ನಟ ಆರ್​. ಮಾಧವನ್​ ಹೇಳಿಕೆ ವೈರಲ್​  
ಬಾಲಿವುಡ್

ಹೀಗೆಲ್ಲ ಮಾಡೋದಿದ್ರೆ ಹೋಟೆಲ್​ಗೆ ಹೋಗಿ ಥಿಯೇಟರ್​ಗಲ್ಲ! ಸಿನಿಪ್ರಿಯರ ವಿರುದ್ಧ ಸಿಡಿದೆದ್ದ ನಟ ಮಾಧವನ್​ | R Madhavan

ಪ್ರಮುಖ ಮುಖ್ಯಾಂಶಗಳು

  • ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಚಿತ್ರಪ್ರೇಮಿಗಳು ಊಟ ಮಾಡುವುದು ಸರಿಯಲ್ಲ
  • ಕುಳಿತ ಸೀಟುಗಳ ಹತ್ತಿರ ಊಟ ತರಿಸಿಕೊಂಡು ತಿನ್ನುವುದು ಬೇಡ
  • ಹೀಗೆ ಮಾಡುವುದಾದರೆ ಥಿಯೇಟರ್​ ಬಿಟ್ಟು ಹೋಟೆಲ್​ಗೆ ಹೋಗಿ ಎಂದ ನಟ
ಮುಂಬೈ: ಇತ್ತೀಚಿನ ದಿನಗಳಲ್ಲಿ ರಿಲೀಸ್​ ಆಗುವ ಸಿನಿಮಾಗಳನ್ನು ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ನೋಡಲು ಮುಗಿಬೀಳುವ ಚಿತ್ರಪ್ರೇಮಿಗಳು ಕುಳಿತ ಸೀಟಿಗೆ ತರಿಸಿಕೊಳ್ಳುವ ಆನ್​ಲೈನ್​ ಫುಡ್​ ಆರ್ಡರ್​ ಬಗ್ಗೆ ಬಾಲಿವುಡ್​ ನಟ ಆರ್​. ಮಾಧವನ್​ ಗರಂ ಆಗಿದ್ದಾರೆ.
'ಜಿಡಿಎನ್' ಚಿತ್ರದ ಪ್ರಚಾರದ ವೇಳೆ ಸಿಟ್ಟಿಗೆದ್ದು ಮಾತನಾಡಿದ ಆರ್​. ಮಾಧವನ್​, ಥಿಯೇಟರ್‌ಗಳಲ್ಲಿ ಸಿನಿಮಾ ನೋಡಲು ಹೋಗುವ ಅದೆಷ್ಟೋ ಸಂಖ್ಯೆಯ ಸಿನಿಪ್ರಿಯರು, ತಾವು ಕುಳಿತ ಸೀಟಿಗೆ ಆನ್​ಲೈನ್​ ಫುಡ್​ ಆರ್ಡರ್ ಮಾಡಿ ತಿನ್ನುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಅಷ್ಟಕ್ಕೂ, ಚಿತ್ರಮಂದಿರಗಳು ಇರುವುದು ಯಾವುದಕ್ಕೆ? ಸ್ಲ್ಯಾಕ್ಸ್​, ಫುಲ್​ ಮೀಲ್ಸ್​ ತಿನ್ನಲು ಬಯಸುವವರು ಸಿನಿಮಾ ಹಾಲ್‌ ಬಿಟ್ಟು ಹೋಟೆಲ್​ ಅಥವಾ ರೆಸ್ಟೋರೆಂಟ್‌ಗೆ ಹೋಗಬೇಕು ಎಂದು ಹೇಳಿದ್ದಾರೆ.
"ಇತ್ತೀಚಿನ ದಿನಗಳಲ್ಲಿ, ಪ್ರೇಕ್ಷಕರು ತಮ್ಮ ಸಮಯದ ಮೂರು ಗಂಟೆಗಳನ್ನು ಚಿತ್ರ ನೋಡುವುದಕ್ಕೆ ಮೀಸಲಿಡುವುದು ಖುಷಿಯ ಸಂಗತಿಯೇ. ಆದರೆ, ತಾವು ಕುಳಿತ ಸೀಟುಗಳಲ್ಲಿ ಊಟ ಮಾಡುವ ಆಯ್ಕೆ ನನಗೆ ನಿಜಕ್ಕೂ ಇಷ್ಟವಾಗುತ್ತಿಲ್ಲ. ನನ್ನ ಪ್ರಕಾರ, ನೀವು ನಿಮಿಷ್ಟದ ತಿಂಡಿ-ತಿನಿಸು ಅಥವಾ ಭೂರಿ ಭೋಜನವನ್ನು ತಿನ್ನಬೇಕು ಅನಿಸಿದರೆ, ದಯವಿಟ್ಟು ರೆಸ್ಟೋರೆಂಟ್‌ಗೆ ಹೋಗಿ, ಥಿಯೇಟರ್​ಗೆ ಅಲ್ಲ" ಎಂದಿದ್ದಾರೆ.
"ಸಿನಿಮಾ ರನ್​ ಆಗುತ್ತಿರುವಾಗ ಆಹಾರವನ್ನು ಆರ್ಡರ್ ಮಾಡಿ ತಿನ್ನುವುದರಿಂದ ಚಿತ್ರವನ್ನು ಎಂಜಾಯ್​ ಮಾಡುವವರಿಗೆ ಒಳ್ಳೆಯ ಅನುಭವ ನೀಡೋದಿಲ್ಲ. ಅದಕ್ಕೆ ಅಡಚಣೆ ಉಂಟು ಮಾಡಿದಂತಾಗುತ್ತದೆ. ನೀವು ಆರ್ಡರ್​ ಮಾಡುವ ಊಟಗಳನ್ನು ಚಿತ್ರದ ಮಧ್ಯೆಯೇ ಸರ್ವೀಸ್​ ಮಾಡುವವರು ತಂದುಕೊಡುತ್ತಾರೆ. ಇದರಿಂದ ಅಕ್ಕ-ಪಕ್ಕ ಕುಳಿತು ನೋಡುವವರಿಗೆ ಅದು ಕಂಪ್ಲೀಟ್​ ಫೀಲ್​ ಕೊಡುವುದಿಲ್ಲ" ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ,(ಏಜೆನ್ಸೀಸ್).