ಬಾಲಿವುಡ್ ನಟಿ ಜಾಹ್ನವಿ ಕಪೂರ್ ಆಗಾಗ ಬೋಲ್ಡ್ ನಟನೆ, ಫ್ಯಾಷನ್ ಜತೆಗೆ ಬೋಲ್ಡ್ ಹೇಳಿಕೆಗಳಿಂದಲೂ ಸುದ್ದಿಯಾಗುತ್ತಿರುತ್ತಾರೆ. ಅದಕ್ಕೆ ಸಾ ಎಂಬಂತೆ ಇತ್ತೀಚೆಗಷ್ಟೆ ಅವರು ಮಹಿಳೆಯರ ಪೀರಿಯಡ್ಸ್ ಮತ್ತು ಆ ಸಂದರ್ಭದಲ್ಲಿ ಅನುಭವಿಸುವ ಹೊಟ್ಟೆನೋವು, ಮೂಡ್ ಸ್ವಿಂಗ್ಗಳ ಬಗ್ಗೆ ಮಾತನಾಡಿದ್ದಾರೆ.
"ಮುಟ್ಟಿನ ಸಮಯದಲ್ಲಿ ಕೆಲವೊಮ್ಮೆ ಮೂಡ್ ಸ್ವಿಂಗ್ಗಳಾದಾಗ ಮಹಿಳೆಯರು ಕಿರಿಕಿರಿಯಾಗಿ ಮಾತನಾಡುವುದು ಅಥವಾ ಜಗಳಕ್ಕಿಳಿಯುವುದು ಸಾಮಾನ್ಯ. ಆಗ ಪುರುಷರು ಕಾಳಜಿಯಿಂದ ಪ್ರತಿಕ್ರಿಯಿಸುವುದು ಉತ್ತಮ. ಬದಲಾಗಿ ಕಿರಿಕಿರಿಯಾಗುವಂತೆಯೇ ಯಾಕೆ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಆದರೆ, ಒಂದು ಮಾತಂತೂ ಸತ್ಯ. ಮುಟ್ಟಿನ ಸಮಯದಲ್ಲಿ ನಾವು ಎದುರಿಸುವ ನೋವು ಮತ್ತು ಮೂಡ್ ಸ್ವಿಂಗ್ಗಳನ್ನು ಪುರುಷರು ಒಂದು ನಿಮಿಷವೂ ತಡೆದುಕೊಳ್ಳಲ್ಲ. ಹಾಗೇನಾದರೂ ಗಂಡಸರಿಗೂ ಮುಟ್ಟಾಗುವಂತಿದ್ದರೆ ಇಷ್ಟರಲ್ಲಿ ನ್ಯೂಕ್ಲಿಯರ್ ಯುದ್ಧಗಳೇ ನಡೆದುಹೋಗುತ್ತಿದ್ದವು' ಎಂದಿದ್ದಾರೆ ಜಾಹ್ನವಿ.
ಅವರ ಈ ಮಾತು ಸದ್ಯ ಜಾಲತಾಣದಲ್ಲಿ ವೈರಲ್ ಆಗಿದ್ದು, ಜಾಹ್ನವಿ ಕಪೂರ್ ಬೋಲ್ಡ್ ಹೇಳಿಕೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ "ಉಲಝ್', "ಮಿ. ಆ್ಯಂಡ್ ಮಿಸಸ್ ಮಹಿ' ಹಾಗೂ "ದೇವರ 1' ಚಿತ್ರಗಳಲ್ಲಿ ನಟಿಸಿದ್ದ ಜಾಹ್ನವಿ, ಸದ್ಯ "ಸನ್ನಿ ಸಂಸ್ಕಾರಿ ಕೀ ತುಳಸಿ ಕುಮಾರಿ', "ಪರಮ ಸುಂದರಿ' ಹಾಗೂ "ಪೆದ್ದಿ' ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.