ಮುಂಬೈ: ಬಾಲಿವುಡ್ನ ಲೆಜೆಂಡರಿ ನಟ ದಿಲೀಪ್ ಕುಮಾರ್ ಇಂದು ಬೆಳಿಗ್ಗೆ ಮುಂಬೈನಲ್ಲಿ ನಿಧನರಾಗಿದ್ದಾರೆ. ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಇಂದು ಕೊನೆಯುಸಿರೆಳೆದಿದ್ದಾರೆ. ದಿಲೀಪ್ ಕುಮಾರ್ ಎಂಬ ದೈತ್ಯ ನಟನ ನಿಧನದಿಂದ ಬಾಲಿವುಡ್ ಶೋಕದಲ್ಲಿ ಮುಳುಗಿದೆ. ಹಲವು ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ಅಗಲಿದೆ ಜನಪ್ರಿಯ ನಾಯಕನಿಗೆ ತಮ್ಮ ಸಂತಾಪಗಳನ್ನು ಸೂಚಿಸಿದ್ದಾರೆ.