕೆಜಿ ತೂಕ ಇಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಆಗ ಸಲ್ಮಾನ್​ ಖಾನ್ ಅವರು ನಾನು 16 ಕೆಜಿ ಇಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. 
ಇತ್ತೀಚೆಗೆ ಸ್ಲಮ್ ರಿಹ್ಯಾಬಿಲಿಟೇಷನ್ ಅಥಾರಿಟಿ (SRA) ಅಳವಡಿಸಿದ್ದ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್​  ಕಾಣಿಸಿಕೊಂಡಿದ್ದರು.  ಆ ವಿಡಿಯೋಗಳು ಹಾಗೂ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.  ಫೊಸ್ಟ್​ಗಳ ಕಾಮೆಂಟ್​ನಲ್ಲಿ  ಫ್ಯಾನ್ಸ್​​​ ಬಾಲಿವುಡ್​ ನಟ ಸಲ್ಮಾನ್​ರ   ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. 

ಸೋಹೈಲ್​ಗೆ ಲೈಂಗಿಕ ಕಿರುಕುಳ

ರಿಯಾಲಿಟಿ ಶೋನಲ್ಲಿ ಸಾಮಾನ್ಯವಾಗಿ ಮೊಬೈಲ್​ ಬಳಕೆ  ಹಾಗೂ  ಯಾವುದೇ ರೀತಿಯ ಜನರ ಸಂಪರ್ಕ ಇರದ ಕಾರಣ ಸಾಕಷ್ಟು ನೋವು, ಖುಷಿ ವಿಚಾರಗಳು ಹೊರಬರುತ್ತದೆ. ಅದರಂತೆ ಸೋಹೈಲ್​ ಅವರು ಇಲ್ಲಿಯವರೆಗೂ ಯಾರ ಬಳಿಯೂ ಹೇಳಲಾಗದಂತ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ತಾವು ಸಣ್ಣವರಿದ್ದಾಗ ಅನುಭವಿಸಿದ  ಲೈಂಗಿಕ ದೌರ್ಜನ್ಯದ ಬಗ್ಗೆ ತಮ್ಮ ಪ್ರತಿಸ್ಪರ್ಧಿಗಳಾದ ಅರ್ಸ್ಲಾನ್ ಗೋನಿ, ರುಹೀ ದೋಸಾನಿ ಮತ್ತು ಅಲಿ ಗೋನಿ ಬಳಿ ಮಾತನಾಡಿದ್ದರು. ಇಷ್ಟೇ ಅಲ್ಲದೇ ರ್ಯಾಗಿಂಗ್​,  ಬೆದರಿಕೆಗಳನ್ನು ವಿರೋಧಿಸುವ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದರು, (ಏಜೆನ್ಸೀಸ್).