ಸಿನಿವಾಣಿ

ವೈಲ್ಡ್​ ಕಾರ್ಡ್​​ ಮೂಲಕ ಬಿಗ್​​​ಬಾಸ್​ ಮನೆಗೆ ತಾಂಡವ್​ ವಾಪಸ್​?; ಕಿಚ್ಚ ಸುದೀಪ್​ ಕೊಟ್ಟ ಹಿಂಟ್​ ಏನು?..BBK 13

  • ತಾಂಡವ್​ ರಾಮ್​ ಬಿಗ್​ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ.

  • ವಾರದ ಕತೆ ಕಿಚ್ಚನ ಎಪಿಸೋಡ್​ ಪ್ರೋಮೋದಲ್ಲಿ ಹಿಂಟ್​ ಕೊಟ್ಟ ಸುದೀಪ್​.

  • ತಾಂಡವ್​ ವಾಪಸ್​​ ಬರ್ತಾರಾ ಅಥವಾ ಇಲ್ಲವಾ ಎನ್ನುವುದೇ ಗೊಂದಲ.

Bigg Boss Kannada Season 13: ಜನರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದ ತಾಂಡವ್​ ರಾಮ್​​ ಬಿಗ್​ಬಾಸ್ ಕನ್ನಡ ಸೀಸನ್​ 13ರಿಂದ ಎಮರ್ಜೆನ್ಸಿ ಎಕ್ಸಿಟ್​ ಮೂಲಕ ಎಲಿಮಿನೇಟ್ ಆಗಿದ್ದರು. ಸದ್ಯ ಎಲ್ಲರಲ್ಲಿ ಮನೆ ಮಾಡಿರುವ ಪ್ರಶ್ನೆ, ಗೊಂದಲ ಎಂದರೆ ತಾಂಡವ್​ ರಾಮ್​ ವಾಪಸ್​ ದೊಡ್ಮನೆಗೆ ಬರ್ತಾರಾ ಎನ್ನುವುದು. ಇದಕ್ಕೆ ಪೂರಕವಾಗಿ ಇಂದು ರಿಲೀಸ್ ಆಗಿರುವ ಪ್ರೊಮೋ ಮತ್ತಷ್ಟು ಹಿಂಟ್​ಗಳ ಹುಳವನ್ನು ವೀಕ್ಷಕರ ತಲೆಯಲ್ಲಿ ಬಿಟ್ಟಂತಾಗಿದೆ.

ತಾಂಡವ್​ ವಾಪಸ್?

ಹೌದು, 'ತಾಂಡವ್ ಅವರ ವಾಪಸಾತಿ ಕುರಿತು ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿದೆ. ಆ ಬಗ್ಗೆ ಕಿಚ್ಚ ಸುದೀಪ್​ ಕೊಟ್ಟ ಸುಳಿವು ಹೀಗಿದೆ, ಒಂದು ಮನೆಗೆ ಟೈಂ​ ಪೀಸ್​​ ಇದ್ದಂತೆ. ಅದು ಮನೆಯಲ್ಲಿರುವ ತನಕ ಅದರ ಉಪಸ್ಥಿತಿ ಸಹ ಎನಿಸುತ್ತದೆ. ಆದರೆ ಅದು ನಿಂತು ಹೋದರೆ ಎಲ್ಲರ ಗಮನ ಅದರತ್ತ ತಿರುಗುತ್ತದೆ' ಎಂದು ತಾಂಡವ್​​ ರಾಮ್​ ಅವರ ನಿರ್ಗಮನವು ಎಷ್ಟರ ಮಟ್ಟಕ್ಕೆ ಸದ್ದಾಗಿತ್ತು, ಸ್ಪರ್ಧಿಗಳಲ್ಲಿ ಉಂಟಾದ ಬೇಸರ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ,.

ಮುಂದುವರೆದು ಮಾತನಾಡಿದ ಅವರು, 'ನಿಂತು ಹೋಗಿರುವ ವಾಚ್​ಗೆ ಮತ್ತೆ ಜೀವ ಬರುತ್ತಾ ಅಥವಾ ಗೋಡೆಯಿಂದ ಶಾಶ್ವತವಾಗಿ ತೆಗೆದು ಹಾಕುವ ಸಮಯ ಬಂದಿದೆಯಾ' ಎನ್ನುವ ಮಾತುಗಳನ್ನು ಸುದೀಪ್​ ಆಡಿದ್ದಾರೆ. ಕಾವ್ಯಾತ್ಮಕವಾಗಿ ಕಿಚ್ಚ ಸುದೀಪ್​ ಕೊಟ್ಟ ಸುಳಿವು ಮತ್ತಷ್ಟು ಗೊಂದಲವನ್ನು ವೀಕ್ಷಕರಲ್ಲಿ ಹುಟ್ಟಿಸಿದೆ. ಕಿಚ್ಚ ಸುದೀಪ್ ಅವರು ನೀಡಿರುವ ಸುಳಿವುಗಳ ಪ್ರಕಾರ ತಾಂಡವ್ ಮತ್ತೆ ವಾಪಸ್ ಬರ್ತಾರಾ ಅಥವಾ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ.

ತಾಂಡವ್​ ಅವರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳ ಮೂಲಕ ವಾಪಸ್​ ಆಗ್ತಾರ ಎನ್ನುವ ಅನುಮಾನ ಮೂಡಿದೆ. ಸುದೀಪ್​ ಅವರು ಕೊಟ್ಟಿರುವ ಸುಳಿವಿನ ಪ್ರಕಾರ ತಾಂಡವ್​ ವಾಪಸ್​​ ಬರುತ್ತಾರಾ? ಅಥವಾ ಹೊರಗುಳಿಯುತ್ತಾರಾ ಎನ್ನುವುದನ್ನು ವಾರದ ಪೂರ್ಣ ಎಪಿಸೋಡ್​ ಅನ್ನು ಕಾದು ನೋಡಬೇಕಾಗಿದೆ

ತಾಂಡವ್​ ಪರ ನಿಂತ ಜನರು

ತಾಂಡವ್​ ರಾಮ್​ ನಿರ್ಗಮನವು ಹಲವರಲ್ಲಿ ಭಾರಿ ಬೇಸರವನ್ನುಟ್ಟು ಹಾಕಿತ್ತು. ಕನ್ನಡ ಪರ ಹೋರಾಟಗಾರ ರೂಪೇಶ್​ ರಾಜಣ್ಣ ಹಾಗೂ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು, ಕಿರುತರೆ ನಟ-ನಟಿಯರು ಬಿಗ್​ಬಾಸ್​ನ ನಿರ್ಧಾರ ಫೇಕ್​ ಇರಬಹುದು. ತಾಂಡವ್​ ಮತ್ತೆ ಬರ್ತಾರೆ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದರು.

ಉತ್ತಮ ಮೆಡಲ್ ತಾಂಡವ್​ಗೆ ಅರ್ಪಣೆ

ವಾರಾಂತ್ಯದಲ್ಲಿ ಕೊಡುವ ಉತ್ತಮ ಹಾಗೂ ಕಳಪೆ ಮೆಡಲ್​ ಅನ್ನು ಮನೆ ಮಂದಿ ಇಬ್ಬರಿಗೆ ನೀಡಿದರು. ಕಿರಿಕಿರಿ, ಬಿಗ್​ಬಾಸ್ ನಿಯಮ ಮುರಿದು ನಿದ್ರೆ ಮಾಡಿದ ಕಿರಣ್​ ಶಾಸ್ತ್ರಿಗೆ ಕಳಪೆ ಕೊಟ್ಟರು. ಇನ್ನೂ ಗಗನ್​ಗೆ ಉತ್ತಮ ಕೊಟ್ಟರು. ಈ ವೇಳೆ ಗಗನ್ ಭಾವುಕರಾಗಿ ತಾಂಡವ್​ ಬರೆದಿಟ್ಟು ಹೋದ ಮೆಮೋರಿ ಗೋಡೆ ಬಳಿ ನಿಂತು ಮಚ್ಚಾ ಇದು ನಿನಗೆ ಎಂದು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ನೋಡುಗರ ಕಣ್ಣಂಚಿನಲ್ಲಿ ನೀರು ತರಿಸುವಂತೆ ಮಾಡಿತ್ತು, (ಏಜೆನ್ಸೀಸ್).