ಸಿನಿವಾಣಿ

ಸಂಗೀತಾ ಭಟ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ಶಿಫ್ಟ್..BBK13

  • ಸಂಗೀತಾ ಭಟ್ ಆರೋಗ್ಯದಲ್ಲಿ ಏರುಪೇರು

  • ಟಾಸ್ಕ್​ ವೇಳೆ ಉಸಿರಾಟದ ಸಮಸ್ಯೆ ಎದುರಿಸಿದ ಸಂಗೀತಾ ಭಟನ್​

  • ಇನ್ಹೇಲರ್​ಗಾಗಿ ತಡಕಾಡಿದ್ರು ಸಿಗದ ಕಾರಣ ಕನ್ಫೆಷನ್ ರೂಂಗೆ ಹೊತ್ತೊಯ್ದ ತಾಂಡವ್ ರಾಮ್

ಬಿಗ್​ಬಾಸ್​ ಮನೆಯಲ್ಲಿ ರಾಕ್ಷಸರು ವರ್ಸಸ್​ ಗಂಧರ್ವರು ಟಾಸ್ಕ್​ ನಡೆಯುವ ಸಂದರ್ಭದಲ್ಲಿ ಸಂಗೀತಾ ಭಟ್​​ ಅವರ ಆರೋಗ್ಯದಲ್ಲಿ ಏರುಪೇರುಂಟಾಗಿ ಕುಸಿದು ಬಿದ್ದಿದ್ದಾರೆ. ಸದ್ಯ ಅವರನ್ನು ಬಿಗ್​ಬಾಸ್​​​ ವೈದ್ಯಕೀಯ ತಂಡ ನೋಡಿಕೊಳ್ಳುತ್ತಿದೆ ಎನ್ನಲಾಗಿದೆ.

ಸಂಗೀತಾ ಭಟ್​ ಅವರು ಅಸ್ವಸ್ಥಗೊಂಡ ಬಗ್ಗೆ ಬಿಗ್​ಬಾಸ್ ತಂಡ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ, 24 ಗಂಟೆ ಬಿಗ್​ಬಾಸ್​​ ವೀಕ್ಷಣೆಗೆ ಲಭ್ಯವಿರುವ ಜಿಯೋ ಹಾಟ್​ಸ್ಟಾರ್​ನಲ್ಲಿ ನೋಡಿದ ವೀಕ್ಷಕರು ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಸಂಗೀತಾ ಅವರ ಆರೋಗ್ಯ ಸುಧಾರಿಸಲಿ ಎಂದು ಹಾರೈಸಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಇನ್​ಸ್ಟಾಗ್ರಾಮ್​ ಸೇರಿದಂತೆ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸಂಗೀತಾ ಭಟ್​ ಅವರು ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ಅವರ ಸುತ್ತಲೂ ಸ್ಪರ್ಧಿಗಳು ಅವರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನೂ ಸೌಂದರ್ಯ ಮತ್ತು ಕಾವ್ಯಾ ಅವರಿಗೆ ಇನ್ಹೇಲರ್​ ನೀಡಲು ತಡಕಾಡಿದರು. ಇನ್ಹೇಲರ್​ ಸಿಗದ ಕಾರಣ ತಾಂಡವ್​ ರಾಮ್, ಸಂಗೀತಾರನ್ನು​​ ಕನ್ಫೆಷನ್​ ಕೋಣೆಗೆ ಕರೆದೊಯ್ದಿರು. ಇತರ ಸ್ಪರ್ಧಿಗಳು ಆತಂಕಕ್ಕೆ ಒಳಗಾಗಿರುವುದು ವಿಡಿಯೋದಲ್ಲಿ ಇದೆ.

ಸಂಗೀತಾ ಅರ್ಧಕ್ಕೆ ಔಟ್?

ಇತ್ತೀಚೆಗೆ ಓಂ ಪ್ರಕಾಶ್​ ರಾವ್​ ಅವರು ಆರೋಗ್ಯದ ಕಾರಣದಿಂದಾಗಿ ಬಿಗ್​ಬಾಸ್ ಪಯಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಸದ್ಯ ಅವರ ಹಾದಿಯಲ್ಲೇ ಸಂಗೀತಾರ ಪಯಣ ಇರಲಿದ್ಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಸಂಗೀತಾ ಭಟ್​ ಅವರ ಆರೋಗ್ಯದಲ್ಲಿ ಸುಧಾರಿಸಿದ ನಂತರ ವಾಪಸ್ ಆಗುತ್ತಾರಾ? ಅಥವಾ ಅರ್ಧಕ್ಕೆ ಬಿಗ್​ಬಾಸ್ ಮನೆಯ ಆಟವನ್ನು ನಿಲ್ಲಿಸಿ ಮನೆಯ ಕಡೆ ಹೆಜ್ಜೆ ಹಾಕುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ರಾಕ್ಷಸರು ವರ್ಸಸ್ ಗಂಧರ್ವರು

ರಾಕ್ಷಸರ ವೇಷಧಾರಿಗಳು ಹಾಗೂ ಗಂಧರ್ವರ ವೇಷಧಾರಿಗಳ ನಡುವಿನ ಈ ಕದನವು ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಬದಲಾಯಿಸಿದೆ. ರಾಕ್ಷಸರ ತಂಡದಲ್ಲಿ ಮಂಜು, ಗಗನ್, ಸಂಗೀತ, ಜಗ್ಗಿ, ಪ್ರಶಾಂತ್ , ಮತ್ತು ಸೌಂದರ್ಯ ಇದ್ದರೆ, ಗಂಧರ್ವರ ತಂಡದಲ್ಲಿ ಧನುಷ್ , ತಾಂಡವ್, ಯಶಸ್, ಕಾವ್ಯ, ಕಿರಣ್, ಸೋನಿಕಾ ಹಾಗೂ ಗಾನವಿ ಇದ್ದಾರೆ.

ಮನೆಗೆ ಕಳಿಸ್ಬೇಕಿತ್ತು

ಕಳೆದವಾರ ಎಲಿಮಿನೇಷನ್ ತೂಗುಗತ್ತಿಯಲ್ಲಿ ಸಂಗೀತಾ ಭಟ್​ ಇದ್ದರು. ಕಮಾಂಡೋಗಳು ಮನೆಗೆ ಬಂದು ಬಾಟಂ 3ರಲ್ಲಿ ಇದ್ದ ಸ್ಪರ್ಧಿಗಳನ್ನು ಎಳೆದೊಯ್ದಿದ್ದರು. ಈ ವೇಳೆ ಸೇಫ್​ ಆಗಿ ಸಂಗೀತಾ ಭಟ್ ವಾಪಸ್ ಆಗಿದ್ದರು. 'ನನ್ನನ್ನು ಹಾಗೆಯೇ ಮನೆಗೆ ಕಳುಹಿಸಬೇಕಿತ್ತು. ಇಲ್ಲಿ ನೋವು ಮಾಡಿಕೊಳ್ಳಲಾಗುತ್ತಿಲ್ಲ' ಎಂದಿದ್ದರು.

ನೆಟ್ಟಿಗರಿಂದ ಪ್ರತಿಕ್ರಿಯೆ

ಕಳೆದ ವಾರವೇ ಅವರ ಆರೋಗ್ಯದಲ್ಲಿ ಏರುಪೇರುಂಟಾಗಿತ್ತು. ಹೀಗಿದ್ದರೂ ಅವರನ್ನು ಬಿಗ್​ಬಾಸ್ ಮನೆಯಲ್ಲಿ ಉಳಿಸಿಕೊಳ್ಳಬಾರದಿತ್ತು ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.