Hollywood Movies ruling Indian BO
Hollywood Movies ruling Indian BO -
ಭಾರತೀಯ ಸಿನಿಮಾಗಳು ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಅಂತ ಸವಾರಿ ಹೊರಟಿದ್ದರೆ, ಇತ್ತ ಹಾಲಿವುಡ್ ಚಿತ್ರಗಳು ಸದ್ದಿಲ್ಲದೇ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿವೆ. ಅದಕ್ಕೆ ಸಾ ಎಂಬಂತೆ ಈ ವರ್ಷ ಇದುವರೆಗೆ ಭಾರತೀಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಗಳಿಕೆ ಮಾಡಿಕೊಂಡ ಟಾಪ್ 10 ಚಿತ್ರಗಳ ಪೈಕಿ ಎರಡು ಇಂಗ್ಲೀಷ್ ಸಿನಿಮಾಗಳು ಸ್ಥಾನ ಪಡೆದಿವೆ. ಅಲ್ಲದೇ ಇನ್ನೂ ನಾಲ್ಕು ಸಿನಿಮಾಗಳು ₹50 ಕೋಟಿಗೂ ಹೆಚ್ಚು ಗಳಿಕೆ ಮಾಡಿಕೊಂಡಿವೆ. ಹಾಲಿವುಡ್ ಇತಿಹಾಸದಲ್ಲೇ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿಕೊಂಡ ಟಾಪ್ 10 ಸಿನಿಮಾಗಳಲ್ಲಿ ಆರು 2020ರ ನಂತರ ಬಿಡುಗಡೆಯಾಗಿರುವ ಚಿತ್ರಗಳಿವೆ. ಅದರರ್ಥ ಭಾರತದ ಮಾರುಕಟ್ಟೆಗಾಗಿ ಹಾಲಿವುಡ್ ಮತ್ತು ಭಾರತೀಯ ಸಿನಿಮಾಗಳ ನಡುವಿನ ಕದನ ತೀವ್ರಗೊಳ್ಳುವ ಕಾಲ ಸನ್ನಿಹಿತವಾಗಿದೆ. ಆದರೆ, ಇದರಿಂದ ಭಾರತದ ಸಣ್ಣ ಮತ್ತು ಮಧ್ಯಮ ಬಜೆಟ್ನ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿ ಪ್ರಾದೇಶಿಕ ಚಿತ್ರಗಳಿಗೆ ಅತಿದೊಡ್ಡ ಹೊಡೆತ ಬೀಳುವ ಸಾಧ್ಯತೆಯೂ ಇದೆ.
ಇಂಡಿಯಾ ಈ ವರ್ಷ...
ಈ ವರ್ಷ ಭಾರತದ ವಿವಿಧ ಚಿತ್ರರಂಗಗಳಲ್ಲಿ ಸುಮಾರು 1000ಕ್ಕೂ ಅಧಿಕ ಚಿತ್ರಗಳು ರಿಲೀಸ್ ಆಗಿವೆ. ಇದುವರೆಗೆ ತೆರೆಗೆ ಬಂದ 95 ಹಿಂದಿ ಸಿನಿಮಾಗಳಲ್ಲಿ "ಧುರಂಧರ್ 2', "ಬಾರ್ಡರ್ 2', "ಧಮಾಲ್ 4', "ಭೂತ್ ಬಂಗ್ಲಾ', 104 ತಮಿಳು ಚಿತ್ರಗಳಲ್ಲಿ "ಕರುಪ್ಪು', "ಜನನಾಯಗನ್', 115 ತೆಲುಗು ಸಿನಿಮಾಗಳಲ್ಲಿ "ಪೆದ್ದಿ' ಮತ್ತು "ಮನಶಂಕರ ವರಪ್ರಸಾದಗಾರು'... ಹೀಗೆ ಮೂರು ಭಾಷೆಗಳು 320 ಪ್ಲಸ್ ಚಿತ್ರಗಳಲ್ಲಿ ಎಂಟು ಭಾರತದ ಸಿನಿಮಾಗಳು ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿಕೊಂಡ ಚಿತ್ರಗಳ ಸಾಲಿನಲ್ಲಿ ಸ್ಥಾನ ಪಡೆದಿವೆ. ಆದರೆ, ಈ ವರ್ಷ ಭಾರತದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿಕೊಂಡ ಎರಡನೇ ಸಿನಿಮಾ ಹಿಂದಿ, ತೆಲುಗು, ತಮಿಳಿನ ಚಿತ್ರವಲ್ಲ. ಬದಲಾಗಿ ಹಾಲಿವುಡ್ನ ಸೂಪರ್ಹೀರೋ ಸಿನಿಮಾ "ಸ್ಪೈಡರ್ಮ್ಯಾನ್: ಬ್ರ್ಯಾಂಡ್ ನ್ಯೂ ಡೇ'. ರಿಲೀಸ್ ಆದ ಕೇವಲ 12 ದಿನಗಳಲ್ಲಿ ಭಾರತದಲ್ಲೇ ಬರೋಬ್ಬರಿ ₹525 ಕೋಟಿ ಬಾಚಿಕೊಳ್ಳುವ ಮೂಲಕ, ಹಾಲಿವುಡ್ ಇತಿಹಾಸದಲ್ಲೇ ಭಾರತದಲ್ಲಿ ₹500 ಕೋಟಿ ಕ್ಲಬ್ಗೆ ಸೇರಿದ ಮೊದಲ ಇಂಗ್ಲೀಷ್ ಸಿನಿಮಾ ಹಾಗೂ ಅತಿಹೆಚ್ಚು ಗಳಿಕೆ ಮಾಡಿಕೊಂಡ ಹಾಲಿವುಡ್ ಸಿನಿಮಾ ಎಂಬ ದಾಖಲೆ ಸೃಷ್ಟಿಸಿದೆ. ಹಾಗೇ ಕಳೆದ ತಿಂಗಳು ರಿಲೀಸ್ ಆದ ಕ್ರಿಸ್ಟೋರ್ ನೊಲನ್ ನಿರ್ದೇಶನದ "ದ ಒಡಿಸ್ಸಿ' ಕೂಡ ಭಾರತದಲ್ಲಿ ₹230 ಕೋಟಿ ಗಳಿಕೆ ಮಾಡಿಕೊಂಡಿದೆ. ಉಳಿದಂತೆ "ಅಬ್ಸೆಷನ್' (₹84 ಕೋಟಿ), "ಪ್ರಾಜೆಕ್ಟ್ ಹೇಲ್ ಮೇರಿ' (₹75 ಕೋಟಿ), "ಮೈಕಲ್' (₹72 ಕೋಟಿ) ಸೇರಿ ಇನ್ನೂ ಕೆಲ ಹಾಲಿವುಡ್ ಸಿನಿಮಾಗಳು ಈ ವರ್ಷ ಭಾರತದ ಬಾಕ್ಸಾಫಿಸಿನಲ್ಲೂ ಗೆಲುವಿನ ಓಟ ಕಂಡಿವೆ.
ಗುಣಮಟ್ಟದ ಡಬ್ಬಿಂಗ್
ಹಾಲಿವುಡ್ ಸಿನಿಮಾಗಳನ್ನು ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಡಬ್ಬಿಂಗ್ ಮಾಡಿ ಥಿಯೇಟರ್ಗಳಲ್ಲಿ ರಿಲೀಸ್ ಮಾಡುವುದು, ಹಾಗೂ ಇನ್ನೂ ಹತ್ತಿಪ್ಪತ್ತು ಭಾಷೆಗಳಲ್ಲಿ ಡಬ್ ಮಾಡಿ ಒಟಿಟಿಯಲ್ಲಿ ಬಿಡುಗಡೆ ಮಾಡುವುದು, ಟಿವಿಯಲ್ಲಿ ಪ್ರಸಾರ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಹೀಗಾಗಿ ಭಾರತದಲ್ಲಿ ಹಾಲಿವುಡ್ ಸಿನಿಮಾಗಳಿಗೆ ಹೊಸ ಪ್ರೇಕ್ಷಕರು ಹುಟ್ಟಿಕೊಂಡಿದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ""ಸ್ಪೈಡರ್ಮ್ಯಾನ್: ಬ್ರ್ಯಾಂಡ್ ನ್ಯೂ ಡೇ'. ಹೌದು, ಭಾರತದಲ್ಲಿ ಸಿನಿಮಾ ರಿಲೀಸ್ ಆದ ಮೊದಲ ಮೂರು ದಿನ ಇಂಗ್ಲೀಷ್ನ 8000 ಶೋಗಳು ಶೇಕಡಾ 55ರಷ್ಟು ತುಂಬಿದ್ದರೆ, ಹಿಂದಿ, ತಮಿಳು, ತೆಲುಗಿನ 7000 ಶೀಗಳು ಶೇಕಡಾ 95ರಷ್ಟು ಹೌಸ್ುಲ್ ಆಗಿವೆ.
ಕೈಹಿಡಿಯುತ್ತಿರುವ ಜೆನ್ಜಿ
ಭಾರತದ ಜೆನ್ಜಿ ಸೂಪರ್ಹೀರೋ ಮೋಡಿಗೆ ಒಳಗಾಗಿದ್ದಾರೆ. ಅದಕ್ಕೆ ಪೂರಕ ಎಂಬಂತೆ ""ಸ್ಪೈಡರ್ಮ್ಯಾನ್: ಬ್ರ್ಯಾಂಡ್ ನ್ಯೂ ಡೇ'' ಚಿತ್ರವನ್ನು ಭಾರತದಲ್ಲಿ 60 ಲಕ್ಷಕ್ಕೂ ಅಧಿಕ ಮಂದಿ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿ ವೀಸಿದ್ದಾರೆ. ಮೆಟ್ರೋ ನಗರಗಳ ಪೈಕಿ ಬೆಂಗಳೂರಿನ ಪ್ರೇಕ್ಷಕರು "ಜೇಡಮಾನವ'ನ ಜೇಬು ತುಂಬಿಸಿದ್ದಾರೆ. ಬೆಂಗಳೂರು ಅತಿಹೆಚ್ಚು ಅರ್ಥಾತ್ ಶೇಕಡಾ 23ರಷ್ಟು ಪಾಲು ಹೊಂದಿದ್ದರೆ, ಹೈದರಾಬಾದ್ ಶೇ. 17, ಮುಂಬೈ ಶೇ. 15 ಹಾಗೂ ದೆಹಲಿ ಶೇ. 14ರಷ್ಟು ಪಾಲು ಹೊಂದಿವೆ. ಹಾಗೇ ಪಟ್ಟಣ ಪ್ರದೇಶಗಳಲ್ಲೂ ಜೆನ್ಜಿಗಳು ಹೆಚ್ಚಾಗಿ ಹಾಲಿವುಡ್ ಸಿನಿಮಾಗಳತ್ತ ಮುಖ ಮಾಡುತ್ತಿದ್ದಾರೆ.
ಮಾರ್ಕೆಟಿಂಗ್ ಮ್ಯಾಜಿಕ್
ಹಾಲಿವುಡ್ ತಂಡಗಳು ಭಾರತದ ಮಾರುಕಟ್ಟೆಯನ್ನು ಗಂಭೀರವಾಗಿ ಪರಿಗಣಿಸುತ್ತಿವೆ. ಅದಕ್ಕೆ ಸಾ ಎಂಬಂತೆ ಆಸ್ಕರ್ ವಿಜೇತ ನಿರ್ದೇಶಕ ಕ್ರಿಸ್ಟೋರ್ ನೊಲನ್, ನಟರಾದ ಮ್ಯಾಟ್ ಡೇಮನ್ ಮತ್ತು ಟಾಮ್ ಹಾಲೆಂಡ್ ವಿಶ್ವಾದ್ಯಂತ ಪ್ರಚಾರಕ್ಕಾಗಿ ಆರು ನಗರಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಅದರಲ್ಲಿ ಒಂದು ಮುಂಬೈ ಕೂಡ ಆಗಿತ್ತು. ಇನ್ನು 2023ರಲ್ಲಿ "ರಿಂಗ್ಸ್ ಆಫ್ ಪವರ್' ವೆಬ್ಸರಣಿ ತಂಡ ಐದು ದಿನಗಳ ಕಾಲ ಭಾರತದಲ್ಲಿ ಪ್ರಚಾರ ನಡೆಸಿತ್ತು. ಹಾಗೇ ಇತ್ತೀಚಿನ ದಿನಗಳಲ್ಲಿ ಹಾಲಿವುಡ್ ತಂಡಗಳು ಭಾರತದ ಕಲಾವಿದರಿಗೂ ಅವಕಾಶ ನೀಡುವ ಮೂಲಕ ಇಲ್ಲಿನ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಈಗಾಗಲೇ ಪ್ರಿಯಾಂಕಾ ಚೋಪ್ರಾ ಜೊನಾಸ್ ಹಾಲಿವುಡ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆಲಿಯಾ ಭಟ್ (ಹಾರ್ಟ್ ಆ್ ಸ್ಟೋನ್), ಶೋಭಿತ ಧುಲಿಪಲ (ಮಂಕಿ ಮ್ಯಾನ್), ಅಲಿ ಫಜಲ್ (ಕಂದಹಾರ್), ಧನುಷ್ (ಗ್ರೇ ಮ್ಯಾನ್), ಇಶಾನ್ ಖಟ್ಟರ್ (ದ ಪೆರ್ಕ್ಟ್ ಕಪಲ್), ವಿದ್ಯುತ್ ಜಮ್ವಾಲ್ (ಮಾರ್ಟಲ್ ಕಾಂಬ್ಯಾಟ್ 2) ಹಾಲಿವುಡ್ನಲ್ಲಿ ನಟಿಸಿದ್ದು, ಸದ್ಯ ತಬು, ಸಯಾನಿ ಗುಪ್ತಾ ಸೇರಿ ಇನ್ನೂ ಕೆಲ ಕಲಾವಿದರು ಇಂಗ್ಲೀಷ್ ಸಿನಿಮಾಗಳಲ್ಲಿ ಮಿಂಚಲು ರೆಡಿಯಾಗಿದ್ದಾರೆ.