ಸಿನಿವಾಣಿ

ಬಿಗ್​ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ಟ್ವಿಸ್ಟ್​ ಮೇಲೆ ಟ್ವಿಸ್ಟ್!​; ದೊಡ್ಮನೆಗೆ ತಾಂಡವ್​​ ವಾಪಸ್​​?..BBK 13

  • ಬಿಗ್​ಬಾಸ್​ ಮನೆಯಲ್ಲಿ ಎಲಿಮಿನೇಷನ್​​ ಕಾವು

  • ಟ್ವಿಸ್ಟ್​ ಮೇಲೆ ಟ್ವಿಸ್ಟ್​ಗೆ ಸ್ಟನ್​ ಆದ ವೀಕ್ಷಕರು, ಸ್ಪರ್ಧಿಗಳು

  • ತಾಂಡವ್​ ಮತ್ತೆ ಬಿಗ್​ಬಾಸ್ ಮನೆಗೆ ವಾಪಸ್ ಬರುವ ನಿರೀಕ್ಷೆ

Bigg Boss Kannada 13: ಮಿಡ್​​ವೀಕ್​​ ಎಲಿಮಿನೇಷನ್​​ನ ಟ್ವಿಸ್ಟ್​ಗಳಿಂದ ಸ್ಪರ್ಧಿಗಳು ಜರ್ಜರಿತರಾಗಿದ್ದಾರೆ. ಯಾವ ಸಮಯದಲ್ಲಿ ಯಾರು ಔಟ್ ಆಗುತ್ತಾರೆ ಎನ್ನುವುದನ್ನೇ ಅರಿಯದೆ ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದಾರೆ. ಸದ್ಯ ಎಮರ್ಜೆನ್ಸಿ ಎಕ್ಸಿಟ್​ನಿಂದ ತಾಂಡವ್​ ರಾಮ್​ ಅವರು ಎಲಿಮಿನೇಟ್​ ಆಗಿದ್ದು, ಮನೆ ಮಂದಿಗೆ ಮಾತ್ರ ಅಘಾತವನ್ನುಂಟು ಮಾಡಿದೆ. ಇಡೀ ಎಪಿಸೋಡ್ ವೀಕ್ಷಕರಿಗೆ ತಲೆಯೊಳಗೆ ಹುಳ ಬಿಟ್ಟುಕೊಂಡಂತಾಗಿದೆ. ಈ ಶಾಕ್​ ಮಧ್ಯೆ ಪ್ರೇಕ್ಷಕರ ವಲಯದಲ್ಲಿ ಕೇಳಿಬರುತ್ತಿರುವ ವಿಚಾರ ಏನೆಂದರೆ, ಅದು ತಾಂಡವ್​ ಎಲಿಮಿನೇಟ್ ಆಗಿಲ್ಲ. ಸೀಕ್ರೆಟ್ ರೂಮ್​ನಲ್ಲಿದ್ದಾರೆ ಎಂದು.

ತಾಂಡವ್​ ವಾಪಸ್?

ಹೌದು ಎಕ್ಸ್​ನಲ್ಲಿ ಸಾಕಷ್ಟು ಜನರು ಈ ಬಗ್ಗೆ ಚರ್ಚೆ ಮುಂದಿಟ್ಟಿದ್ದಾರೆ. ​ ಜನರ ಮನ ಗೆದ್ದಿದ್ದ, ಬಿಗ್ ಬಾಸ್ ಮನೆಯೊಳಗೆ ತನ್ನದೇ ಆದ ಛಾಪು ಮೂಡಿಸಿದ್ದ ಮತ್ತು ವಿನ್ನರ್ ರೇಸ್‌ನಲ್ಲಿದ್ದ ತಾಂಡವ್ ಎಮರ್ಜೆನ್ಸಿ ಎಕ್ಸಿಟ್ ಆಗಿಲ್ಲ ಅವರು ಸೋಮವಾರದಿಂದ ಉತ್ತಮವಾಗಿ ಕಂಬ್ಯಾಕ್​ ಆಗಲಿದ್ದಾರೆ ಎನ್ನಲಾಗುತ್ತಿದೆ.

Honest Review 2.0 ಎನ್ನುವ ಖಾತೆಯಿಂದ ಪೋಸ್ಟ್​ ಹಂಚಿಕೊಂಡಿದ್ದು, ತಾಂಡವ್ ಬಿಗ್​ಬಾಸ್​ ಮನೆಗೆ ವಾಪಸ್​ ತೆರಳುತ್ತಾರೆ. ಇದು ಖಚಿತ ಎಂದು ಬರೆದುಕೊಂಡಿದ್ದಾರೆ. ಪ್ರತಿಬಾರಿ ಪ್ರಾಂಕ್​ ಎಲಿಮಿನೇಷನ್​ ಸರಿಯಲ್ಲ ಎಂದು ಇದಕ್ಕೆ ಹಲವರು ಕಿಡಿಕಾರಿದ್ದಾರೆ.

ನಾಟ್​​ ಫೇರ್ ಎಂದ ವೀಕ್ಷಕರು

ಬಿಬಿಕೆ 13 ಭಾರಿ ವೈಫಲ್ಯ ಕಾಣುತ್ತಿದೆ. ಲಿಖಿತ್, ಸೌಂದರ್ಯ ಶೆಟ್ಟಿ, ಮಂಜ, ವೈಷ್ಣವಿ ಆಯ್ಕೆ. ಇದು ಕೆಟ್ಟದಾಗಿದೆ. ತಾಂಡವ್​ ಪ್ರಾಂಕ್​ ಎಲಿಮಿನೇಷನ್​ ಅನ್ನೋದು ಸರಿಯಲ್ಲ. ಇಂತಹ ಅಸಂಬದ್ಧತೆಯನ್ನು ನಿಲ್ಲಿಸಿ ಅಥವಾ ಸುದೀಪ್​ ಸರ್​ ಈ ಶೋಗೆ ನೀವು ನಿರೂಪಕರಾಗೋದನ್ನು ದಯವಿಟ್ಟು ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ ನೆಟ್ಟಿಗರೊಬ್ಬರು.

ವೀಕೆಂಡ್​ವರೆಗೂ ಕೂತೂಹಲ ಮುಂದುವರಿಕೆ

ಇಷ್ಟಾದರೂ ಕಿಚ್ಚ ಸುದೀಪ್​ ಅವರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ನಲ್ಲಿ ಅಸಲಿ ಸತ್ಯ ಬೆಳಕಿಗೆ ಬರುತ್ತದೆ. ಸದ್ಯ ವೀಕ್ಷಕರಿಗೆ ಅಂತಿಮವಾಗಿ ಹೊರಬರುವ ಸ್ಪರ್ಧಿ ಯಾರು?, ತಾಂಡವ್​ ವಾಪಸ್​ ಬರುತ್ತಾರೆಯೇ ಎನ್ನುವುದನ್ನು ಕೊನೇ ಕ್ಷಣದವರೆಗೂ ಊಹಿಸಲು ಸಾಧ್ಯವಾಗದಂತೆ ಪರಿಸ್ಥಿತಿಯಾಗಿ ಬದಲಾಗಿದೆ.

ಟಿಆರ್​ಪಿ ಹೋಗೋದು ಪಕ್ಕ ಎಂದ ನೆಟ್ಟಿಗರು

ಸದ್ಯ ಪ್ರೇಕ್ಷಕರ ವಲಯದಲ್ಲಿ ತಾಂಡವ್​ ರಾಮ್​ನಂತಹ ಉತ್ತಮ ಸ್ಪರ್ಧಿ ಎಮರ್ಜೆನ್ಸಿ ಎಕ್ಸಿಟ್​ ಆಗಿರುವುದು ಬಿಗ್​ಬಾಸ್​ ವಲಯಕ್ಕೆ ದೊಡ್ಡ ಹಿನ್ನಡೆ ಎನ್ನುತ್ತಿದ್ದಾರೆ. ತಾಂಡವ್​ನಿಂದ ಮನೆಯಲ್ಲಿ ಕೊಂಚ ರಸಮಯ ಕ್ಷಣಗಳು ಇರುತ್ತಿದ್ದವು. ಈಗ ಅದು ಇಲ್ಲದಂತಾಗುತ್ತದೆ ಎಂದಿದ್ದಾರೆ.

ಎಲಿಮಿನೇಷನ್ ಇದೆ ಅನ್ನೋದು ಗೊತ್ತಿತ್ತು. ಮಂಜ ಅಥವಾ ಲಿಖಿತ್​​ , ಜಗದೀಶ್​ ಮನೆಯಿಂದ ಹೊರ ಹೋಗುತ್ತಾರೆ ಎನ್ನುವ ಊಹೆಯನ್ನು ಮಾಡಲಾಗಿತ್ತು. ಆದರೆತಾಂಡವ್​ ಹೊರಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ! ಎಂಬ ಮಾತು ಈಗ ದೊಡ್ಮನೆಯಿಂದ ಹೊರಗೆ ಪ್ರೇಕ್ಷಕರ ನಡುವೆಯೂ ಚರ್ಚೆಯಾಗುತ್ತಿದೆ.

ತಾಂಡವ್​-ಗಗನ್​ ಸ್ನೇಹಕ್ಕೆ ಭಾರಿ ಮೆಚ್ಚುಗೆ

ಪೂರ್ತಿ ಎಪಿಸೋಡ್​ನಲ್ಲಿ ಗಗನ್​ ಚಿನ್ನಪ್ಪ ಹಾಗೂ ತಾಂಡವ್​ ರಾಮ್​ ಅವರ ಸ್ನೇಹವು ಭಾರಿ ಗಮನವನ್ನು ಸೆಳೆಯಿತು. ತಾಂಡವ್​ ಫ್ಲೈಟ್​ ಏರುವಾಗ ಗಗನ್ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತ ಪರಿಯು ಸಾಕಷ್ಟು ಜನರಿಗೆ ಬೇಸರವನ್ನುಂಟು ಮಾಡಿದರೆ, ಮನೆಯೊಳಗಿನ ಸ್ಪರ್ಧಿಗಳಿಗೆ ಅಳು ತರುವಂತೆ ಮಾಡಿತ್ತು. ಹಲವರು ಇಬ್ಬರ ಸ್ನೇಹದ ಬಗ್ಗೆ ಮೆಚ್ಚಿಕೊಂಡು ಕೊಂಡಾಡುತ್ತಿದ್ದಾರೆ. ತಪ್ಪು ಲೆಕ್ಕಾಚಾರ ಹಾಕಿದ ಧನುಷ್​ಗೂ ತಾಂಡವ್​ ಸ್ಥೈರ್ಯ ತುಂಬಿದರು. ಅದನ್ನೇ ಮನಸ್ಸಲ್ಲಿಟ್ಟುಕೊಂಡು ಕೊರಗಬೇಡ..ಚೆನ್ನಾಗಿ ಗೇಮ್ ಆಡು ಎಂದು ಹಾರೈಸಿದರು, (ಏಜೆನ್ಸೀಸ್).