ನೋರಾ ಫತೇಹಿ 
ಬಾಲಿವುಡ್

ನೋರಾ ಹೊಸ ಅಲ್ಬಂ : ‘ಸ್ಲೇ ಟು ದ ರಿದಂ’ನಲ್ಲಿ ಹಾಡುವ ಜತೆಗೆ ಕುಣಿದು ಕುಪ್ಪಳಿಸಿದ ನಟಿ

ಪ್ರಮುಖ ಮುಖ್ಯಾಂಶಗಳು

  • ನಟನೆ, ಡಾನ್ಸ್ ಜತೆಗೆ ಗಾಯಕಿಯಾಗಿಯೂ ಆದ ನೋರಾ ಫತೇಹಿ
  • ಹೊಸ ಆಲ್ಬಂ ಹಾಡಿನಲ್ಲಿ ಮಿಂಚಿದ ನಟಿ
  • ‘ಸ್ಲೇ ಟು ದ ರಿದಂ’ ಆಲ್ಬಂ ಗೆ ಉತ್ತಮ ಪ್ರತಿಕ್ರಿಯೆ

ಬಾಲಿವುಡ್ ನಟಿ ನೋರಾ ಫತೇಹಿ ಸುತ್ತ ಎಷ್ಟೇ ವಿವಾದಗಳು ಸುತ್ತಿಕೊಂಡರು, ಅವರೊಬ್ಬ ಬಹುಮುಖ ಪ್ರತಿಭೆ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ನಟನೆ, ಡಾನ್ಸ್, ಆ್ಯಕ್ಷನ್ ಹಾಗೂ ಗಾಯನ... ಹೀಗೆ ನಟಿ ತಮ್ಮನ್ನು ತಾವು ಬಹುಮುಖಿಯಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ಅವರು ಸಿನಿಮಾದ ಮೂಲಕ ಸದ್ದು ಮಾಡದಿದ್ದರೂ, ಆಲ್ಬಂ ಸಾಂಗ್‌ಗಳ ಮೂಲಕ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳ ಹಿಂದೆಯಷ್ಟೇ ರ‌್ಯಾಪರ್ ಹನಿ ಸಿಂಗ್ ಹಾಡಿ, ಸಂಗೀತ ನೀಡಿದ್ದ ‘ಬಾಡಿ ರೋಲ್’ನಲ್ಲಿ ನೋರಾ ಕಾಣಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಆಲ್ಬಂ ಸಾಂಗ್‌ನಲ್ಲಿ ನೋರಾ ನರ್ತಿಸಿದ್ದಾರೆ. ‘ಸ್ಲೇ ಟು ದ ರಿದಂ’ ಎಂಬ ಟೈಟಲ್‌ನ 6.13 ನಿಮಿಷ ಅವಧಿಯ ಈ ಆಲ್ಬಂ ಸಾಂಗ್‌ನಲ್ಲಿ ನೋರಾ ತೇಹಿ ಹಾಡುವ ಜತೆಗೆ ಕುಣಿದು ಕುಪ್ಪಳಿಸಿದ್ದಾರೆ. ಸಂಜೋಯ್ ಸಂಗೀತ ನೀಡಿದ್ದು, ರಜಿತ್ ದೇವ್ ನಿರ್ದೇಶನದ ಜತೆಗೆ ನೃತ್ಯ ಸಂಯೋಜಿಸಿದ್ದಾರೆ. ಇನ್ನು ನೋರಾ ಫತೇಹಿ ಏನರ್ಜಿಟಿಕ್ ಡಾನ್ಸ್‌ನೇ ಈ ಆಲ್ಬಂನ ಹೈಲೈಟ್ ಆಗಿದ್ದು, ಮೊದಲ ದಿನವೇ 54 ಲಕ್ಷ ವೀಕ್ಷಣೆ ಕಂಡಿದೆ. ‘ಈ ಹಾಡು ಪ್ರಪಂಚದ ಗಾಯಕರು ಹಾಗೂ ಡಾನ್ಸರ್‌ಗೆ ಸಲ್ಲಿಸುವ ಗೌರವವಾಗಿದೆ. ಸಂಗೀತವು ಇಡೀ ಜಗತ್ತಿನ ಜನರನ್ನು ಸೆಳೆಯುವ ಜತೆಗೆ ನನ್ನಂತ ಕಲಾವಿದರಿಗೆ ಅನೇಕ ಅವಕಾಶಗಳ ಬಾಗಿಲು ತೆರೆದಿದೆ ಎಂಬುದನ್ನು ಈ ಆಲ್ಬಂ ಸಾಂಗ್ ಒತ್ತಿ ಹೇಳುತ್ತದೆ’ ಎಂದು ನೋರಾ ಖುಷಿ ಹಂಚಿಕೊಂಡಿದ್ದಾರೆ. -ಏಜೆನ್ಸೀಸ್