Amitabh Bachchan ಚಿತ್ರ Instagram 
ಬಾಲಿವುಡ್

ಅಂಕಿಯಲ್ಲಾದ ಸಣ್ಣ ಎಡವಟ್ಟು, ಅನಾವರಣಗೊಂಡ ಅಭಿಮಾನದ ಹೊಳೆ: ಬಿಗ್ ಬಿ ಸರಳತೆಗೆ ಮನಸೋತ ಜಾಲತಾಣ! Amitabh Bachchan

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ನ ಬಿಗ್​ ಬಿ​ ತಮ್ಮ ಎಕ್ಸ್​ ಖಾತೆಯಲ್ಲಿ ಪ್ರತಿಯೊಂದು ಪೋಸ್ಟ್​ಗೆ ಸಂಖ್ಯೆ ನೀಡುವ ವಿಶಿಷ್ಟ ಅಭ್ಯಾಸ ಹೊಂದಿದ್ದಾರೆ
  • ಇತ್ತೀಚೆಗೆ ಅವರು ಮಾಡಿದ ಒಂದು ಸಣ್ಣ ನಂಬರ್ ಎಡವಟ್ಟು ಹಾಗೂ ಅದಕ್ಕೆ ಅವರು ನೀಡಿದ ಕ್ಷಮಾದಾನ ಎಲ್ಲೆಡೆ ವೈರಲ್​
  • ಅಮಿತಾಭ್ ಬಚ್ಚನ್ ತಮ್ಮ 5817ನೇ ಪೋಸ್ಟ್ ನಂತರ, ಸರಣಿ ತಪ್ಪಿಸಿ 5718, 5719 ಎಂದು ತಪ್ಪಾಗಿ ಸಂಖ್ಯೆಯನ್ನು ಹಂಚಿಕೊಂಡಿದ್ದರು

ಮುಂಬೈ: ಬಾಲಿವುಡ್​ನ ಬಿಗ್​ ಬಿ ಅಮಿತಾಭ್​ ಬಚ್ಚನ್​ (Amitabh Bachchan) ತಮ್ಮ ಎಕ್ಸ್​ ಖಾತೆಯಲ್ಲಿ ಪ್ರತಿಯೊಂದು ಪೋಸ್ಟ್​ಗೆ ಸಂಖ್ಯೆ ನೀಡುವ ವಿಶಿಷ್ಟ ಅಭ್ಯಾಸವನ್ನು ಹಲವು ವರ್ಷಗಳಿಂದ ಮುಂದುವರೆಸಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚೆಗೆ ಅವರು ಮಾಡಿದ ಒಂದು ಸಣ್ಣ ನಂಬರ್ ಎಡವಟ್ಟು ಹಾಗೂ ಅದಕ್ಕೆ ಅವರು ನೀಡಿದ ಕ್ಷಮಾದಾನ ವಿವರಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

' huge error' ಎಂದ ಬಿಗ್ ಬಿ

ಅಮಿತಾಭ್ ಬಚ್ಚನ್ ತಮ್ಮ 5817ನೇ ಪೋಸ್ಟ್ ನಂತರ, ಸರಣಿ ತಪ್ಪಿಸಿ 5718, 5719 ಎಂದು ತಪ್ಪಾಗಿ ಸಂಖ್ಯೆಯನ್ನು ಹಂಚಿಕೊಂಡಿದ್ದರು. ಆದಾಗ್ಯೂ, ಅಭಿಮಾನಿಯೊಬ್ಬರು ಈ ತಪ್ಪನ್ನು ಎತ್ತಿ ತೋರಿಸಿದ ತಕ್ಷಣ ಜಾಗೃತರಾದ ಬಚ್ಚನ್​ T 5820 - ನನ್ನಿಂದ ಸಂಖ್ಯೆ ಹಾಕುವಲ್ಲಿ ಬಹುದೊಡ್ಡ ತಪ್ಪಾಗಿದೆ, ಕ್ಷಮಿಸಿ.. 5817ರ ನಂತರ 5818, 5819, 5820 ಎಂದು ಓದಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ತಪ್ಪನ್ನು ತಿದ್ದಿದ 'ಸುನಿಲ್' ಎಂಬ ಅಭಿಮಾನಿಗೆ 'Extended Family (EF)' ಎಂದು ಕರೆಯುತ್ತ ಧನ್ಯವಾದ ತಿಳಿಸಿದ್ದಾರೆ.
ಆದಾಗ್ಯೂ, ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಹಾಸ್ಯಮಯ ಕಮೆಂಟ್​ಗಳ ಮೂಲಕ ಸಂಭ್ರಮಿಸಿದ್ದಾರೆ.
ಒಳ್ಳೆಯ ಕಾರ್ಯಕ್ಕೆ ಕೊಡುಗೆ ನೀಡಿದ 'ಇಎಫ್ ಸುನಿಲ್' ಅವರ ಸೇವೆಯನ್ನು ಮಾನವಕುಲ ಎಂದಿಗೂ ನೆನಪಿನಲ್ಲಿಡುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಸುನಿಲ್ ತಮ್ಮ ವಾಟ್ಸಾಪ್ ಫ್ಯಾಮಿಲಿ ಗ್ರೂಪ್‌ನಲ್ಲಿ ಗಾಗಲ್ಸ್ ಹಾಕಿ ಜಂಬ ಕೊಚ್ಚಿಕೊಳ್ಳುವ ಜಿಐಎಫ್ (GIF) ಹಂಚಿಕೊಂಡಿದ್ದಾರೆ.
ಇತ್ತೀಚಿನ ಪೇಪರ್ ಲೀಕ್ ವಿವಾದವನ್ನು ಉಲ್ಲೇಖಿಸಿ, " ಬಿಗ್​ ಬಿ ನೀವು ತಪ್ಪನ್ನು ಒಪ್ಪಿಕೊಂಡಿದ್ದು ಒಳ್ಳೆಯದಾಯಿತು, ಇಲ್ಲದಿದ್ದರೆ ಈ 'ನಂಬರ್ ಲೀಕ್' ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ದೇಶವ್ಯಾಪಿ ಪ್ರತಿಭಟನೆ ಮಾಡಲು ಯೋಜಿಸಿದ್ದೆವು!" ಎಂದು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ.
"‘ದೋ ಔರ್ ದೋ ಪಾಂಚ್’ ಸಿನಿಮಾದ ನಂತರ ಬಿಗ್ ಬಿ ಮಾಡಿದ ಮೊದಲ ತಪ್ಪಿದು! ಎಂದು ಅಭಿಮಾನಿಗಳು ಹಳೆಯ ಚಿತ್ರಗಳನ್ನು ನೆನಪಿಸಿಕೊಂಡಿದ್ದಾರೆ. ‘ಕೌನ್ ಬನೇಗಾ ಕರೋಡ್‌ಪತಿ’ (KBC) ಶೋ ಉಲ್ಲೇಖಿಸಿ, "ಅಮಿತಾಭ್ ಕೆಬಿಸಿಯಲ್ಲಿ ಸ್ಪರ್ಧಿಯಾದರೆ ಅವರಿಗೆ 7 ಕೋಟಿ ರೂಪಾಯಿಯ ಪ್ರಶ್ನೆಯೇ 'ನಿಮ್ಮ ಕೊನೆಯ ಟ್ವೀಟ್ ನಂಬರ್ ಯಾವುದು?' ಎಂದಾಗಿರಬೇಕು ಎಂದು ತಮಾಷೆ ಮಾಡಿದ್ದಾರೆ (ಏಜೆನ್ಸೀಸ್​).