ಸಿನಿವಾಣಿ

ಲೈಟ್ಸ್​ ಆಫ್​ ಆದ ಬಳಿಕ ಬೆಡ್​ ಮೇಲೆ ಸರಸ! ಬಿಗ್​ಬಾಸ್​ ಕ್ಯಾಮೆರಾಗೆ ಸಿಕ್ಕಿಬಿದ್ದ ಅರ್ಮಾನ್​-ಕೃತಿಕಾ, ತೀವ್ರ ಟೀಕೆ

ಮುಂಬೈ: ಟಿವಿ ಶೋಗಳಲ್ಲಿ ಅತ್ಯಂತ ವಿವಾದಾತ್ಮಕ ಶೋ ಎಂದು ಕರೆಸಿಕೊಂಡಿರುವ ಬಿಗ್​ಬಾಸ್​ ರಿಯಾಲಿಟಿ ಶೋ ಎಲ್ಲ ಭಾಷೆಗಳಲ್ಲೂ ತನ್ನದೇಯಾದ ವೀಕ್ಷಕರ ಬಳಗವನ್ನೇ ಸೃಷ್ಟಿಸಿಕೊಂಡಿದೆ. ವಿವಾದದ ಹೊರತಾಗಿಯೂ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಈಗಲೂ ಅದೇ ಜೋಶ್‌ನಲ್ಲಿ ಮುಂದುವರಿಯುತ್ತಿದೆ. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಹಿಂದಿಯ ಬಿಗ್​ಬಾಸ್​ ಶೋಗೆ ಹೆಚ್ಚು ವೀಕ್ಷಕರಿದ್ದಾರೆ. ಈ ಶೋ ಎಷ್ಟು ಜನಪ್ರಿಯವಾಗಿದೆ ಎಂದರೆ ಈಗಾಗಲೇ 17 ಸೀಸನ್‌ಗಳನ್ನು ಪೂರ್ಣಗೊಳಿಸಿದೆ. ಅಲ್ಲದೆ, ಇತ್ತೀಚೆಗೆ ಒಟಿಟಿ ಸಹ ಪ್ರಾರಂಭಿಸಲಾಗಿದೆ.

ಸದ್ಯ ಬಿಗ್ ಬಾಸ್ ಒಟಿಟಿ ಸೀಸನ್ 3 ಚಾಲನೆಯಲ್ಲಿದೆ. ಶೋನಲ್ಲಿರುವ ಸ್ಪರ್ಧಿಗಳು ಬಹುತೇಕ ಫೈರ್ ಬ್ರ್ಯಾಂಡ್​ಗಳು. ಯಾವುದೇ ಕಾರಣಕ್ಕೂ ವಿವಾದವನ್ನು ಸೃಷ್ಟಿಸಬಲ್ಲವರು. ಪ್ರದರ್ಶನಗಳಿಗೆ ಹೋಲಿಸಿದರೆ, ಕಿರುಚಾಟವೇ ಸ್ವಲ್ಪ ಹೆಚ್ಚು ತೀವ್ರವಾಗಿರುತ್ತದೆ. ಇದೀಗ ಶೋ ಮತ್ತೊಂದು ಹಂತ ತಲುಪಿದೆ. ಸ್ಪರ್ಧಿಗಳಿಬ್ಬರು ಬೆಡ್​ ಮೇಲೆಯೇ ಸರಸ ಸಲ್ಲಾಪದಲ್ಲಿ ತೊಡಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಜನಪ್ರಿಯ ಯೂಟ್ಯೂಬರ್ ಅರ್ಮಾನ್ ಮಲಿಕ್​ ತನ್ನಿಬ್ಬರು ಪತ್ನಿಯರಾದ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಜತೆ ಬಿಗ್ ಬಾಸ್ ಒಟಿಟಿ ಸೀಸನ್ 3ರಲ್ಲಿ ಭಾಗವಹಿಸಿದ್ದಾರೆ. ಆದರೆ, ಇತ್ತೀಚೆಗಷ್ಟೇ ಮೊದಲ ಪತ್ನಿ ಪಾಯಲ್​ ಮಲಿಕ್​ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ಸದ್ಯ ಕೃತಿಕಾ ಮಲಿಕ್​ ಜತೆ ದೊಡ್ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇಬ್ಬರು ಇದೀಗ ವಿವಾದವೊಂದಕ್ಕೆ ಗುರಿಯಾಗಿದ್ದಾರೆ. ಅದೇನೆಂದರೆ, ಬಿಗ್​ಬಾಸ್​ ಮನೆಯೊಳಗೆ ಕ್ಯಾಮೆರಾಗಳಿದ್ದರೂ ಇಬ್ಬರು ಬೆಡ್​ ಮೇಲೆ ಸರಸವಾಡಿರುವ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅರ್ಮಾನ್​ ಮತ್ತು ಕೃತಿಕಾ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಬೆಡ್​ಶೀಟ್​ ಹೊದ್ದುಕೊಂಡಿದ್ದರು ಬೆಡ್​ಶೀಟ್​ ಒಳಗೆ ಕೈಗಳ ಚಲನೆ, ಮುಖದಲ್ಲಿ ನಗು ಮತ್ತು ಕೃತಿಕಾ ಮುಖದಲ್ಲಿ ನಾಚಿಕೆ ಇರುವುದನ್ನು ಗಮನಿಸಿ ಇಬ್ಬರು ರೊಮ್ಯಾನ್ಸ್​ ಮಾಡಿದ್ದಾರೆ ಎಂದು ವೀಕ್ಷಕರು ಆರೋಪಿಸುತ್ತಿದ್ದಾರೆ. ಕಳೆದ ರಾತ್ರಿಯ ಸಂಚಿಕೆಯಲ್ಲಿ ಲೈಟ್ಸ್​ ಆಫ್ ಮಾಡಿದ ನಂತರ, ಅರ್ಮಾನ್ ಮಲಿಕ್ ಮತ್ತು ಕೃತಿಕಾ ಮಲಿಕ್ ಒಂದೇ ಬೆಡ್​ ಮೇಲೆ ರೊಮ್ಯಾನ್ಸ್​ನಲ್ಲಿ ತೊಡಗುವ ಮೂಲಕ ಸಿಕ್ಕಿಬಿದ್ದಿದ್ದಾರೆ. ಈ ದೃಶ್ಯ ಇದೀಗ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಬಿಗ್​ಬಾಸ್​ ಶೋ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದೆ.

ಸ್ಪರ್ಧಿಗೆ ಕಪಾಳಮೋಕ್ಷ ಅರ್ಮಾನ್​ ಮಲಿಕ್​ ಬಿಗ್​ಬಾಸ್​ ಮನೆಯಲ್ಲಿ ಈ ಹಿಂದೆಯೂ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದರು. ಸಹಸ್ಪರ್ಧಿಗೆ ಕಪಾಳಮೋಕ್ಷ ಮಾಡುವ ಮೂಲಕ ಬಿಗ್​ಬಾಸ್​ ರೂಲ್ಸ್​ ಮುರಿದಿದ್ದಾರೆ. ಶೋನಿಂದ ಎಲಿಮಿನೇಟ್ ಆದ ಅರ್ಮಾನ್​ ಮೊದಲ ಪತ್ನಿ ಪಾಯಲ್​ ಅವರನ್ನು ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ಅತಿಥಿಯಾಗಿ ಕರೆತರಲಾಗಿತ್ತು. ಆಕೆ ಮತ್ತೆ ಬಿಗ್​ಬಾಸ್​ ವೇದಿಕೆಗೆ ಬಂದ ತಕ್ಷಣ ನಿರೂಪಕ ಅನಿಲ್​ ಕಪೂರ್​ ಮುಂದೆ ಯೂಟ್ಯೂಬರ್ ವಿಶಾಲ್ ಸಿಡಿಮಿಡಿಗೊಂಡರು. ಲವ್ ಕಟಾರಿಯಾ ಜತೆಗಿನ ವಿಶಾಲ್ ರಹಸ್ಯ ಸಂಭಾಷಣೆಯನ್ನು ಪಾಯಲ್​ ಬಹಿರಂಗಪಡಿಸಿದರು. ಕೃತಿಕಾ ಸಖತ್ತಾಗಿದ್ದಾಳೆ ಎಂದು ಲವ್​ ಕಟಾರಿಯಾ ಕಿವಿಯಲ್ಲಿ ವಿಶಾಲ್ ಪಿಸುಗುಟ್ಟಿದ್ದರು. ಮತ್ತೊಂದು ವಿಡಿಯೋದಲ್ಲಿ, ಕೃತಿಕಾ ಅವರು ವರ್ಕೌಟ್ ಮಾಡುತ್ತಿರುವಾಗ ವಿಶಾಲ್ ಅವರನ್ನು ನೋಡುತ್ತಾ, ಅರ್ಮಾನ್ ಕಡೆಗೆ ಮುಖ ಮಾಡಿ ‘ಭಾಯ್ ಭಾಗ್ಯಶಾಲಿ (ಲಕ್ಕಿ ಬ್ರದರ್) ಎಂದು ಕಾಮೆಂಟ್ ಮಾಡಿದ್ದರು.

ವಿಶಾಲ್​ ಮಾಡಿದ ಕಾಮೆಂಟ್​ ಅನ್ನು ಪಾಯಲ್​ ಎಲ್ಲರ ಗಮನಕ್ಕೆ ತಂದಾಗ ವೇದಿಕೆಯಲ್ಲಿ ವಾಗ್ವಾದ ನಡೆಯಿತು. ಈ ವೇಳೆ ನಾನು ಕೆಟ್ಟ ಉದ್ದೇಶದಿಂದ ಹೇಳಿಲ್ಲ ಎಂದು ವಿಶಾಲ್ ಸಮರ್ಥಿಸಿಕೊಂಡರು. ತಪ್ಪು ಉದ್ದೇಶವಿಲ್ಲದಿದ್ದರೆ ಅವಳಿಗೆ ನೇರವಾಗಿ ಹೇಳಬೇಕಿತ್ತು ಎಂದು ಪಾಯಲ್​ ವಾದ ಮಾಡಿದರು. ಇದಾದ ಬಳಿಕ ಅರ್ಮಾನ್, ವಿಶಾಲ್ ಬಳಿಗೆ ಬರುತ್ತಾರೆ. ನೀವು ನಿಜವಾಗಿ ಏನು ಹೇಳಿದ್ದೀರಿ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಕೃತಿಕಾ ಚೆನ್ನಾಗಿದ್ದಾಳೆ ಎಂದು ವಿಶಾಲ್​ ಹೇಳುತ್ತಾರೆ. ಇದರಿಂದ ಆಕ್ರೋಶಗೊಂಡ ಅರ್ಮಾನ್‌, ತಕ್ಷಣ ವಿಶಾಲ್ ಕೆನ್ನೆಗೆ ಬಾರಿಸುತ್ತಾರೆ. ಇದನ್ನು ನೋಡಿದ ಸ್ಪರ್ಧಿಗಳಿಗೆ ಸ್ವಲ್ಪ ಹೊತ್ತು ಏನೂ ಅರ್ಥವಾಗಲಿಲ್ಲ. ಕೂಡಲೇ ಇಬ್ಬರನ್ನೂ ಕರೆದುಕೊಂಡು ಹೋಗಲಾಯಿತು. ಬಿಗ್ ಬಾಸ್ ನಿಯಮದ ಪ್ರಕಾರ ಯಾವುದೇ ಸ್ಪರ್ಧಿ ಮತ್ತೊಬ್ಬರ ಮೇಲೆ ದೈಹಿಕ ಹಲ್ಲೆ ಮಾಡಬಾರದು. ಹೀಗಾಗಿ ಅರ್ಮಾನ್​ರನ್ನು ಕೂಡಲೇ ಮನೆಯಿಂದ ಹೊರಹಾಕಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. (ಏಜೆನ್ಸೀಸ್​)