ಬಾಲಿವುಡ್ ನಟಿ ಟ್ವಿಂಕಲ್ ಖನ್ನಾ, ಐಎಎಸ್ ಅಧಿಕಾರಿ ತುಕಾರಾಂ ಮುಂಢೆ
ಮುಂಬೈ: ಸದ್ಯ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ಆಹಾರ ಉತ್ಪನ್ನಗಳ ಪರೀಕ್ಷೆ ಹಾಗೂ ಖ್ಯಾತ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಮೇಲೆ ಆಹಾರ ಸುರಕ್ಷಾ ಅಧಿಕಾರಿಗಳು ನಡೆಸುತ್ತಿರುವ ದಾಳಿಗಳ ಸುದ್ದಿ ಸಾಕಷ್ಟ ಸದ್ದು ಮಾಡುತ್ತಿದೆ.
ಈ ದಾಳಿಗಳ ಮೂಲ ಹಾಗೂ ಆರಂಭವನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಇಲಾಖೆಯ ಆಯುಕ್ತರಾದ ತುಕಾರಾಂ ಮುಂಢೆ ಚಾಲ್ತಿಗೆ ತಂದರು ಎಂದರೂ ತಪ್ಪಾಗದು.
ಈಗ ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಆಹಾರ ಮತ್ತು ಔಷಧ ಇಲಾಖೆಯ ನಿರಂತರ ದಾಳಿಗಳ ಬಗ್ಗೆ ಬಾಲಿವುಡ್ ನಟಿ ಹಾಗೂ ಅಂಕಣಗಾರ್ತಿ ಟ್ವಿಂಕಲ್ ಖನ್ನಾ (Twinkle Khanna praises Tukaram Munde) ನೀಡಿರುವ ಹೇಳಿಕೆ ಎಲ್ಲಡೆ ವೈರಲ್ ಆಗುತ್ತಿದೆ.
ಮನೆಯಲ್ಲೇ ಪನೀರ್ ತಯಾರಿಸುತ್ತಿದ್ದೆವೆ!
ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಆಹಾರ ಪರೀಕ್ಷಾ ಅಧಿಕಾರಿಗಳಿಂದ ಖ್ಯಾತ ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆದು ಅಲ್ಲಿ ತಯಾರಾಗುವ ಆಹಾರ ತಿನ್ನಲು ಯೋಗ್ಯವಲ್ಲ ಎಂಬ ಮಾಹಿತಿ ಹೊರಬರುತ್ತಿದೆ.
ಮೊದಲೆಲ್ಲಾ ನಾನು, ಪನೀರ್ ಟಿಕ್ಕಾ, ಪನೀರ್ ರೋಲ್ಗಳನ್ನು ಹೋಟೆಲ್ಗಳಿಂದ ತರಿಸಿಕೊಳ್ಳುತ್ತಿದೆ. ಆದರೆ ಯಾವಾಗ ತುಕಾರಾಂ ಮುಂಧೆ ಅವರು ಹೋಟೆಲ್ಗಳ ಮೇಲೆ ರೇಡ್ ನಡೆಸಲು ಪ್ರಾರಂಭಿಸಿದರೋ ಅಂದಿನಿಂದ ನಾನು ಮನೆಯಲ್ಲೇ ಪನೀರ್ ಅನ್ನು ತಯಾರಿಸುತ್ತಿದ್ದೆನೆಂದು ಟ್ವಿಂಕಲ್ ಹೇಳಿದ್ದಾರೆ.
ತುಕಾರಾಂ ಮುಂಡೆ ಒಪ್ಪಿಗೆ ಇದೆಯೇ?
ನಾನು ಮೊದಲಿನಿಂದಲೂ ಊಟದ ಬಗ್ಗೆ ಅತೀಯಾದ ಆಸಕ್ತಿ ಹೊಂದಿದವಳು. ಆದರೆ, ನಾವು ತಿನ್ನುವು ಆಹಾರ ಶುದ್ಧವಾಗಿ, ಆರೋಗ್ಯಕರವಾಗಿರಬೇಕು. ಆದರೆ, ಇಂದು ನಾವು ಸೇವಿಸುತ್ತಿರುವ ಆಹಾರಗಳಲ್ಲಿ ಕಲಬೆರಿಕೆ ಕಂಡು ಬರುತ್ತಿದೆ. ಇದು ಆತಂಕಕಾರಿ ಸಂಗತಿಯಾಗಿದೆ ಎಂದಿದ್ದಾರೆ.
ಅದಕ್ಕೆ ನಾನು ಈಗ ಯಾವುದೇ ಹೋಟೆಲ್ಗೆ ಊಟಕ್ಕೆಂದು ತೆರಳಿದಾಗ, ವೇಟರ್ ಬಳಿ ಮೊದಲು, ನಿಮ್ಮ ಹೋಟೆಲ್ ಮೇಲೆ ತುಕಾರಾಂ ಮುಂಢೆ ರೇಡ್ ಮಾಡಿದ್ದಾರಾ? ನಿಮ್ಮ ಆಹಾರಗಳಿಗೆ ಒಪ್ಪಿಗೆ ನೀಡಿದ್ದಾರಾ? ಎಂದು ಮೊದಲು ಕೇಳುತ್ತೇನೆ, ಆಮೇಲೆ ಊಟ ಆರ್ಡರ್ ಮಾಡುತ್ತೇನೆಂದು ಖನ್ನಾ ತಿಳಿಸಿದ್ದಾರೆ, (ಏಜನ್ಸೀಸ್).