Cocktail 2 Sparks Debate After OTT Release
- ಎಕ್ಸ್ನಲ್ಲಿ ಕಾಕ್ಟೇಲ್ 2 ಸಿನಿಮಾದ ವಿರುದ್ಧ ನೆಟ್ಟಿಗರಿಂದ ಹೆಚ್ಚಿ ಟೀಕೆ
- ಎಂಥಾ ಕೆಟ್ಟ ಕತೆ, ಯಾಕಾಗಿ ಈ ಸಿನಿಮಾ ಮಾಡಿದ್ದಾರೆ ಎಂದು ಬೇಸರ
- ರಶ್ಮಿಕಾ ಮಂದಣ್ಣ ಅವರ ಹಿಂದಿ ಉಚ್ಚಾರಣೆ ಚೆನ್ನಾಗಿಲ್ಲ ಎಂದು ನೆಟ್ಟಿಗರು ಟೀಕೆ
Cocktail 2 Sparks Debate After OTT Release:
ಹೋಮಿ ಅದಾಜಾನಿಯಾ ನಿರ್ದೇಶನದ ಕಾಕ್ಟೇಲ್2 ಸಿನಿಮಾ ಜೂನ್ನಲ್ಲಿ ರಿಲೀಸ್ ಆಗಿತ್ತು. ಈ ಚಿತ್ರ ವಿಶ್ವದಾದ್ಯಂತ 130ರಿಂದ 150 ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿಕೊಂಡಿದೆ. ನ್ಯಾಶನಲ್ ಕ್ರಷ್ ರಶ್ಮಿಕಾ ಮಂದಣ್ಣ, ಬಾಲಿವುಡ್ ನಟಿ ಕೃತಿ ಸನೂನ್, ನಟ ಶಾಹಿದ್ ಕಪೂರ್ ನಟನೆಯ ಈ ಚಿತ್ರ ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದ್ದು, ಸಿನಿ ಪ್ರೇಮಿಗಳಿಂದ ನಾನಾ ರೀತಿಯಲ್ಲಿ ಟೀಕೆಗೆ ಗುರಿಯಾಗಿದೆ.
ಕಾಕ್ಟೇಲ್ 2 ಸಿನಿಮಾವು 2012ರಲ್ಲಿ ರಿಲೀಸ್ ಆಗಿದ್ದ ಕಾಕ್ಟೇಲ್ ಚಿತ್ರದ ಆಧ್ಯಾತ್ಮಿಕ ಮುಂದುವರೆದ ಭಾಗ ಎಂದು ಹೇಳಲಾಗಿತ್ತು. ಸೈಫ್ ಅಲಿಖಾನ್, ದೀಪಿಕಾ ಪಡುಕೋಣೆ, ಡಯಾನಾ ಪೆಂಟಿ ನಟಿಸಿದ್ದ ಈ ಸಿನಿಮಾ ಸಾಕಷ್ಟು ಹಿಟ್ ಕಂಡಿತ್ತು. ಆದರೆ ಆ ಸಿನಿಮಾದಷ್ಟು ಈ ಕಾಕ್ಟೇಲ್2 ಚೆನ್ನಾಗಿಲ್ಲ. ಎಲ್ಲವೂ ಕೆಟ್ಟದಾಗಿದೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ
ಕಾಕ್ಟೇಲ್2 ಸಿನಿಮಾ ಕತೆ ಏನು?
ನೆಟ್ಟಿಗರು ಹೀಗಂದ್ರು
ಕಾಕ್ಟೇಲ್ 2 ಸಿನಿಮಾ ಕಾಕ್ಟೇಲ್ಗಿಂತ ತೀರ ಕೆಟ್ಟದಾಗಿದೆ. ಒಂದು ಹಾಡು ಚೆನ್ನಾಗಿಲ್ಲ. ಗುನುಗಲು ಯೋಗ್ಯವಾಗಿಲ್ಲ. ಕೆಲವು ಕಾಮಿಡಿ ಸೀನ್ಗಳನ್ನು ಬಿಟ್ಟರೆ, ಈ ಸಿನಿಮಾ ಮನುಷ್ಯರ ಮೇಲೆ ಯಾವುದೇ ರೀತಿ ಪ್ರಭಾವ ಬೀರೋದಿಲ್ಲ ಎಂದು ಹೇಳಿದರು.
ಆತುರಾತುರವಾಗಿ ಸಿನಿಮಾ ಮುಗಿದಂತಿದೆ
ಅಂಕಿತ್ ಎಂಬುವರು ಟ್ವೀಟ್ ಮಾಡಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ 'ಕಾಕ್ಟೇಲ್ 2' ಸಿನಿಮಾ ನೋಡಿದೆ. ನನಗೆ ಇಷ್ಟವಾಗದ್ದು ಎಂದರೆ, ಪ್ರೀತಿಯ ಲಾಯಲಿಟಿ ಪರೀಕ್ಷೆ. ಆ ಐಡಿಯಾ ತೀರ ಮೂರ್ಖತನದಿಂದ ಕೂಡಿತ್ತು.ಅದರಿಂದಾಗಿ ರಶ್ಮಿಕಾ ಅವರ ಪಾತ್ರದ ಮೇಲೆ ಬೇಸರ ಮೂಡುತ್ತದೆ. ಉತ್ತರ ಭಾರತದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರೂ, ಅವರ ಹಿಂದಿ ಉಚ್ಚಾರಣೆ ಅಷ್ಟಾಗಿ ಒಗ್ಗಿಕೊಂಡಿರಲಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಶಾಹಿದ್ ಅವರು ರಶ್ಮಿಕಾ ಅವರನ್ನು ಒಪ್ಪಿಕೊಳ್ಳುವುದು ಮತ್ತು ಆಯ್ಕೆ ಮಾಡಿಕೊಳ್ಳುವುದು ತುಂಬಾ ಆತುರಾತುರವಾಗಿ ಮುಗಿದಂತೆನಿಸಿತು ಎಂದು ಹೇಳಿದರು.
ಕಾಕ್ಟೇಲ್ 2 ಸಿನಿಮಾ ನೋಡುತ್ತಿದ್ದಂತೆ ನನ್ನ ನಿದ್ರೆ ಹೋಯ್ತು. ಮೊದಲನೆದಾಗಿ ಈ ಸಿನಿಮಾ ಯಾಕ. ಅಸ್ತಿತ್ವದಲ್ಲಿದೆ? ಎರಡನೆಯದಾಗಿ ಇದರ ಕಥೆ ತೀರಾ ಮೂರ್ಖತನದಿಂದ ಕೂಡಿದೆ! ಮೂರನೆಯದಾಗಿ ಶಾಹಿದ್ ಯಾಕೆ ಯುವ ಪಾತ್ರದಲ್ಲಿ ನಟಿಸಲು ಪ್ರಯತ್ನಿಸುತ್ತಿದ್ದಾರೆ? ಸರ್, ಇತರರಂತೆ ನೀವೂ ಕೂಡ ಫೈಟರ್ ಜೆಟ್ ದೇಶಭಕ್ತಿಯ ಹಾದಿಯನ್ನು ಏಕೆ ಹಿಡಿಯಬಾರದು? ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಆರ್ ಎನ್ನುವ ಎಕ್ಸ್ ಬಳಕೆದಾರರು ಕಾಕ್ಟೇಲ್ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು, ನಾನು ಈ ವರ್ಷದಲ್ಲಿ ನೋಡಿದ ಅತತೀ ಕೆಟ್ಟ ಸಿನಿಮಾ ಎಂದರೆ ಅದು ಕಾಕ್ಟೇಲ್2. ಯಾಕಾಗಿ ಈ ಸಿನಿಮಾ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.