ಈಶಾ ಡಿಯೋಲ್ 
ಬಾಲಿವುಡ್

ನಗಿಸಲಿದ್ದಾರೆ ಈಶಾ ಡಿಯೋಲ್: ‘ಮಾಲಾಮಾಲ್ ವೀಕ್ಲಿ 2’ ಚಿತ್ರತಂಡ ಸೇರಿಕೊಂಡ ಬಾಲಿವುಡ್ ನಟಿ

ಶಿವಮಲ್ಲಯ್ಯ ಸ್ಥಾವರಮಠ

ಪ್ರಮುಖ ಮುಖ್ಯಾಂಶಗಳು

  • ಮಾಲಾಮಾಲ್ ವೀಕ್ಲಿ 2 ಚಿತ್ರದ ತಾರಾಗಣ ವಿಸ್ತಾರ
  • ಮತ್ತಿಬ್ಬರು ನಟಿಯರ ಆಗಮನ, ಈಶಾ ಡಿಯೋಲ್, ಸೋನಿಯಾ ಬನ್ಸಾಲ್ ಸೇರ್ಪಡೆ
  • ಬಹುವರ್ಷಗಳ ಬಳಿಕ ನಗಿಸಲಿದ್ದಾರೆ ನಟಿ ಈಶಾ ಡಿಯೋಲ್​
ಹಿಂದಿಯ ಬಹುನಿರೀಕ್ಷಿತ ಹಾಸ್ಯಪ್ರಧಾನ ‘ಮಾಲಾಮಾಲ್ ವೀಕ್ಲಿ 2’ ಚಿತ್ರದ ತಾರಾಗಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬಾಲಿವುಡ್ ನಟ ಪಾರೇಶ್ ರಾವಲ್ ಮುಖ್ಯಭೂಮಿಕೆಯಲ್ಲಿದ್ದು, ಅವರ ಜತೆಗೆ ರಿತೇಶ್ ದೇಶಮುಖ್, ರಾಜಪಾಲ್ ಯಾದವ್, ಎಲ್ವಿಶ್ ಯಾದವ್ ಹಾಗೂ ನಟಿಯರಾದ ಪರಿಣೀತಿ ಚೋಪ್ರಾ, ಶಿಲ್ಪಾ ಶಿರೋಡ್ಕರ್ ನಟಿಸುವುದು ಖಚಿತವಾಗಿದೆ. ಇದರ ಬೆನ್ನಲ್ಲೇ ಮತ್ತಿಬ್ಬರು ನಟಿಯರು ತಂಡ ಸೇರಿಕೊಂಡಿದ್ದಾರೆ. ಅವರೇ ಹಿಂದಿಯ ಖ್ಯಾತ ತಾರೆ ಈಶಾ ಡಿಯೋಲ್ ಹಾಗೂ ಸೋನಿಯಾ ಬನ್ಸಾಲ್. ಈ ಪೈಕಿ ಈಶಾ ‘ಮಾಲಾಮಾಲ್ ವೀಕ್ಲಿ 2’ಗೆ ಬಂದಿರುವುದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿದ್ದು, ‘ಒನ್ ಟು ಥ್ರಿ’ (2008) ತೆರೆಕಂಡು ಬಹುವರ್ಷಗಳ ಕಾಮಿಡಿ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ‘ಹಿಂದಿನ ‘ನೋ ಎಂಟ್ರಿ’, ‘ಶಾದಿ ನಂ.1’ ಹಾಗೂ ‘ಒನ್ ಟು ಥ್ರಿ’ ಸಿನಿಮಾಗಳಂತ ಕಾಮಿಡಿ ಜಾನರ್‌ಗೆ ಮರಳಬೇಕು ಎಂಬುದು ತುಂಬಾ ದಿನಗಳ ಆಸೆಯಾಗಿತ್ತು. ಇದೀಗ ‘ಮಾಲಾಮಾಲ್ ವೀಕ್ಲಿ 2’ ಮೂಲಕ ಅದು ಸಾಧ್ಯವಾಗುತ್ತಿದೆ. ಈ ಚಿತ್ರದ ಕಥೆಯು ಸಂಪೂರ್ಣ ಹಾಸ್ಯಮಯವಾಗಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಬಹುವರ್ಷಗಳ ಬಳಿಕ ಮೋಜು, ಮಸ್ತಿ ನಗುವಿನ ಜತೆ ಸಂಪೂರ್ಣವಾಗಿ ಮನರಂಜನಾತ್ಮಕ ಸಿನಿಮಾದ ಭಾಗವಾಗಿರುವುದು ನನಗೆ ಸಂತೋಷ ತಂದಿದೆ’ ಎಂದು ಈಶಾ ಡಿಯೋಲ್ ಖುಷಿ ಹಂಚಿಕೊಂಡಿದ್ದಾರೆ. ಪ್ರಿಯದರ್ಶನ್ ನಿರ್ದೇಶನದ ‘ಮಾಲಾಮಾಲ್ ವೀಕ್ಷಿ’ (2006) ಚಿತ್ರದ ಸೀಕ್ವೆಲ್ ಇದಾಗಿದ್ದು, ಅಮ್ರಿತ್ ಜೋಷಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸದ್ಯ ತಾರಾಗಣ ಆಯ್ಕೆ ಪೂರ್ಣಗೊಂಡಿದ್ದು, ನವೆಂಬರ್‌ನಿಂದ ಶೂಟಿಂಗ್ ಆರಂಭವಾಗಲಿದೆ. ಈಶಾ ಡಿಯೋಲ್ ಸದ್ಯ ತೆಲುಗಿನ ‘ಸಂಬರಾಲ ಏಟಿಗಟ್ಟು’, ಹಿಂದಿಯ ‘ಗೂಂಗಟ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್