ಕಿರಣ್ ಶಾಸ್ತ್ರಿಗೆ ಕಳಪೆ ಕೊಟ್ಟು ಜೈಲಿಗೆ ಕಳುಹಿಸಿದ ಬಿಗ್ಬಾಸ್ ಮನೆ ಮಂದಿ
ಕೆಟ್ಟ ಯೋಚನೆಯ ಕಳ್ಳ ಕಿರಣ್ ಎಂದು ಮಂಜ ವಾಗ್ದಾಳಿ
ಬೊಗಳೋರು ಬೊಗಳ್ರಿ, ನಾವು ಬೆಳಿತೀವಿ ಎನ್ನುತ್ತ ಜೈಲಿನೊಳಕ್ಕೆ ತೆರಳಿ ಕಿರಣ್ ಶಾಸ್ತ್ರಿ
BBK- 13: ಕಳೆದ ವಾರ ನಡೆದ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಕಿರಣ್ ಶಾಸ್ತ್ರಿಗೆ ಸುದೀಪ್ ಅವರು ಭಾರಿ ಕ್ಲಾಸ್ ತೆಗೆದುಕೊಂಡಿದ್ದರು. ವಿನಾಕರಣ ಸ್ಪರ್ಧಿಗಳ ಮೇಲೆ ನಿಮ್ಮ ತಲೆಯಲ್ಲಿ ಬುದ್ಧಿ ಇಲ್ಲ, ಲದ್ದಿ ಇದೆ. ಐವತ್ತು ಪೈಸೆಗೆ ಪ್ರಯೋಜನವಿಲ್ಲ. ಬಳೆ ತೊಟ್ಕೊಳ್ಳಿ ಎಂದು ಮಾಡಿದ್ದ ಆರೋಪಗಳನ್ನು ವಿಟಿ ಸಮೇತ ಪ್ರಸಾರ ಮಾಡಿ ಒಂದೊಂದಕ್ಕು ವಿಶ್ಲೇಷಣೆ ಕೊಟ್ಟು ಬುದ್ಧಿವಾದ ಹೇಳಿದ್ದರು.
ಎಪಿಸೋಡ್ ಕೊನೆಯಲ್ಲಿ ಮಾತನಾಡಿದ್ದ ಶಾಸ್ತ್ರಿ, 'ನನ್ನ ಬುದ್ಧಿಗೆ ಮಂಕು ಬಡೆದಿತ್ತು. ತಪ್ಪು ತಿದ್ದಿಕೊಳ್ಳುತ್ತೇನೆ. ನಾನು ಎನ್ನುವ ಗರ್ವ ನನ್ನ ತಲೆಯಲ್ಲಿ ತುಂಬಿತ್ತು' ಎಂದು ಹೇಳಿದ್ದರು. ಈ ವಾರ ಬದಲಾದಂತೆ ಪೋಸ್ ಕೊಟ್ಟಿದ್ದರು.
ಆದರೆ, ವಾರದ ಕೊನೇ ದಿನ ಕೊಡುವ ಕಳಪೆ ಮತ್ತು ಉತ್ತಮ ಟಾಸ್ಕ್ನಲ್ಲಿ ಮನೆಯ ಅರ್ಧಕ್ಕರ್ಧ ಮಂದಿ ಕಿರಣ್ ಶಾಸ್ತ್ರಿ ಕಳಪೆ ಕೊಟ್ಟಿದ್ದಾರೆ. ಆ ಮೂಲಕ ಕಿರಣ್ ಶಾಸ್ತ್ರಿ ಬದಲಾಗಿಲ್ಲ. ಬದಲಾದಂತೆ ನಟಿಸಿದ್ದಾರೆ ಎನ್ನುವ ಸತ್ಯವನ್ನು ಇತರ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ.
ಈ ವಾರದ ಕಳಪೆ ಯಾರು ಎನ್ನುವ ವಿಚಾರ ಬಂದಾಗ ಮನೆ ಮಂದಿಯೆಲ್ಲರೂ ಕಿರಣ್ ಶಾಸ್ತ್ರಿ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಲಿಖಿತ್, ಅವಿನಾಶ್, ಮಂಜ, ಸೌಂದರ್ಯ, ಧನುಷ್, ಯಶಸ್ ಸೇರಿದಂತೆ ಹಲವರು ಶಾಸ್ತ್ರಿ ವಿರುದ್ಧ ಬೇಸರ ಹೊರ ಹಾಕಿದ್ದಾರ. ಇನ್ನೂ ಮಹಾನ್ ಕವಿ ಮಂಜು ಅಂತೂ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚಾಮುಂಡಿ ತಾಯಿಯನ್ನೂ ಸಹ ತನ್ನ ಸ್ವಾರ್ಥಕೆ ಬಳಸಿಕೊಂಡ ಕೆಟ್ಟ ಯೋಚನೆಯುಳ್ಳ ಕಳ್ಳ ಕಿರಣ್, ಶಾಸ್ತ್ರಿ ಎಂದು ಪಾಯಿಂಟ್ ಔಟ್ ಮಾಡಿದ್ದಾರೆ. ಕಿರಣ್ ಅವರು ಜೈಲು ವಾಸದ ಬಟ್ಟೆ ತೊಟ್ಟು ಬೊಗಳೋರು ಬೊಗಳಿ ಬೆಳೆಯೋರು ಬೆಳಿತೀವಿ ಎಂದು ಜೈಲಿನತ್ತ ತೆರಳಿರುವುದು ವಿಡಿಯೋದಲ್ಲಿ ಇದೆ.
ಸದ್ಯ ಇನ್ಸ್ಟಾದಲ್ಲಿ ಬಿಡುಗಡೆಯಾಗಿರುವ ಪೋಸ್ಟರ್ನಲ್ಲಿ ಹೇಗಿತ್ತು ಎಮರ್ಜೆನ್ಸಿ ಎಕ್ಸಿಟ್ ಟ್ವಿಸ್ಟ್ ಎಂದು ತಾಂಡವ್ ರಾಮ್ ಹೊರಟಾಗ ಮನೆ ಮಂದಿ ಕೊಟ್ಟ ರಿಯಾಕ್ಷನ್ಗಳ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಆ ಮೂಲಕ ವೀಕ್ಷಕರು ಮತ್ತು ನೆಟ್ಟಿಗರು ತಾಂಡವ್ ಮರಳಿ ಬರುತ್ತಾರೆ. ಇದು ಖಂಡಿತ ಎಂದು ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ. ಆದರೆ, ನಿಜವಾಗಿಯೋ ತಾಂಡವ್ ದೊಡ್ಮನೆಗೆ ಮರುಳುತ್ತಾರಾ ಎನ್ನುವುದನ್ನು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿಯೇ ನೋಡಿ ತಿಳಿಯಬೇಕಾಗಿದೆ.
ಎಮರ್ಜೆನ್ಸಿ ಎಕ್ಸಿಟ್ ಮೂಲಕ ತಾಂಡವ್ ಎಲಿಮಿನೇಟ್ ಆಗುತ್ತಲೇ ಹಲವರು ಬಿಗ್ಬಾಸ್ ವಿರುದ್ಧ ಕಿಡಿಕಾರಿದ್ದಾರೆ. ಇದು ಸರಿಯಾದ ಆಯ್ಕೆಯಲ್ಲ. ಇನ್ಮುಂದೆ ಟಿಆರ್ಪಿನೆ ಇರೋದಿಲ್ಲ. ತಾಂಡವ್ ಒಳ್ಳೆ ವ್ಯಕ್ತಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಹೊರಗಿರುವ ಸೀರಿಯಲ್ ನಟ, ನಟಿ ಹಾಗೂ ಬಿಗ್ಬಾಸ್ ಮಾಜಿ ಸ್ಪರ್ಧಿಗಳು ತಾಂಡವ್ ಪರ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಬಿಗ್ಬಾಸ್ನ ಈ ನಿರ್ಧಾರ ಸುಳ್ಳಾಗಿರಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ, (ಏಜೆನ್ಸೀಸ್).