ಸ್ಟ್ರೀಟ್ಫೈಟರ್ ವಿದ್ಯುತ್ ಜಮ್ವಾಲ್
- ಸ್ಟ್ರೀಟ್ಫೈಟರ್ ಮೂಲಕ ವಿದ್ಯುತ್ ಹಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ
- ವಿದ್ಯುತ್ ಚಿತ್ರದಲ್ಲಿ "ಧಾಲ್ಸಿಮ್' ಎಂಬ ಯೋಗ ಗುರು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
- 1994ರಲ್ಲಿ "ಸ್ಟ್ರೀಟ್ ಫೈಟರ್' ಸಿನಿಮಾ ಮೂಡಿಬಂದಿತ್ತು.
- 31 ವರ್ಷಗಳ ಬಳಿಕ ಅದರ ಮುಂದುವರಿದ ಭಾಗ ಮೂಡಿಬರಲಿದೆ
Vidyuth Jamwal - ಬಾಲಿವುಡ್ನ "ಕಮಾಂಡೋ' ಸರಣಿ ಸೇರಿ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಆ್ಯಕ್ಷನ್ ಸ್ಟಾರ್ ವಿದ್ಯುತ್ ಜಮ್ವಾಲ್ ಹಾಲಿವುಡ್ಗೆ ಪದಾರ್ಪಣೆ ಮಾಡುತ್ತಿರುವುದು ಗೊತ್ತಿತ್ತು. ಈಗಾಗಲೇ ಅದ್ಭುತ ಸ್ಟಂಟ್ಗಳ ಮೂಲಕ ದೇಶ, ವಿದೇಶಗಳಲ್ಲಿ ಅಭಿಮಾನಿಗಳನ್ನು ಗಳಿಸಿರುವ ಅವರ ಪ್ರತಿಭೆಯನ್ನು ಗುರುತಿಸಿ, ಹಾಲಿವುಡ್ನ "ಸ್ಟ್ರೀಟ್ ಫೈಟರ್' ತಂಡ ಸಂಪರ್ಕಿಸಿತ್ತು.
ವಿದ್ಯುತ್ ಚಿತ್ರದಲ್ಲಿ "ಧಾಲ್ಸಿಮ್' ಎಂಬ ಯೋಗಾ ಮಾಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 1987ರಲ್ಲಿ ಜಪಾನ್ ಮೂಲದ ಕಂಪನಿ "ಸ್ಟ್ರೀಟ್ ಫೈಟರ್' ವಿಡಿಯೋ ಗೇಮ್ ರಿಲೀಸ್ ಮಾಡಿತ್ತು. ವಿಶ್ವಾದ್ಯಂತ ಈ ಗೇಮ್ಗೆ ಅದ್ಭುತ ಪ್ರತಿಕ್ರಿಯೆ ದೊರೆತ ಬೆನ್ನಲ್ಲೇ, 1991ರಲ್ಲಿ "ಸ್ಟ್ರೀಟ್ ಫೈಟರ್ 2' ಬಿಡುಗಡೆ ಮಾಡಲಾಗಿತ್ತು. ಈ ಎರಡನೇ ವಿಡಿಯೋ ಗೇಮ್ನಲ್ಲಿ ಭಾರತ ಮೂಲದ ಯೋಗಗುರು "ಧಾಲ್ಸಿಮ್' ಪಾತ್ರವನ್ನು ಪರಿಚಯಿಸಲಾಗಿತ್ತು. ವಿಶೇಷ ಅಂದರೆ ಇದರಲ್ಲಿ ಧಾಲ್ಸಿಮ್ಗೆ ಬೆಂಕಿ ಉಗುಳುವ ಕೈ, ಕಾಲು, ಕತ್ತನ್ನು ಎಷ್ಟು ಉದ್ದ ಬೇಕಾದರೂ ಮಾಡುವ ಶಕ್ತಿಗಳಿರುತ್ತವೆ. ಅದಕ್ಕೂ ಉತ್ತಮ ಪ್ರತಿಕ್ರಿಯೆ ದೊರೆತ ಬೆನ್ನಲ್ಲೇ, 1994ರಲ್ಲಿ "ಸ್ಟ್ರೀಟ್ ಫೈಟರ್' ಸಿನಿಮಾ ಮೂಡಿಬಂದಿತ್ತು.
ಇದೀಗ ಮೂರು ದಶಕಗಳ ಬಳಿಕ ಮತ್ತೆ ಇದೇ ಕಥೆಯನ್ನು ಹೊಸ ರೀತಿಯಲ್ಲಿ ಹೇಳಲು ನಿರ್ದೇಶಕ ಕಿಟಾವೊ ಸಕುರಾಯ್ ಮುಂದಾಗಿದ್ದಾರೆ. ಇತ್ತೀಚೆಗಷ್ಟೆ ಪಾತ್ರಗಳನ್ನು ಚಿತ್ರದ ಮೊದಲ ಟೀಸರ್ ಮತ್ತು ವಿದ್ಯುತ್ ನಿಭಾಯಿಸುತ್ತಿರುವ "ಧಾಲ್ಸಿಮ್' ಸೇರಿ ಬೇರೆ ಪಾತ್ರಗಳನ್ನು ಪರಿಚಯಿಸುವ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ವಿದ್ಯುತ್ ಜತೆ ಕುಸ್ತಿಪಟುಗಳಾದ ಜೇಸನ್ ಮಮೋವಾ, ರೋಡಿ ಕೋಡ್ಸ್ ಹಾಗೂ ಆ್ಯಂಡ್ರ್ಯೂ ಕೋಯಿ, ನೋವಾ ಸೆಂಟಿನಿಯೊ, ಕರ್ಟಿಸ್ ಜಾಕ್ಸನ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ. &ಏಜೆನ್ಸೀಸ್