ಮಾಧುರಿ ದೀಕ್ಷಿತ್ ಕುರಿತು ಒಂದು ಸರಣಿ ಮಾಡುವುದಾಗಿ ಮೊದಲಿಗೆ ಘೋಷಿಸಿದವರು ಪ್ರಿಯಾಂಕಾ ಚೋಪ್ರಾ. ತಮ್ಮ ನಿರ್ಮಾಣ ಸಂಸ್ಥೆಯಡಿ ಸದ್ಯದಲ್ಲೇ ಚಿತ್ರೀಕರಣ ಮಾಡುವುದಾಗಿ ಅವರು ಸೋಷಿಯಲ್ ಮೀಡಿಯಾ ಮೂಲಕ ಘೋಷಿಸಿದ್ದರು. ಆದರೆ, ಅದೀಗ ಸುಳ್ಳಾಗಿದೆ. ತಮ್ಮ ಕುರಿತ ಸರಣಿ ಕ್ಯಾನ್ಸಲ್ ಆಗಿದೆ ಎಂದು ಖುದ್ದು ಮಾಧುರಿ ಹೇಳಿಕೊಂಡಿದ್ದಾರೆ.
ಮಾಧುರಿ ದೀಕ್ಷಿತ್, ಬಾಲಿವುಡ್ನ ಜನಪ್ರಿಯ ನಟಿಯಾಗಿದ್ದವರು. 90ರ ದಶಕದಲ್ಲಿ ಉತ್ತುಂಗದಲ್ಲಿದ್ದವರು. ಹೀಗಿರುವಾಗ, ಅದೊಂದು ದಿನ ಚಿತ್ರರಂಗಕ್ಕೆ ವಿದಾಯ ಹೇಳಿ, ಡಾ. ಶ್ರೀರಾಮ್ ನೇನೆ ಅವರನ್ನು ಮದುವೆಯಾಗಿ ಅಮೆರಿಕಾಗೆ ಹೋಗಿ ನೆಲೆಸಿದ್ದರು. ಇದೆಲ್ಲವನ್ನೂ ದಾಖಲಿಸುವ ಒಂದು ಸರಣಿ ಮಾಡುವುದಾಗಿ ಪ್ರಿಯಾಂಕಾ ಘೋಷಿಸಿದಾಗ, ಮಾಧುರಿ ಅಭಿಮಾನಿಗಳು ಅದೆಷ್ಟು ಖುಷಿಯಾಗಿದ್ದರೋ ಹೇಳುವುದು ಕಷ್ಟ. ಆದರೆ, ಈಗ ಅದು ಸುಳ್ಳಾಗಿದೆ.
‘ದಿ ಫೇಮ್ ಗೇಮ್ ಎಂಬ ವೆಬ್ಸರಣಿಯಲ್ಲಿ ಮಾಧುರಿ ನಟಿಸಿದ್ದು, ಆ ಸರಣಿಯು ನೆಟ್ಫ್ಲಿಕ್ಸ್ನಲ್ಲಿ ಇತ್ತೀಚೆಗೆ ಬಿಡುಗಡೆ ಆಗಿ ಸಾಕಷ್ಟು ಜನಪ್ರಿಯವಾಗಿದೆ.