ಬಾಲಿವುಡ್​ ನಟಿ ದಿಶಾ ಪಟಾನಿ 
ಬಾಲಿವುಡ್

ಮಾದಕ ಫೋಟೋಗಳನ್ನು ಹರಿಬಿಟ್ಟು ನಶೆಯೇರಿಸಿದ ದಿಶಾ: ಬಾಲಿವುಡ್​ ಬ್ಯೂಟಿಯ ಬೋಲ್ಡ್​ ಲುಕ್​ ವೈರಲ್​! Disha Patani

ಬಾಲಿವುಡ್‌ನ ಗ್ಲಾಮರಸ್ ನಟಿ ದಿಶಾ ಪಟಾನಿ ಅವರು ದೀಪಾವಳಿ ಹಬ್ಬದ ಸಂಭ್ರಮದ ನಡುವೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಶೂಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ವಿಜಯವಾಣಿ ಸುದ್ದಿ ಜಾಲ

ದಿಶಾ ಪಟಾನಿ ಗ್ಲಾಮರ್ ಲುಕ್

ದೀಪಾವಳಿ ಹಬ್ಬ ಮುಗಿದಿದ್ದರೂ ದಿಶಾ ಪಟಾನಿ ತಮ್ಮ ಹಬ್ಬದ ಆಚರಣೆಯ ಲೇಟ್ ಲುಕ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ.

ಆಕರ್ಷಕ ಸೀರೆ ವಿನ್ಯಾಸ

ದಿಶಾ ಸೂಕ್ಷ್ಮ ಬೀಡ್‌ವರ್ಕ್ (ಬೀಡ್ಸ್‌ ಕೆಲಸ) ಹೊಂದಿರುವ ಬಿಳಿ ಬಣ್ಣದ ಸೀಕ್ವಿನ್ಡ್ (Sequinned) ಶೀರ್ ಸೀರೆಯನ್ನು ಧರಿಸಿದ್ದು, ಅದು ಪ್ರತಿಯೊಂದು ಆಯಾಮದಲ್ಲೂ ಹೊಳೆಯುವಂತಿದೆ.

ಬ್ರ್ಯಾಲೆಟ್ ಶೈಲಿಯ ಬ್ಲೌಸ್

ಈ ಸೀರೆಗೆ ಜೋಡಿಯಾಗಿ ಅವರು ಸ್ಕ್ಯಾಲಪ್ಡ್ ಬೀಡೆಡ್ ಎಡ್ಜ್ ಹೊಂದಿರುವ ಬಿಳಿ ಬಣ್ಣದ ಬ್ರ್ಯಾಲೆಟ್ ಶೈಲಿಯ ಬ್ಲೌಸ್ ಹಾಗೂ ಶೀರ್ ಫುಲ್ ಸ್ಲೀವ್ಸ್ ಬಳಸಿ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದಾರೆ.

ಸರಳ ಹಾಗೂ ಮೆರುಗು ನೀಡುವ ಮೇಕಪ್

ಸಾಫ್ಟ್ ಪಿಂಕ್ ಮೇಕಪ್ ಶೇಡ್ ಬಾಲಿವುಡ್​ ಬ್ಯೂಟಿ ದಿಶಾ ಅವರ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ನೀಡಿದೆ.

ವಿಶೇಷ ಆಭರಣಗಳ ಆಯ್ಕೆ

ತಮ್ಮ ಲುಕ್‌ಗೆ ತಕ್ಕಂತೆ ದಿಶಾ ಹೂವಿನ ಆಕಾರದ ಇಯರಿಂಗ್ಸ್ (Floral earrings) ಮತ್ತು ಆಕರ್ಷಕವಾದ ರಿಂಗ್ (Statement ring) ಧರಿಸಿ, ಮಿಂಚಿದ್ದಾರೆ

ನ್ಯಾಚುರಲ್ ಕೇಶವಿನ್ಯಾಸ

ಉದ್ದನೆಯ ಕೇಶರಾಶಿಯನ್ನು ಸಡಿಲವಾದ ಅಲೆಗಳಂತೆ (Long loose waves) ಬಿಟ್ಟು ತಮ್ಮದೇ ಆದ ವಿಶಿಷ್ಟ ಫ್ಯಾಷನ್​ ಶೈಲಿಯನ್ನು ಪ್ರದರ್ಶಿಸಿದ್ದಾರೆ.

ಕಾಮೆಂಟ್​ಗಳ ಸುರಿಮಳೆ

ಸದ್ಯ ಹರಿದಾಡುತ್ತಿರುವ ಫೋಟೋಗಳಲ್ಲಿ ನಟಿ ದಿಶಾ ಅವರ ಹಾಟ್​ ಅವತಾರವನ್ನು ನೋಡಿದ ಅಭಿಮಾನಿಗಳು ಕಾಮೆಂಟ್​ಗಳ ಸುರಿಮಳೆಗೈದಿದ್ದು, ನೆಚ್ಚಿನ ನಟಿಯ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.

ಮುಂಬರುವ ಸಿನಿಮಾಗಳು

ಪ್ರಸ್ತುತ ಫ್ಯಾಷನ್ ಜಗತ್ತಿನಲ್ಲಿ ಸದ್ದು ಮಾಡುತ್ತಿರುವ ದಿಶಾ, ಸಿನಿಮೀಯ ರಂಗದಲ್ಲಿ ಸಾಜಿದ್ ಖಾನ್ ನಿರ್ದೇಶನದ ಮುಂಬರುವ ಹೆಸರಿಡದ ಕಾಮಿಡಿ ಸಿನಿಮಾದಲ್ಲಿ ನಟಿಸಲಿದ್ದಾರೆ.