ಕಚಡಾ, ನಾಯಿ ಎಂದು ಸೌಂದರ್ಯಾ ವಿರುದ್ಧ ನಾಲಿಗೆ ಹರಿಬಿಟ್ಟ ಜಗ್ಗ ಮಮ್ಮಿ
ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಫುಲ್ ಕ್ಲಾಸ್ ಸಾಧ್ಯತೆ
ಸಿಂಗಲ್ ಪೇರೆಂಟ್ ಎಂದು ಮನೆ ಮಂದಿಯನ್ನು ಡಿಸ್ಟರ್ಬ್ ಮಾಡಿದ್ರಾ ಗಾನವಿ ಎನ್ನುವ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿದೆ.
ಬಿಗ್ಬಾಸ್ ಮನೆಯು ವಾರ ಪೂರ್ತಿ ಭಾವನಾತ್ಮಕದ ಮಹಾಪೂರವಾಗಿದ್ದರೆ, ಕ್ಯಾಪ್ಟನ್ಸಿ ಟಾಸ್ಕ್ ನಂತ್ರ ಇದೊಂದು ಯುದ್ಧದ ಮೈದಾನದಂತೆ ರೂಪುಗೊಂಡಿತ್ತು. ಸ್ಪರ್ಧಿಗಳಿಗೆ ಬಿಗ್ಬಾಸ್ ವಿಶೇಷ ಟಾಸ್ಕ್ ಕೊಟ್ಟಿತ್ತು. ಅದರಂತೆ, ಮನೆಯಲ್ಲಿ ತಮಗಿಷ್ಟವಾಗದ, ಅಸಮಾಧಾನ ತಂದಿರುವ ಸ್ಪರ್ಧಿಗಳಿಗೆ ಅನಾಮಧೇಯ ಪತ್ರ ಬರೆಯುವುದು ಟಾಸ್ಕ್ ಆಗಿತ್ತು. ಆದರೆ, ತಮಗೆ ಬರೆದಿದ್ದ ಪತ್ರ ಓದಿದ ಜಗದೀಶ್ ಏಕಾಏಕಿ ಸೌಂದರ್ಯಾ ವಿರುದ್ಧ ಕಿಡಿಕಾರಿದರು. ಮಾಹಿತಿಯೇ ಇಲ್ಲದೇ ಅವರನ್ನು 'ನಾಯಿ, ಕಚಡಾ' ಎಂದು ನಿಂದಿಸಿದ್ದು, ಭಾರಿ ಗಲಾಟೆಗೆ ಕಾರಣವಾಯ್ತು. ಸದ್ಯ ರಿಲೀಸ್ ಆದ ಪ್ರೋಮೋದಲ್ಲಿ ಈ ಬಗ್ಗೆ ಮತ್ತು ಗಾನವಿ ತಮ್ಮ ಪತ್ರಕ್ಕಾಗಿ ಹೂಡಿದ ತಂತ್ರದ ಬಗ್ಗೆ ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಮಾತನಾಡುತ್ತಾರೆ ಎನ್ನುವ ಹಿಂಟ್ ಅನ್ನು ಬಿಗ್ಬಾಸ್ ಕೊಟ್ಟಿದ್ದಾರೆ.
ಗಾನವಿ ಮತ್ತು ಆಸಿಯಾ ಇಬ್ಬರು ಇತರ ಸ್ಪರ್ಧಿಗಳನ್ನು ಮನವೊಲಿಸಿ ತಮಗೆ ವೋಟ್ ಪಡೆದುಕೊಂಡು ಮನೆಯವರ ಪತ್ರ ಪಡೆದುಕೊಳ್ಳಬೇಕಾಗಿತ್ತು. ಯಾರ ವೋಟ್ ಯಾರಿಗೆ ಹೆಚ್ಚು ಬೀಳುತ್ತದೆಯೋ ಅವರ ಕೈಗೆ ಪತ್ರ ಸಿಗುವ ವಿಶೇಷ ಅವಕಾಶವನ್ನು ಬಿಗ್ಬಾಸ್ ಕೊಟ್ಟಿತ್ತು. ಅದರಂತೆ ಗಾನವಿ 'ನನಗೆ ತಾಯಿಯೊಬ್ಬರೆ ಇರೋದು. ಅವರು ಮನೆಯಲ್ಲಿ ಹೇಗಿದ್ದಾರೆಯೋ ತಿಳಿದಿಲ್ಲ' ಎಂದರು. ಈ ಒಂದು ಪಾಯಿಂಟ್ ಅನ್ನು ಇಟ್ಟುಕೊಂಡು, ತಾಂಡವ್, ಗಗನ್, ಸೋನಿಕಾ ಸೇರಿದಂತೆ ಹಲವರು ಗಾನವಿಗೆ ವೋಟ್ ಮಾಡಿದ್ದರು.
ಈ ಬಗ್ಗೆ ಸುದೀಪ್ ವಾರದ ಕತೆಯಲ್ಲಿ ಮಾತನಾಡುತ್ತಾರೆ ಎನ್ನುವ ಹಿಂಟ್ ಈಗಾಗಲೇ ರಿಲೀಸ್ ಆಗಿರುವ ಪ್ರೋಮೋದಲ್ಲಿ ಇದೆ. ಗಾನವಿ ವಿರುದ್ಧ ಎಲ್ಲರಿಗೂ ಅಸಮಾಧಾನವಿತ್ತು. ಕೊಟ್ಟ ಮಾತಿನಂತೆ ನಡೆದು ಕೊಳ್ಳಲ್ಲ ಆಕೆಯನ್ನ ನಂಬಲು ಸಾಧ್ಯವಿಲ್ಲ ಎನ್ನುವುದು ಹಲವರ ಅಭಿಪ್ರಾಯ. ಆದರೆ, ಇದೆಲ್ಲವನ್ನೂ ಹೊರೆತು ಪಡಿಸಿ ಅವರು ಹೇಳಿದ ಒಂದು ಮಾತಿಗೆ ಎಲ್ಲರೂ ವೋಟ್ ಮಾಡುವಂತೆ ಗಾನವಿ ಮಾಡಿದರು. ಇದು ಸ್ಪರ್ಧಿಗಳ ಮನಸ್ಸಿಗೆ ಮಾಡಿದ್ದು ಡಿಸ್ಟರ್ಬಾ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.
ಅನಾಮಧೇಯ ಪತ್ರ ಬರೆಯುವ ಚಟುವಟಿಕೆಯಲ್ಲಿ ಜಗದೀಶ್ ಅವರಿಗೆ ಬರೆದ ಪತ್ರವನ್ನು ಅವರು ಓದಿದರು. ಇದರಲ್ಲಿಮ ನೀನು ಎಲ್ಲರ ಬೆನ್ನ ಹಿಂದೆ ಮಾತನಾಡುತ್ತೀಯಾ ಎಂದು ಟೀಕೆ ಮಾಡಿ ಬರೆಯಲಾಗಿತ್ತು. ಇದನ್ನು ಓದುತ್ತಿದ್ದಂತೆ ಸಿಡಿದೆದ್ದ ಅವರು, ಈ ರೀತಿ ಬರೆದವರು ಮಾನಗೇಡಿಗಳು, ಲಫಂಗಗಳು ಎಂದು ಕಿಡಿಕಾರಿದರು. ಈ ಪತ್ರ ಬರೆಯುವ ಹಿಂದೆ ಸೌಂದರ್ಯಾ ಶೆಟ್ಟಿ ಸಂಚಿದೆ ಎಂದು ತಿಳಿದ ಜಗ್ಗ ಮಮ್ಮಿ , ಅವಳು ಯಾರದ್ದೋ ಬಾಲ, ನಿಂದು ಒಂದು ಜನ್ಮನಾ ನಾಯಿಗಿಂತ ಕಡೆ ಥೂ ಎಂದು ಕಿಡಿಕಾರಿ ಕಚಡಾ ಎಂದು ಕರೆದು ಪೇಪರ್ ಹರಿದು ಬಿಸಾಡಿದರು. ಈ ಬಗ್ಗೆಯೂ ಸುದೀಪ್ ಮಾತನಾಡುವ ಸಾಧ್ಯತೆ ಇದೆ. ಜೊತೆಗೆ ಜಗದೀಶ್ಗೆ ಸಖತ್ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸೌಂದರ್ಯಾ ಅವರು ಗಗನ್ಗೆ ಪತ್ರ ಬರೆದರು, ಇನ್ನು ಆಸಿಯಾ ಗಾನವಿಗೆ ಬರೆದಿದ್ದರು. ತಾಂಡವ್ ಕಿರಣ್ ಶಾಸ್ತ್ರಿಗೆ ಅನಾಮಧೇಯ ಪತ್ರ ಬರೆದಿದ್ದರು.
ಈ ವಾರ 56ಕ್ಕೂ ಹೆಚ್ಚು ದಿನದಿಂದ ಮನೆಯವರನ್ನು, ಸೋಶಿಯಲ್ ಮೀಡಿಯಾವನ್ನು ಬಿಟ್ಟು ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿರುವ ಸ್ಪರ್ಧಿಗಳಿಗೆ ಪ್ರೀತಿ ಪಾತ್ರರ ಪತ್ರ ಬಂದಿತ್ತು. ಇದು ಅಷ್ಟು ಸುಲಭವಾಗಿ ಸಿಗುವ ಪತ್ರವಾಗಿರಲಿಲ್ಲ. ಬಿಗ್ಬಾಸ್ ಕೊಟ್ಟ ಹಲವು ಚಟುವಟಿಕೆಯಲ್ಲಿ ವಿಜೇತರಾಗುವ ಮೂಲಕ ಗಗನ್, ಧನುಷ್, ಯಶಸ್, ಗಾನವಿ, ಸೌಂದರ್ಯಾ, ಜಗದೀಶ್, ಪ್ರಶಾಂತ್ ಪತ್ರ ಪಡೆದುಕೊಂಡರು. ತಾಂಡವ್, ಆಸಿಯಾ, ಸೋನಿಕಾಗೆ ಈ ಭಾಗ್ಯ ದಕ್ಕಿಲ್ಲ.
ಪತ್ರ ಪಡೆದುಕೊಂಡವರ ಪೈಕಿ ಯಶಸ್, ಗಾನವಿ ಹಾಗೂ ಪ್ರಶಾಂತ್, ಧನುಷ್ ಕ್ಯಾಪ್ಟನ್ಸಿ ರೇಸ್ಗೆ ಆಯ್ಕೆ ಮಾಡಲಾಗಿತ್ತು. ಸೀಸ ಮೇಲೆ ನಿಂತು ಜೋಡಿಸುವ ಟಾಸ್ಕ್ ಅನ್ನು ಶ್ರದ್ಧೆ ಮತ್ತು ತಾಳ್ಮೆಯಿಂದ ಆಡಿದ ಯಶಸ್ ಸದ್ಯ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಕಿರಣ್ ಶಾಸ್ತ್ರಿ ಕಳಪೆ ಪಡೆದುಕೊಂಡರೆ, ತಾಂಡವ್ ರಾಮ್ ಉತ್ತಮ ಪಡೆದುಕೊಂಡರು, (ಏಜೆನ್ಸೀಸ್).