'ಶೂರ್ಪನಖಿ' ಪಾತ್ರವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಎಂದು ನಟಿ ರಕುಲ್ ಪ್ರೀತ್ ಸಿಂಗ್
- 'ಶೂರ್ಪನಖಿ' ಪಾತ್ರವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಎಂದು ನಟಿ ರಕುಲ್ ಪ್ರೀತ್ ಸಿಂಗ್
- ಇಷ್ಟು ವರ್ಷಗಳ ಕಾಲ ಅವಳನ್ನು ತಪ್ಪಾಗಿ ಅರ್ಥೈಸಲಾಗಿದೆ
- ದೀಪಾವಳಿಗೆ ತೆರೆಕಾಣಲಿರುವ ರಾಮಾಯಣ ಭಾಗ 1
ಮುಂಬೈ: ಭಾರತದ ಸಿನಿ ಪ್ರೇಕ್ಷಕರು ತುದಿಗಾಲಿನಿಂದ ನಿಂತು ಕಾಯುತ್ತಿರುವ ಸಿನಿಮಾ ಎಂದರೆ ಅದು ನಿಮಿತ್ ಮಲೋತ್ರಾ ನಿರ್ದೇಶನದ 'ರಾಮಾಯಣ' ಎಂದರೆ ಸುಳ್ಳಲ್ಲ. ನಮ್ಮ ಮಣ್ಣಿನ ಕಥೆಯನ್ನು ಎಷ್ಟು ವಿಜಂಭೃಣೆಯಿಂದ, ಮನಮೋಹಕವಾಗಿ ಈ ಸಿನಿಮಾ ಪರದೆ ಮೇಲೆ ಕಾಣಿಸಲಿದೆ ಎಂದು ಎಲ್ಲರೂ ಕಾತುರವಾಗಿ ಕಾಯುತ್ತಿರುವುದು ನಿಜವಾಗಿದೆ.
ಈಗ ಈ ಸಿನಿಮಾದಲ್ಲಿ ರಾವಣನ ಸಹೋದರಿ ಶೂರ್ಪನಖಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟಿ ರಕುಲ್ ಪ್ರೀತ್ ಸಿಂಗ್(Rakul Preet Singh on Shurpanakha), ಈ ಪಾತ್ರದ ಬಗ್ಗೆ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಮಾಹಿತಿಯೊಂದು ಈಗ ಸಕ್ಕತ್ ವೈರಲ್ ಆಗುತ್ತಿದೆ.
ಅವಳದು 'ತಪ್ಪಾಗಿ ಅರ್ಥೈಸಿಕೊಂಡ ಪಾತ್ರ'!
ರಾಮಾಯಣದಲ್ಲಿ ಶೂರ್ಪನಖಿ ಪಾತ್ರ ಒಂಧರ್ಥದಲ್ಲಿ ಬಹಳ ಸಂಕೀರ್ಣತೆಯಿಂದ ಕೂಡಿರುವ ಪಾತ್ರವಾಗಿದೆ, ಹಾಗೂ ಇದೇ ಕಾರಣವೇ ನಾನು (ರಕುಲ್ ಪ್ರೀತ್ ಸಿಂಗ್) ಈ ಪಾತ್ರವನ್ನು ಒಪ್ಪಿಕೊಳ್ಳುವಂತೆ ಮಾಡಿತು.
ರಾಮಾಯಣದಲ್ಲಿ ನಾವು ಶೂರ್ಪನಖಿಯನ್ನು ಕೇವಲ ಒಂದು ಸನ್ನಿವೇಶದ ಮೂಲಕ ನೆನಪಿಗೆ ಬರುತ್ತಾಳೆ, ಆದರೆ ಅವಳಲ್ಲಿ ಕೂಡ ಹಲವು ರೀತಿಯ ಕತೆಗಳಿವೆ ಎಂದು ನಾನು ನಂಬಿದ್ದೇನೆ. ಹೀಗಾಗಿ ಈ ಸಿನಿಮಾವನ್ನು ವೀಕ್ಷಿಸಲು ಬರುವ ಪ್ರೇಕ್ಷಕರು ಈ ಶೂರ್ಪನಖಿ ಪಾತ್ರವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ ಎಂದು ರಕುಲ್ ಪ್ರೀತ್ ಸಿಂಗ್ ವಿನಂತಿಸಿಕೊಂಡಿದ್ದಾರೆ.
ಧೂಳೆಬ್ಬಿಸುತ್ತಿದೆ ರಾಮಾಯಣ ಟ್ರೇಲರ್!
ಇದೇ ದೀಪಾವಳಿಯಂದು ತೆರೆಕಾಣಲು ಸಿದ್ಧವಾಗಿರುವ ರಾಮಾಯಣ ಭಾಗ 1 ರ ಟ್ರೇಲರ್ ಇದಾಗಲೇ ಬಿಡುಗಡೆಯಾಗಿದ್ದು, ದೇಶದೆಲ್ಲಡೆ ಈ ಸಿನಿಮಾದ ಮಾತುಗಳೇ ಕೇಳಿ ಬರುತ್ತಿದೆ. ಹಿಂದೂ ಧರ್ಮದಲ್ಲಿ ಪವಿತ್ರ ಸಮಯ ಎಂದು ಹೇಳಲಾಗುವ ಬ್ರಹ್ಮ ಮುಹೂರ್ತ(ಬೆಳಿಗ್ಗೆ 4 ಗಂಟೆ) ದಲ್ಲಿ ಈ ಸಿನಿಮಾದ ಟ್ರೇಲರ್ ಲಾಂಚ್ಆಗಿದ್ದು ಇಲ್ಲಿವರೆಗೆ ಸುಮಾರು 18 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ.
ಈ ಸಿನಿಮಾದಲ್ಲಿ ಪ್ರಭು ಶ್ರೀರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಕನ್ನಡಿಗ ಯಶ್, ಸೀತಾಮಾತೆ ಪಾತ್ರದಲ್ಲಿ ಸಾಯಿ ಪಲ್ಲವಿ, ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್, ಹನುಮಂತನಾಗಿ ಸನ್ನು ಡಿಯೋಲ್ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಸಿನಿಮಾವು ಎರಡು ಭಾಗಗಳಲ್ಲಿ ತೆರೆಕಾಣಲಿದ್ದು, ಮೊದಲ ಭಾಗವು 2026 ರ ದೀಪಾವಳಿಗೆ ತೆರೆಕಂಡರೆ, ಎರಡನೇ ಭಾಗವು 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಸಿನಿತಂಡ ತಿಳಿಸಿದೆ, (ಏಜನ್ಸೀಸ್).