ಸಿನಿವಾಣಿ

ಬಿಗ್​ಬಾಸ್​ನಲ್ಲಿ ಎಲಿಮಿನೇಷನ್​​ ಕಾವು; ಮಿಡ್​ವೀಕ್​ನಲ್ಲಿ ಔಟ್​ ಆಗ್ತಿರೋ ಸ್ಪರ್ಧಿಗಳು ಇವ್ರೇನಾ?..BBK13

  • ಬಿಗ್​ಬಾಸ್​ ಮನೆಯಲ್ಲಿ ಮಿಡ್​ವೀಕ್​ ಎಲಿಮಿನೇಷನ್​​​ ಬಿಸಿ

  • ತಾಂಡವ್, ಜಗದೀಶ್​​, ಸೌಂದರ್ಯ, ಲಿಖಿತ್​ ಪೈಕಿ ಮನೆಯಿಂದ ಹೊರಹೋಗೋದ್ಯಾರು?

  • ಗದ್ದಲದಿಂದ ಕೂಡಿರುತ್ತಿದ್ದ ಮನೆಯಲ್ಲಿ ಎಮರ್ಜೆನ್ಸಿ ಎಕ್ಸಿಟ್ ಕಾವು

 Bigg Boss Kannada: ಇಷ್ಟು ದಿನ ಬಿಗ್​ಬಾಸ್ ಮನೆಯಲ್ಲಿ ಗಲಾಟೆ-ಗದ್ದಲ ಜೋರಾಗಿತ್ತು. ಆದರೆ ಈ ವಾರ ಮಿಡ್​ವೀಕ್​​ ಎಲಿಮಿನೇಷನ್​​ ಪ್ರಕ್ರಿಯೆ ನಡೆಯುತ್ತಿರುವ ಕಾರಣ ಎಕ್ಸಿಟ್​ ಮತ್ತು ಎಮರ್ಜೆನ್ಸಿ ಎಕ್ಸಿಟ್​​ನಿಂದಾಗಿ ಮನೆಯಲ್ಲಿ ಬೇಸರದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲೂ ಜಗ್ಗಿ ಮತ್ತು ತಾಂಡವ್​​​ ಅತ್ತದ್ದನ್ನು ಕಂಡ ಸ್ಪರ್ಧಿಗಳಿಗೆ ದುಃಖ ಉಮ್ಮಳಿಸಿ ಬಂದಿರುವ ದೃಶ್ಯಗಳು ಈಗಷ್ಟೇ ರಿಲೀಸ್ ಆದ ಪ್ರೋಮೋದಲ್ಲಿ ಇದೆ.

ಬಿಗ್​ಬಾಸ್​12ರಲ್ಲಿ ಕೇವಲ ಮೂರೇ ವಾರಕ್ಕೆ ಇಬ್ಬರನ್ನು ವೈಲ್ಡ್ ಕಾರ್ಡ್​ ಎಂಟ್ರಿ ಮೂಲಕ ಕರೆಸಿಕೊಳ್ಳಲಾಗಿತ್ತು. ಆದರೆ, ಈ ಬಾರಿ ಯಾವುದೇ ಎಂಟರ್ಟೈನ್​ಮೆಂಟ್​ ಸಿಗುತ್ತಿಲ್ಲ ಎನ್ನುವುದು ಪ್ರೇಕ್ಷಕರ ದೂರು. ಹೀಗಾಗಿ ಮೂವರು ಮನೆಯಿಂದ ಎಕ್ಸಿಟ್​ ಆಗಲಿದ್ದು, ಇನ್ನೂ ಮೂವರನ್ನು ವೈಲ್ಡ್​​ ಕಾರ್ಡ್​ ಮೂಲಕ ಮನೆಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ ಎನ್ನುವುದು ಚರ್ಚೆಯಾಗುತ್ತಿದೆ.

ಬಿಗ್​ಬಾಸ್​ ಟ್ವಿಸ್ಟ್​ಗೆ ಮನೆ ಮಂದಿ ಸ್ಟನ್​

ಪ್ರೋಮೋದಲ್ಲಿ ಪ್ರಸಾರವಾಗಿರುವಂತೆ, ಎಲಿಮಿನೇಟ್​ ತೂಗುಗತ್ತಿಯಲ್ಲಿ ತಾಂಡವ್​​, ಸೌಂದರ್ಯ, ಜಗದೀಶ್, ಲಿಖಿತ್​ ಇದ್ದಾರೆ. ಅವರಿಗೆ ಕೊನೆಯದಾಗಿ ತಮ್ಮ ಮನದಾಳದ ಮಾತನ್ನು, ನೋವನ್ನು ಸ್ಪರ್ಧಿಗಳು ಬಾಕ್ಸಿಂಗ್ ಬ್ಯಾಗ್ ಬಳಿ ನಿಂತು ಸ್ಪರ್ಧಿಗಳ ಫೋಟೋ ಅಂಟಿಸಿ ಅದಕ್ಕೆ ಹೊಡೆದು ಮನಸ್ಸಿನ ಭಾವನೆಗಳನ್ನು ತೆರೆದಿಡುವ ಟಾಸ್ಕ್​ ಅನ್ನು ಬಿಗ್​ಬಾಸ್​ ನೀಡಿದ್ದಾರೆ.

ಈ ವೇಳೆ ತಾಂಡವ್​ ಮಾತನಾಡಲಾಗುತ್ತಿಲ್ಲ ಎಂದು ಬಾಕ್ಸಿಂಗ್​ ಬ್ಯಾಗ್​ಗೆ ಹೊಡೆದಾಗ ಗಗನ್​ ಚಿನ್ನಪ್ಪ ಇತ್ತ ಕಣ್ಣೀರು ಹರಿಸಿದ್ದು, ಇನ್ನೂ ಜಗದೀಶ್​ ನನಗೆ ಅಂತ ಯಾರು ಸಹ ಇಲ್ಲ ಆದರೂ ಇಲ್ಲಿಯವರೆಗೂ ಬಂದಿದ್ದೇನೆ ಎಂದು ಗೋಗೆರೆದಿದ್ದು ಸದಾ ಗದ್ದಲದಿಂದ ಕೂಡಿರುತ್ತಿದ್ದ ಮನೆಯಲ್ಲಿ ನೀರವ ಮೌನ ಆವರಿಸಿದಂತೆ ಇತ್ತು. ಒಟ್ಟಾರೆಯಾಗಿ ಸ್ಪರ್ಧಿಗಳೆಲ್ಲರು ಭಾವುಕರಾಗಿ ಕಣ್ಣೀರು ಹಾಕುತ್ತಿರುವುದು ಈ ಪ್ರೋಮೋದಲ್ಲಿ ಕಂಡುಬಂದಿದೆ. ಅದಾದ ನಂತರ ಸ್ಪರ್ಧಿಗಳಿಗೆ ಲಕ್ಕಿ ಲಾಕೆಟ್‌ಗಳನ್ನು ಕಳುಹಿಸಿ ಕೊಡಲಾಗಿದೆ. ಇದರಲ್ಲಿ ಮನೆಯಲ್ಲಿ ಯಾರ ಪಯಣ ಕೊನೆಗೊಳ್ಳಲಿದೆ ಎಂಬುದು ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ನೆಟ್ಟಿಗರು ಹೀಗಂದ್ರು?

ಬಹುತೇಕ ಎಕ್ಸ್​ ಬಳಕೆದಾರರು ಈ ವಾರ ಮನೆಯಿಂದ ಔಟ್​ ಆಗುವ ಸ್ಪರ್ಧಿಗಳು ವೈಷ್ಣವಿ, ಲಿಖಿತ್​ ಅವಿನಾಶ್​ ಎಂದು ಉಲ್ಲೇಖಿಸಿದ್ದಾರೆ. ವೈಷ್ಣವಿ ಅವರು ಯಾವುದೇ ಗೇಮ್​​ನಲ್ಲಿ ಗೆಲುವು ಕಂಡಿಲ್ಲ. ಇನ್ನೂ ಅವಿನಾಶ್​ ಅವರು ಕಾಣಿಸಿಕೊಂಡಿಲ್ಲ. ಯಾವುದೋ ಮೂಲೆಯಲ್ಲಿ ಇರುತ್ತಾರೆ. ಇನ್ನೂ ಲಿಖಿತ್​ ಆಟಗಳನ್ನು ಅರ್ಥ ಮಾಡಿಕೊಳ್ಳದೇ, ಗೇಮ್​ ಗೆಲ್ಲದೆ ಕೆಡಿಸುತ್ತಾರೆ. ಹೀಗಾಗಿ ಇವರಿಗೆ ಕಡಿಮ ವೋಟ್ ಬಂದಿರಬಹುದು ಎನ್ನುವುದು ಪ್ರೇಕ್ಷಕರ ಚಿಂತನೆ.

ಇನ್ನೂ ಮತ್ತೊಂದು ಹೆಸರು ಎಂದರೆ ಜಗದೀಶ್​. ಜಗ್ಗಮಮ್ಮಿ ಆಗಿ ಪರಿಚಿತರಾಗಿರುವ ಇವರು ಮನೆಯಲ್ಲಿ ಮೈಂಡ್​ಗೇಮ್ ಆಡುತ್ತಿದ್ದಾರೆ ಎಂದೆನಿಸಿದರೂ ಸಹ ಯಾವುದೇ ಎಂಟರ್ಟೈನ್​ಮೆಂಟ್ ಸಿಗ್ತಿಲ್ಲ ಎನ್ನುವುದು ಹಲವರ ಉದ್ದೇಶ. ಇನ್ನೂ ಕೆಲವರು ಲಿಖಿತ್​, ವೈಷ್ಣವಿ, ಯಶಸ್​ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಈ ವಾರ ಮೂವರು ಸ್ಪರ್ಧಿಗಳು ಯಾರು ಎಲಿಮಿನೇಟ್ ಆಗುತ್ತಿದ್ದಾರೆ. ಯಾರು ಒಳಕ್ಕೆ ಕಾಲಿಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).