ಸಿನಿವಾಣಿ

'ತಾಂಡವ್​ ಡಂಬ್ ' ಎಂದ ಸೌಂದರ್ಯ; ಗೆಳೆಯನನ್ನು ಡಿಫೆಂಡ್​ ಮಾಡದ ಗಗನ್, ಕಣ್ಣೀರು ಹಾಕಿದ ತಾಂಡವ್..BBK13

  • ತಾಂಡವ್​ ಡಂಬ್​ ಎಂದು ಸೌಂದರ್ಯ ಹೇಳಿದ್ರು ಮಾತನಾಡದ ಗಗನ್

  • ಗಗನ್​ ಮೌನದ ಬಗ್ಗೆ ಬೇಸರ ವ್ಯಕ್ತಪಡಿಸಿದ ತಾಂಡವ್​​, ಮಾತನಾಡಬೇಕಿತ್ತು ಮಚ್ಚ ಎಂದು ಕಣ್ಣೀರು

  • ಹಬ್ಬಕ್ಕೆ ಪಾಪ್​ಕಾರ್ನ್​ ಕೊಟ್ಟು ಸ್ಪರ್ಧಿಗಳಿಗೆ ಟ್ವಿಸ್ಟ್ ಕೊಟ್ಟ ಬಿಗ್​ಬಾಸ್​

Bigg Boss Kannada: ಬಿಗ್​ಬಾಸ್​ ಮನೆಯಿಂದ ಮಿಡ್​ವೀಕ್​​ ಎಮರ್ಜೆನ್ಸಿ ಎಕ್ಸಿಟ್​ನಲ್ಲಿ ತಾಂಡವ್ ಅವರು ಎಕ್ಸಿಟ್​ ಆದಾಗ ಗಗನ್​ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದು ಸರಿಯಲ್ಲ ಬಿಗ್​ಬಾಸ್ ಎಂದಿದ್ದರು. ಆಗ ಇವರಿಬ್ಬರ ಗೆಳೆತನವನ್ನು ಇಡೀ ಕರ್ನಾಟಕ ಮೆಚ್ಚಿಕೊಂಡಿತ್ತು. ಆದರೆ, ಈಗ ಅವರ ಈ ಅನೋನ್ಯ ಗೆಳೆತನ ಮುರಿದು ಬೀಳುವ ಹಂತಕ್ಕೆ ತಲುಪಿದೆ.

ಹೌದು, ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ, ಗಗನ್​ ಅವರ ಎದುರು ಸೌಂದರ್ಯಾ ಅವರು'ನನಗೆ ತಾಂಡವ್​ ಡಂಬ್​ ವ್ಯಕ್ತಿ ಎನಿಸುತ್ತಾರೆ' ಎನ್ನುವಾಗ ಗಗನ್​ ಏನನ್ನು ಮಾತನಾಡದೆ ನಗುತ್ತಾ ಕೇಳುತ್ತಿರುವುದು ಕಂಡುಬಂದಿದೆ. ಇದನ್ನು ಕಂಡ ತಾಂಡವ್​​ ಕಣ್ಣಲ್ಲಿ ನೀರು ತರಿಸಿಕೊಳ್ಳುವಷ್ಟು ಬೇಸರ ಮಾಡಿಕೊಂಡಿದ್ದಾರೆ. ಇಡೀ ಮನೆಯೇ ಇದರ ವಿರುದ್ಧ ಕಿಡಿಕಾರಿರುವುದು ಪ್ರೋಮೋದಲ್ಲಿ ಇದೆ.

ಪ್ರೋಮೋದಲ್ಲಿ ಏನಿದೆ?

ಮೊದಲು ಬಿಗ್​ಬಾಸ್ ಸಿನಿಮಾ ತೋರಿಸ್ತೇವೆ ಎಂದು ಪಾಪ್​​ಕಾರ್ನ್​ ಮತ್ತು ಟಿಕೆಟ್​ ಕಳುಹಿಸಿ ಕೊಟ್ಟಿದೆ. ಖುಷಿ ಜೊತೆಗೆ ಏನೋ ಟ್ವಿಸ್ಟ್​ ಇದೆ ಎಂದು ಅರಿತ ಸ್ಪರ್ಧಿಗಳು ಸೋಫಾ ಮೇಲೆ ಕೂರುತ್ತಾರೆ. ಟಿವಿ ಆನ್​ ಆದಾಗ ಸಂಗೀತ ಯಶಸ್ ಕೈ ಮೇಲೆ ಕಾಲಿಡುವ ವಿಡಿಯೋ ತೋರಿಸಲಾಗುತ್ತದೆ. ಈ ಬಗ್ಗೆ ಸ್ಪರ್ಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಂಡವ್​ ಸಹ ಈ ವೇದಿಕೆಯನ್ನು ಹೀಗೆ ಬಳಕೆ ಮಾಡಿಕೊಳ್ಳೋದು ಸರಿಯಲ್ಲ ಎಂದು ಗಗನ್​ ಬಳಿ ಹೇಳಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ ಗಗನ್ ಮತ್ತು ಸೌಂದರ್ಯ ಮಾತನಾಡಿಕೊಳ್ಳುತ್ತಿದ್ದಾರೆ. ತಾಂಡವ್ ಆಟನೇ ನನಗೆ ಇಷ್ಟವಾಗುತ್ತಿಲ್ಲ. ಈ ಹಿಸ್​ ಆ ಡಂಬ್​ ಇನ್​ ಹೋಲ್​ ಹೌಸ್ ಎಂದು ಹೇಳಿದ್ದಾರೆ. ಹಾಗಯೇ ಹೇಳುತ್ತಾ ಗಗನ್ ಮಾತನಾಡದೆ ನಗುತ್ತಾರೆ. ಈ ಬಗ್ಗೆ ಯಶಸ್​ ಅವರು ಪ್ರಶಾಂತ್ ಬಳಿ ಮಾತನಾಡಿ, ಅವರು ನೋಡಿದ್ದಾರೆ ಅಂತ ಬಂದು ಸಮಾಧಾನ ಮಾಡೋದಲ್ಲ..ಎದುರಲ್ಲೇ ಅವರ ಪರ ಮಾತನಾಡಬೇಕಿತ್ತು ಎಂದರು.

ಇನ್ನೂ ಗಗನ್ ತಾಂಡವ್ ಬಳಿ ಇಬ್ಬರ ಜಗಳಕ್ಕೆ ನಾನು ಮೂಗುತೂರಿಸಬಾರದು ಅಂತ ಮಾತನಾಡಿಲ್ಲ ಅಷ್ಟೇ ಎಂದು ತಮ್ಮನ್ನು ಸಮರ್ಥಿಸಿಕೊಳ್ಳಲು ಹೋಗುತ್ತಾರೆ, ಆಗ ತಾಂಡವ್​ ಅಲ್ಲೇ ನಾವು ಬಿದ್ದೋಗೋದು. ನೀನು ಮಾತನಾಡಬೇಕಿತ್ತು ಎನ್ನುವ ಅರ್ಥದಲ್ಲಿ ಸಲಹೆ ನೀಡುತ್ತಾರೆ. ಈ ಪ್ರೋಮೋವನ್ನು 'ಬೆನ್ನ ಹಿಂದೆ ನಡೆದಿದ್ದು ಕಣ್ಣ ಮುಂದೆ ಬಂದಾಗ' ಎಂದು ಶೀರ್ಷಿಕೆ ಕೊಟ್ಟು ಹಂಚಿಕೊಳ್ಳಲಾಗಿದೆ.

ಸೌಂದರ್ಯ ಹೇಳಿದ್ದು ಸರಿ ಎಂದ ನೆಟ್ಟಿಗರು

ಸೌಂದರ್ಯಾ ಅವರು ಇದನ್ನು ಸುದೀಪ್​ ಮುಂದೆಯೇ ಹೇಳಿದ್ದಾರೆ. ಆಗ ತಾಂಡವ್​ ಸಹ ಇದ್ದರು. ಆದರೆ, ತಾಂಡವ್​ಗೆ ಬೇಸರವಾಗಿರುವುದು ಸೌಂದರ್ಯ ಬಗ್ಗೆ..ಆಕೆ ಮಾತನಾಡುವಾಗ ಏನೂ ಹೇಳಕೆ ನಗುತ್ತಿದ್ದ ಗಗನ್​ ಬಗ್ಗೆ ಎಂದಿದ್ದಾರೆ ಕೆಲವರು.

ವಿದ್ಯಾಶ್ರೀ ಕೆ.ಬಿ ಎಂಬುವವರು ಕಾಮೆಂಟ್ ಮಾಡಿದ್ದು, ಚೆನ್ನಾಗಿದೆ, ಇದನ್ನೇ ನಾವು ನಿರೀಕ್ಷಿಸುತ್ತಿದ್ದೆವು. ಅದನ್ನು ಕಾರ್ಯಗತಗೊಳಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ. ಮತ್ತೊಬ್ಬರು ಡಂಬ್​ನ ಡಂಬ್​ ಅನ್ನದೇ ಇನ್ನೇನು ಅನ್ನಬೇಕು. ವೀಕೆಂಡ್​ನಲ್ಲಿ ಅಷ್ಟೆಲ್ಲ ಹೇಳಿದರು ಏನೂ ಮಾತಾಡಿಲ್ಲ. ಈಗ ಗಗನ್​ಗೆ ಎಮೋಷನಲ್​ ಬ್ಲಾಕ್​ಮೇಲ್​ ಎಂದಿದ್ದಾರೆ ವೀಕ್ಷಕರು.

ನೆನಪಿರಲಿ, ತಾಂಡವ್ ಗೆಳೆತನಕ್ಕಾಗಿ ಏನ್ ಬೇಕಾದ್ರೂ ಮಾಡಬಹುದು. ಆದ್ರೆ ಗಗನ್ ಯಾವತ್ತೂ ತನ್ನ ಮುಂದಿಟ್ಟು ತಾಂಡವ್​ಗಾಗಿ ಸ್ಟಾಂಡ್ ತೆಗೆದುಕೊಳ್ಳೋದಿಲ್ಲ ಎಂದಿದ್ದಾರೆ.

ಒಟ್ಟಾರೆಯಾಗಿ ದಸರಾ ಹಬ್ಬದ ಸಂಭ್ರಮದಲ್ಲಿದ್ದ ಬಿಗ್​ಬಾಸ್​ ಮನೆಮಂದಿಗೆ ಸಿನಿಮಾ ಎಂದು ಟ್ವಿಸ್ಟ್​ ಕೊಡಲಾಗಿದೆ. ಈ ಘಟನೆ ಬಳಿಕ ತಾಂಡವ್​ ಮತ್ತು ಗಗನ್ ಸ್ನೇಹ ಹೀಗೆ ಮುಂದುವರೆಯುತ್ತಾ ಅಥವಾ ಇಲ್ಲವ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).