ಬಹುಕಾಲದ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಂಪಾಲ್ 
ಬಾಲಿವುಡ್

ಎರಡು ಮಕ್ಕಳಾದ ಬಳಿಕ ಮದುವೆಯಾದ ಅರ್ಜುನ್​ ರಾಂಪಾಲ್​: 14 ವರ್ಷ ಕಿರಿಯ ಗೇಬ್ರಿಯೆಲಾ ಜೊತೆ ಸರಳ ವಿವಾಹ! Arjun Rampal marries Gabriella

ಪ್ರಮುಖ ಮುಖ್ಯಾಂಶಗಳು

  • ಎರಡನೇ ಮದುವೆಯಾದ ಅರ್ಜುನ್​ ರಾಂಪಾಲ್​
  • ಬಹುಕಾಲದ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯೇಡ್ಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ರಾಂಪಾಲ್
  • ಎರಡು ಮಕ್ಕಳನ್ನು ಪಡೆದ ಬಳಿಕ ಮದುವೆಯಾದ ನಟ
ಪಣಜಿ: ಖ್ಯಾತ ಬಾಲಿವುಡ್​ ನಟ, ಧುರಂಧರ್​ ಸಿನಿಮಾದಲ್ಲಿ ಇಲ್ಯಾನ್​ ಕಶ್ಮೀರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅರ್ಜುನ್​ ರಾಂಪಾಲ್​ (Arjun Rampal marries Gabriella), ತಮ್ಮ ಬಹುಕಾಲದ ಗೆಳತಿ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.
53 ವರ್ಷದ ಅರ್ಜುನ್​ ತಮಗಿಂದ 14 ವರ್ಷ ಕಿರಿಯ ಗೇಬ್ರಿಯೆಲಾಳನ್ನು ಶುಕ್ರವಾರ (ಆಗಸ್ಟ್​​ 21) ಗೋಪಾದ ಮಪುಸಾದ ಸಬ್​ ರೆಜಿಸ್ಟರ್​​ ಕಚೇರಿಯಲ್ಲಿ ಸಂಕ್ಷಿಪ್ತವಾಗಿ ಮದುವೆಯಾಗಿದ್ದಾರೆಂದು ತಿಳಿದು ಬಂದಿದೆ.

ವಿಚ್ಛೇದಿತ ನಟ!

ಅರ್ಜುನ್​ ರಾಂಪಾಲ್​ 1998 ರಲ್ಲಿ ಮಾಡೆಲ್​ ಮೆಹರ್ ಜೆಸಿಯಾ ಜೊತೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದು, ತಮ್ಮ ಮೊದಲ ಪತ್ನಿಯಿಂದ ಮಹಿಕಾ ಮತ್ತು ಮೈರಾ ಎಂಬ ಇಬ್ಬರು ಪುತ್ರಿಯರನ್ನು ಪಡೆದಿದ್ದರು. 2018 ರಲ್ಲಿ ಈ ಜೋಡಿ ತಾವಿಬ್ಬರು ದೂರವಾಗುತ್ತಿರುವುದಾಗಿ ಘೋಷಿಸಿ, 2019 ರಲ್ಲಿ ಬಾಂದ್ರಾ ನ್ಯಾಯಾಲಯದಿಂದ ವಿಚ್ಛೇದನ ಪಡೆದುಕೊಂಡಿದ್ದರು.

ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ನಂತರ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಜೊತೆ ಹತ್ತಿರವಾದ ಅರ್ಜುನ್​ ಇಕೆಯಿಂದ 2019 ರಲ್ಲಿ ಆರಿಕ್​ ಮತ್ತು ನಾಲ್ಕು ವರ್ಷದ ನಂತರ ಆರಿವ್​ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದಿದ್ದಾರೆ. 2025 ರಲ್ಲಿ ಗೇಬ್ರಿಯೆಲಾ ಜೊತೆ ನಿಶ್ಚಿತಾರ್ತ ಮಾಡಿಕೊಂಡಿದ್ದ ನಟ ಈದೀಗ ತಮ್ಮ ಗೆಳತಿಯನ್ನು ಹೆಂಡತಿಯನ್ನಾಗಿ ಸ್ವೀಕರಿಸಿದ್ದಾರೆ.


ಮಕ್ಕಳಿದ್ದರು ಏಕೆ ಮದುವೆಯಾಗಿರಲಿಲ್ಲ!

ಅರ್ಜುನ್​ ರಾಂಪಾಲ್​ ಹಾಗೂ ಗೇಬ್ರಿಯೆಲಾ ಡೆಮೆಟ್ರಿಯಾಡ್ಸ್ ಮದುವೆಗೂ ಮುನ್ನವೇ ಎರಡು ಮಕ್ಕಳನ್ನು ಪಡೆದಿದ್ದರು. ನೀವು ಮಕ್ಕಳನ್ನು ಪಡೆದಿದ್ದಿರಿ ಆದರೆ ಏಕೆ ಮದುವೆಯಾಗಿಲ್ಲ ಎಂಬ ಪ್ರಶ್ನೆಗೆ ಅರ್ಜುನ್​, ಮದುವೆ ಎಂದರೆ ಅದು ಒಂದು ಹಾಳೆ ಮೇಲೆ ಮಾಡಿಕೊಂಡ ಒಪ್ಪಂದ. ನಾನು ಮತ್ತು ಗೇಬ್ರಿಯೆಲಾ ಇಬ್ಬರು ಒಬ್ಬರನೊಬ್ಬರು ನಂಬುತ್ತೇವೆ, ನಮ್ಮ ಪ್ರೀತಿಗೆ ಸಾಕ್ಷಿಯೆಂಬಂತೆ ಇಬ್ಬರು ಮಕ್ಕಳಿದ್ದಾರೆ. ಒಂದು ಕಾಗದದ ತುಂಡನ್ನು ನಂಬಿಕೊಂಡು ಒಬ್ಬರನ್ನು ಇಷ್ಟ ಪಡಲು ಸಾಧ್ಯವಿಲ್ಲ ಎಂದು ರಾಂಪಾಲ್​ ಉತ್ತರಿಸಿದ್ದರು, (ಏಜನ್ಸೀಸ್​).