Hanuman Ansh 
ಬಾಲಿವುಡ್

Hanuman Ansh - ಮೂರನೇ ವಾರ ಹನುಮಾನ್​ ಮ್ಯಾಜಿಕ್​

Hanuman Ansh -
ಸಿನಿಮಾಗಳ ವಿಷಯದಲ್ಲಿ ಮೊದಲ ಮೂರು ದಿನ ಅತ್ಯಮೂಲ್ಯ. ಮೊದಲ ವಾರಾಂತ್ಯದಲ್ಲಿ ಓಡದ ಶೇಕಡಾ 99ರಷ್ಟು ಚಿತ್ರಗಳು ಗೆಲ್ಲುವುದು ಕಷ್ಟ ಎನ್ನಲಾಗುತ್ತದೆ. ಆದರೆ, ಶೇಕಡಾ 1ಕ್ಕಿಂತ ಕಡಿಮೆ ಚಿತ್ರಗಳು ಮೊದಲ ಎರಡು ವಾರ ಡಲ್​ ಆಗಿದ್ದು, ಮೂರನೇ ವಾರ ಹೌಸ್​ುಲ್​ ಆಗಿ ಗೆದ್ದಿರುವ ಉದಾಹರಣೆಯೂ ಇದೆ. "ತುಂಬಾದ್​', "ಆಶಿಕಿ' ಅದಕ್ಕೆ ಉತ್ತಮ ಉದಾಹರಣೆ. ಇದೀಗ ಮತ್ತೊಂದು ಬಾಲಿವುಡ್​ ಸಿನಿಮಾ ಈ ಮ್ಯಾಜಿಕ್​ಗೆ ಸಾಯಾಗಿದೆ. ಹೆಸರು "ಹನುಮಾನ್​ ಅಂಶ್​'. ಹನುಮಂತನ ಅವತಾರವೆಂದೇ ಪ್ರಸಿದ್ಧರಾಗಿದ್ದ ನೀಮ್​ ಕರೋಲಿ ಬಾಬಾ ಜೀವನಾಧಾರಿತ ಚಿತ್ರವಿದು. ವಿಶಾಲ್​ ಚತುರ್ವೇದಿ ನಿರ್ದೇಶನದ ಈ ಚಿತ್ರದಲ್ಲಿ ಶೋಭಿನವ್​ ಸತ್ಯಾ, ಬಾಬಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಆ. 7ರಂದು 200ಕ್ಕೂ ಹೆಚ್ಚು ಥಿಯೇಟರ್​ಗಳಲ್ಲಿ ರಿಲೀಸ್​ ಆಗಿದ್ದ ಈ ಚಿತ್ರ ಮೊದಲ ವಾರಾಂತ್ಯಕ್ಕೆ ಕೇವಲ ₹89 ಲಕ್ಷ ಗಳಿಕೆ ಮಾಡಿಕೊಂಡಿತ್ತು. ಹೀಗಾಗಿ ಎರಡನೇ ವಾರ ಸ್ಕ್ರೀನ್​ಗಳ ಸಂಖ್ಯೆಯನ್ನು 40ಕ್ಕೆ ಇಳಿಸಲಾಗಿತ್ತು. ಎರಡನೇ ವಾರ ₹46 ಲಕ್ಷ ಗಳಿಸಿದ ಚಿತ್ರ, ರಿಲೀಸ್​ ಆದ 15 ದಿನಗಳಲ್ಲಿ ಕೇವಲ ₹1.25 ಕೋಟಿ ಕಲೆಕ್ಷನ್​ ಮಾಡಿಕೊಂಡಿತ್ತು. ಅಲ್ಲಿಗೆ ಸಿನಿಮಾ ಕಥೆ ಮುಗಿಯಿತು ಎನ್ನುತ್ತಿರುವಾಗಲೇ, ಮೂರನೇ ವಾರ ಮ್ಯಾಜಿಕ್​ ನಡೆದಿದೆ. ಮೌತ್​ ಟು ಮೌತ್​ ಪಬ್ಲಿಸಿಟಿಯಿಂದ ಪ್ರೇಕ್ಷಕರು ಹೆಚ್ಚಾಗಿದ್ದು, ಒಂದೇ ವಾರದಲ್ಲಿ ₹3.20 ಕೋಟಿ ಗಳಿಕೆ ಮಾಡಿಕೊಂಡಿದೆ. ಹೀಗಾಗಿ ಮೂರನೇ ವಾರ ಥಿಯೇಟರ್​ಗಳ ಸಂಖ್ಯೆಯನ್ನು 400ಕ್ಕೆ ಏರಿಸಲಾಗಿದೆ. ಅದರಲ್ಲೂ ಕಳೆದ ಭಾನುವಾರ (ಆ.23) ಸಿನಿಮಾ ರಿಲೀಸ್​ ಆದ ಒಂದೇ ದಿನ ₹2.18 ಕೋಟಿ ಕಲೆಕ್ಷನ್​ ಆಗಿದ್ದು, ಇದೀಗ ಚಿತ್ರದ ಒಟ್ಟು ಗಳಿಕೆ ₹5.36 ಕೋಟಿ ದಾಟಿದೆ ಎನ್ನಲಾಗಿದೆ. ಆ ಮೂಲಕ ಬಾಕ್ಸಾಫಿಸಿನಲ್ಲಿ ಗೆಲುವಿನ ಟ್ರ್ಯಾಕ್​ಗೆ ಮರಳಿದೆ. ಇದೀಗ ಇಂದಿನಿಂದ "ಟಾಕ್ಸಿಕ್​' ಅಬ್ಬರದ ನಡುವೆ "ಹನುಮಾನ್​ ಅಂಶ್​' ಮುಂದಿನ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.